ಮುಸ್ಲಿಂ ಯುವಕನಿಂದ ಕೊಲೆಯಾದ ಗವಿಸಿದ್ದಪ್ಪ ಸೇರಿ ನಾಲ್ವರ ವಿರುದ್ಧ ಪೋಕ್ಸೋ ಕೇಸ್

ಕೊಪ್ಪಳ:

    ಜಿಲ್ಲೆಯಲ್ಲಿ ನಡೆದ ಗವಿಸಿದ್ದಪ್ಪ ನಾಯಕ ಕೊಲೆ  ಪ್ರಕರಣಕ್ಕೆ ಟ್ವಿಸ್ಟ್ ಎನ್ನುವಂತೆ ಕೊಲೆಯಾದ ಗವಿಸಿದ್ದಪ್ಪ ನಾಯಕ ವಿರುದ್ಧ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.‌ ಗವಿಸಿದ್ದಪ್ಪ ಹತ್ಯೆಗೆ ಕಾರಣ ಎನ್ನಲಾದ ಬಾಲಕಿಯ ತಾಯಿ ಈ ಸಂಬಂಧ ಕೊಪ್ಪಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಪ್ರಾಪ್ತೆ ತಾಯಿ ನೀಡಿದ ದೂರಿನ ಹಿನ್ನಲೆಯಲ್ಲಿ ಕೊಲೆಯಾದ ಗವಿಸಿದ್ದಪ್ಪ ನಾಯಕ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.

   ತಮ್ಮ ಮಗಳು ಅಪ್ರಾಪ್ತಳಾಗಿದ್ದು, ಕೊಲೆಯಾದ ಗವಿನಾಯಕ ಪ್ರೀತಿಸುವುದಾಗಿ ಹಿಂದೆ ಬಿದ್ದಿದ್ದ. ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ನನಗೆ ಜೀವಬೆದರಿಕೆ ಹಾಕಿದ್ದ. ಮಗಳ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ಬಗ್ಗೆ ಆತನ ತಂದೆ, ತಾಯಿ, ಪಾಲಕರಿಗೆ ತಿಳಿಸಿದರೂ ಅವರೂ ಜೀವ ಬೆದರಿಕೆ ಹಾಕಿದ್ದರೆಂದು ಕೊಲೆಯಾದ ಗವಿಸಿದ್ದಪ್ಪ ನಾಯಕ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಹತ್ಯೆಯಾದ ಗವಿಸಿದ್ದಪ್ಪ ನಾಯಕ, ಗವಿಸಿದ್ದಪ್ಪ ತಂದೆ ನಿಂಗಜ್ಜ ನಾಯಕ, ತಾಯಿ ದೇವಮ್ಮ, ಸಹೋದರಿ ಅನ್ನಪೂರ್ಣ ವಿರುದ್ಧ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.

    ಆಗಸ್ಟ್ 3ರಂದು ಕೊಪ್ಪಳದ ವಾರ್ಡ್ ನಂ.3ರಲ್ಲಿ ಗವಿಸಿದ್ದಪ್ಪ ನಾಯಕ ಹತ್ಯೆಯಾಗಿತ್ತು. ರಾಜಕೀಯ ಜಟಾಪಟಿಗೆ ಕಾರಣವಾಗಿದ್ದ ಗವಿಸಿದ್ದಪ್ಪ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿತ್ತು. ಮುಸ್ಲಿಂ ಬಾಲಕಿ ಜೊತೆಗಿನ ಪ್ರೀತಿ ಹಿನ್ನೆಲೆಯಲ್ಲಿ ಸಾದಿಕ್ ಎಂಬಾತ ಗವಿಸಿದ್ದಪ್ಪನನ್ನು ಮಸೀದಿ ಮುಂದೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಾಲಕಿಯ ತಾಯಿ ಗವಿಸಿದ್ದಪ್ಪನ ಹತ್ಯೆಯಲ್ಲಿ ನನ್ನ ಮಗಳ ಪಾತ್ರವಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

Recent Articles

spot_img

Related Stories

Share via
Copy link