ಹಾಕಿ ಆಟಗಾರನ ವಿರುದ್ಧದ ಪೋಕ್ಸೋ ಪ್ರಕರಣ : ಖಾಲಿ ಕೈಯಲ್ಲಿ ವಾಪಸ್ಸಾದ ಪೊಲೀಸರು

ಬೆಂಗಳೂರು:

     ಪೋಕ್ಸೋ ಪ್ರಕರಣದಲ್ಲಿ ಬೆಂಗಳೂರು ಪೊಲೀಸರಿಗೆ ಬೇಕಾಗಿರುವ ಭಾರತೀಯ ಹಾಕಿ ಆಟಗಾರ ವರುಣ್ ಕುಮಾರ್ (28) ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಅವರ ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸರ ತಂಡ ಖಾಲಿ ಕೈಯಲ್ಲಿ ವಾಪಸಾಗಿದ್ದಾರೆ ಎಂದು ತಿಳಿದುಬಂದಿದೆ.

    ವರುಣ್ ಕುಮಾರ್ ರನ್ನು ಕರೆತರಲು ತೆರಳಿದ್ದ ಎರಡು ಪೊಲೀಸ್ ತಂಡಗಳು ಬರಿಗೈಯಲ್ಲಿ ವಾಪಸಾಗಿದ್ದಾರೆ. ವರುಣ್ ಕುಮಾರ್ ಬಂಧನಕ್ಕೆ ಇನ್ನೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಎಸ್ ಗಿರೀಶ್ TNIE ಗೆ ತಿಳಿಸಿದ್ದಾರೆ. ಆತನನ್ನು ಬಂಧಿಸಲು ಎರಡು ತಂಡಗಳನ್ನು ಕಳುಹಿಸಲಾಗಿತ್ತು. ಎರಡೂ ತಂಡಗಳು ಬರಿಗೈಯಲ್ಲಿ ವಾಪಸಾಗಿವೆ ಎಂದು ಅವರು ಹೇಳಿದರು.ಅರ್ಜುನ ಪ್ರಶಸ್ತಿ ಪುರಸ್ಕೃತರಾದ ವರುಣ್ ಕುಮಾರ್ ಪಂಜಾಬ್ ಪೊಲೀಸ್‌ನಲ್ಲಿ ಡಿಎಸ್‌ಪಿ ಶ್ರೇಣಿಯ ಅಧಿಕಾರಿಯೂ ಆಗಿದ್ದಾರೆ. ಹೈದರಾಬಾದ್‌ನ 21 ವರ್ಷದ ವೃತ್ತಿಪರ ವಾಲಿಬಾಲ್ ಆಟಗಾರ್ತಿಯೊಬ್ಬರು ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದರು. ಫೆಬ್ರವರಿ 5 ರಂದು ಬದುಕುಳಿದವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ವರುಣ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದರು. ಪೋಕ್ಸೋ ಜೊತೆಗೆ ಜ್ಞಾನಭಾರತಿ ಪೊಲೀಸರು ಆತನ ಮೇಲೆ ಅತ್ಯಾಚಾರ ಮತ್ತು ವಂಚನೆ ಆರೋಪವನ್ನೂ ದಾಖಲಿಸಿದ್ದಾರೆ.

    ವರುಣ್ ತಾನು ಅಪ್ರಾಪ್ತ ವಯಸ್ಕಳೆಂದು ತಿಳಿದೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ತಾನು 16 ವರ್ಷ ವಯಸ್ಸಿನವಳಾಗಿದ್ದಾಗ 2017 ರಲ್ಲಿ SAI ನಲ್ಲಿ ವಾಲಿಬಾಲ್ ತರಬೇತಿಗಾಗಿ ಬಂದಿದ್ದೆ. SAI ಆವರಣದಲ್ಲಿರುವ ಮಹಿಳಾ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. 2018 ರಲ್ಲಿ ವರುಣ್ ತರಬೇತಿಗಾಗಿ SAI ಗೆ ಬಂದರು. ಇನ್ಸ್ಟಾಗ್ರಾಮ್ ಮೂಲಕ ವರುಣ್ ನನ್ನ ಸಂಪರ್ಕಕ್ಕೆ ಬಂದರು.  ತನ್ನ ಸ್ನೇಹಿತರ ಮೂಲಕ ನನ್ನನ್ನು ಭೇಟಿಯಾಗಲು ಯತ್ನಿಸಿದ್ದ ಎಂದು ಆರೋಪಿಸಿದ್ದಾರೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ. 

   ಜಯನಗರದಲ್ಲಿ ರಾತ್ರಿ ಊಟಕ್ಕೆ ಕರೆದುಕೊಂಡು ಹೋಗಿ ಹೋಟೆಲ್‌ನಲ್ಲಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಕಳೆದ ಐದು ವರ್ಷಗಳಿಂದ ಇವರಿಬ್ಬರ ನಡುವೆ ಸಂಬಂಧವಿತ್ತು ಎಂದು ಆರೋಪಿಸಿದ್ದಾರೆ. ಆಕೆ ವರುಣ್‌ನನ್ನು ಮದುವೆಗೆ ಒತ್ತಾಯಿಸಲು ಪ್ರಾರಂಭಿಸಿದಾಗ, ಆತ ತಮ್ಮಬ್ಬಿರ ನಡುವಿನ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆಕೆ ಆರೋಪಿಸಿದ್ದಾರೆ. ಅಲ್ಲದೆ ಈಗ ತನ್ನ ಕರೆ ಮತ್ತು ಮಸೆಜ್ ಗಳಿಗೂ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದಾನೆ ಎಂದು ಆರೋಪಿಸಿದ್ದಾರೆ.

   ಹಿಮಾಚಲ ಪ್ರದೇಶದವರಾದ ವರುಣ್ ಹಾಕಿಗಾಗಿ ಪಂಜಾಬ್‌ಗೆ ತೆರಳಿದ್ದರು. ಪ್ರಕರಣದ ತನಿಖೆಗಳು ನಡೆಯುತ್ತಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap