ಬಸ್‌ ಉತ್ಪಾದನೆಯಲ್ಲಿ ದಿಗ್ಗಜರನ್ನೇ ಹಿಂದಿಕ್ಕಿದ PMI..!

    ಭಾರತ ಸಂಪೂರ್ಣ ಎಲೆಕ್ಟ್ರಿಕ್ ಕ್ರಾಂತಿಗೆ ಒಗ್ಗಿಕೊಳ್ಳುತ್ತಿದೆ  ಇದರ ಭಾಗವಾಗಿ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಕಂಪನಿಯಾದ ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಇಂದು ತನ್ನ 1,000 ನೇ ಎಲೆಕ್ಟ್ರಿಕ್ ಬಸ್‌ನ ವಿತರಣೆಯನ್ನು ಘೋಷಿಸಿತು. PMI ಈ ಸಾಧನೆ ಮಾಡಿದ ದೇಶದ ಮೊದಲ ಇ-ಬಸ್ ಕಂಪನಿಯಾಗಿದೆ.

    ಸದ್ಯ ಎಲೆಕ್ಟ್ರಿಕ್ ವಾಹನಗಳ ತಯಾರಿಯಲ್ಲಿ ಈ ಕಂಪನಿಯು ಮುನ್ನುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವಾಹನಗಳನ್ನು ಬಳಕೆಗೆ ತರುವ ಮೂಲಕ ಶೀಘ್ರದಲ್ಲೇ ಡೀಸಲ್ ಬಸ್‌ಗಳ ಸ್ಥಾನವನ್ನು ಆಕ್ರಮಿಸಲಿದೆ. ಈಗ FAME II ಯೋಜನೆಯ ಅಡಿಯಲ್ಲಿ ವಿತರಿಸಲಾದ, PMI ಯ 1,000 ನೇ ಎಲೆಕ್ಟ್ರಿಕ್ ಬಸ್‌ಗೆ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಡಾ.ಮಹೇಂದ್ರನಾಥ್ ಪಾಂಡೆ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಚಾಲನೆ ನೀಡಿದರು.

      PMI ಎಲೆಕ್ಟ್ರೋ ಮೊಬಿಲಿಟಿಯ 1,000 ನೇ ಎಲೆಕ್ಟ್ರಿಕ್ ಬಸ್, ಉತ್ತರ ಪ್ರದೇಶದ ಸಾರಿಗೆ ನಿರ್ದೇಶನಾಲಯಕ್ಕೆ ತಲುಪಿಸಲಾಗಿದೆ, ಭಾರತದಲ್ಲಿ ಕಂಪನಿಯ ಉಪಸ್ಥಿತಿಯನ್ನು ಬಲಪಡಿಸುತ್ತದೆ. ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಸರ್ಕಾರದ ಗುರಿಗೆ ಗಣನೀಯ ಕೊಡುಗೆ ನೀಡುತ್ತದೆ. ಇದರೊಂದಿಗೆ, ಎಲೆಕ್ಟ್ರಿಕ್ ಬಸ್ ವಿಭಾಗದಲ್ಲಿ PMI ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಅಲ್ಲದೇ ದೇಶವು ಇಂಧನಗಳ ಮೇಲೆ ಅವಲಂಭನೆಯಾಗಿರುವುದನ್ನು ಕಡಿಮೆ ಮಾಡಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ.

Recent Articles

spot_img

Related Stories

Share via
Copy link
Powered by Social Snap