ಜಮ್ಮು -ಕಾಶ್ಮೀರ ಚುನಾವಣೆ : ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ಮನವಿ

ನವದೆಹಲಿ:

     ಜಮ್ಮು-ಕಾಶ್ಮೀರದಲ್ಲಿ ದಶಕ ನಂತರ ಇಂದು ಬುಧವಾರ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಅಲ್ಲಿನ ನಾಗರಿಕರಿಗೆ ಮನವಿ ಮಾಡಿದ್ದಾರೆ. ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರಿಗೆ ವಿಶೇಷವಾಗಿ ಮನವಿ ಮಾಡಿದ್ದಾರೆ.

     ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತವು ಪ್ರಾರಂಭವಾಗುತ್ತಿದ್ದಂತೆ, ಇಂದು ಮತದಾನಕ್ಕೆ ಹೋಗುವ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಮತ್ತು ಪ್ರಜಾಪ್ರಭುತ್ವದ ಹಬ್ಬವನ್ನು ಬಲಪಡಿಸಲು ನಾನು ಒತ್ತಾಯಿಸುತ್ತೇನೆ. ವಿಶೇಷವಾಗಿ ಯುವ ಮತ್ತು ಮೊದಲ ಬಾರಿಗೆ ಮತ ಚಲಾಯಿಸುವರು ತಮ್ಮ ಹಕ್ಕು ಚಲಾಯಿಸಲು ನಾನು ಕರೆ ನೀಡುತ್ತೇನೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೊದಲ ಹಂತದ ಚುನಾವಣೆಯಲ್ಲಿ ಇಂದು 24 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಇವುಗಳಲ್ಲಿ ಜಮ್ಮು ವಿಭಾಗದಲ್ಲಿ ಎಂಟು ಸ್ಥಾನಗಳು ಮತ್ತು ಕಾಶ್ಮೀರ ವಿಭಾಗದಲ್ಲಿ 16 ಸ್ಥಾನಗಳು ಸೇರಿವೆ, 90 ಸ್ವತಂತ್ರರು ಸೇರಿದಂತೆ 219 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

   ಪಂಪೋರ್, ಟ್ರಾಲ್, ಪುಲ್ವಾಮಾ, ರಾಜ್‌ಪೋರಾ, ಜೈನಾಪೋರಾ, ಶೋಪಿಯಾನ್, ಡಿಹೆಚ್ ಪೋರಾ, ಕುಲ್ಗಾಮ್, ದೇವ್‌ಸರ್, ದೂರು, ಕೋಕರ್‌ನಾಗ್ (ಎಸ್‌ಟಿ), ಅನಂತನಾಗ್ ಪಶ್ಚಿಮ, ಅನಂತನಾಗ್, ಶ್ರೀಗುಫ್ವಾರಾ-ಬಿಜ್‌ಬೆಹರಾ, ಶಾಂಗಸ್-ಅನಂತನಾಗ್ ಪೂರ್ವ, ಪಹಲ್‌ಗಾಗ್ , ಇಂದರ್ವಾಲ್, ಕಿಶ್ತ್ವಾರ್, ಪಾಡರ್-ನಾಗ್ಸೇನಿ, ಭದರ್ವಾ, ದೋಡಾ, ದೋಡಾ ವೆಸ್ಟ್, ರಾಂಬನ್ ಮತ್ತು ಬನಿಹಾಲ್.

Recent Articles

spot_img

Related Stories

Share via
Copy link