1 ಕೋಟಿ ಮೌಲ್ಯದ ಹಳೆ ನೋಟುಗಳ ವಶ!!

  ಬೆಂಗಳೂರು:

    ನಿಷೇಧವಾಗಿರುವ ಹಳೆಯ 500 ಹಾಗೂ 1000 ರೂ. ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತನೆ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

      ಈ ಗ್ಯಾಂಗ್ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಮತ್ತೆ ಚಲಾವಣೆಗೆ ಬರುತ್ತವೆ ಎಂದು ಸಾರ್ವಜನಿಕರನ್ನು ನಂಬಿಸುತ್ತಿತ್ತು. 25 ಲಕ್ಷ ರೂಪಾಯಿ ಕೊಟ್ರೆ, ನಾವು ನಿಮಗೆ 1 ಕೋಟಿ ಹಳೆಯ ನೋಟುಗಳನ್ನು ಕೊಡ್ತಿವಿ. ಮುಂದಿನ ಸರ್ಕಾರದಲ್ಲಿ ಹಳೆಯ ನೋಟುಗಳು ಚಲಾವಣೆಗೆ ಬರುತ್ತವೆ. ಆಗ ನಿಮಗೆ 75 ಲಕ್ಷ ರೂ. ಲಾಭವಾಗುತ್ತದೆ ಎಂದು ಹೇಳುವ ಮೂಲಕ ತಮ್ಮ ಬಳಿ ಇದ್ದ ಹಳೆಯ ನೋಟುಗಳನ್ನು ಬದಲಾವಣೆ ಮಾಡಲು ಮುಂದಾಗಿದ್ದರು.

     ಈ ಗ್ಯಾಂಗ್‍ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಇಂದು ಐವರು ಆರೋಪಿಗಳು ಸಿಕ್ಕಿಬಿದ್ದಿದ್ದು, ಹಣ ಎಲ್ಲಿಂದ ಬಂತು, ಯಾರಿಗೆ ವರ್ಗಾವಣೆ ಮಾಡಲಾಗ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

      500 ರೂ. ಮತ್ತು 100 ಮುಖಬೆಲೆ ಹಳೆ ನೋಟು ಬ್ಯಾನ್ ಆಗಿ ಎರಡು ವರ್ಷ ಕಳೆದರೂ ಬೆಂಗಳೂರಿನಲ್ಲಿ ಬ್ಲಾಕ್ ಅಂಡ್ ವೈಟ್ ದಂಧೆ ಇನ್ನೂ ನಿಂತಿಲ್ಲ.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap