ತುಮಕೂರು :  ನಿಷೇಧಿತ ಪ್ಲಾಸ್ಟಿಕ್ ಬಳಕೆ : 88ಸಾವಿರ ರೂ. ದಂಡ!!

ತುಮಕೂರು : 

      ನಗರ ಪಾಲಿಕೆ ಅಧಿಕಾರಿಗಳು ವಿವಿಧ ಉದ್ದಿಮೆ ಅಂಗಡಿಗಳ ಮೇಲೆ ಜನವರಿ 7 ರಂದು ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ.

       ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಮಂಡಿಪೇಟೆಯ ವಿಶಾಲ್ ಅಂಗಡಿ ಮಾಲೀಕರಿಗೆ 50,000/- ರೂ., ಪಟೇಲ್-5,000/- ರೂ., ಕೀಮಾರಾಮ್-10,000/- ರೂ., ಶೋಬಾಸ್ಟೋರ್-10,000/- ರೂ., ಅಬ್ದುಲ್ ಅಜೀಮ್(ಶ್ಯಾಮ್ ಬಟ್ಟೆ ಅಂಗಡಿ)-2,000/- ರೂ., ನವೀದ್ ಪಾಷ-200ರೂ., ಮಂಜುನಾಥ(ವೃಷಭ ಸ್ಟೋರ್ಸ್)-4,000/- ರೂ., ಸಿ.ಎ.ಕೆ. ಸ್ಟೋರ್ಸ್-2,000/- ರೂ. ಹಾಗೂ ಮನೋಹರ್ ಅಂಗಡಿ ಮಾಲೀಕರಿಗೆ 5,000/- ರೂ. ಸೇರಿ ಒಟ್ಟು 88,200/- ರೂ. ದಂಡ ಹಾಕಿದ್ದಾರೆ.

      ಇನ್ನು ಮುಂದೆ ಯಾವುದೇ ಅಂಗಡಿ ಮುಂಗಟ್ಟುಗಳು ಹಾಗೂ ವಾಣಿಜ್ಯ ವಹಿವಾಟುದಾರರು ನಿಷೇಧಿತ ಪ್ಲಾಸ್ಟಿಕ್ ಬಳಕೆ/ ಮಾರಾಟ ಮಾಡುವುದು ಕಂಡುಬಂದಲ್ಲಿ ದಂಡ ಹಾಕುವುದರ ಜೊತೆಗೆ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link