ತಮಿಳುನಾಡು:
ಹೀರೋಗಳು, ನಿರ್ದೇಶಕರು ತಮ್ಮ ಮಕ್ಕಳನ್ನು ಪರಿಚಯಿಸೋದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಅನೇಕ ಸ್ಟಾರ್ ಹೀರೋಗಳು, ನಿರ್ದೇಶಕರು ಈ ರೀತಿ ಮಾಡಿದ್ದಾರೆ. ಈಗ ನಟ, ಕೊರಿಯೋಗ್ರಾಫರ್, ನಿರ್ದೇಶಕ ಪ್ರಭುದೇವ ಅವರು ತಮ್ಮ ಮಗ ರಿಷಿಯನ್ನು ಪರಿಚಯಿಸಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಿಷಿ ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ
ಇತ್ತೀಚೆಗೆ ಪ್ರಭುದೇವ ಅವರು ಚೆನ್ನೈನಲ್ಲಿ ಡ್ಯಾನ್ಸ್ ಕಾನ್ಸರ್ಟ್ ನಡೆಸಿದ್ದಾರೆ. ಈ ವೇದಿಕೆ ಮೇಲೆ ಮಗನ ಪರಿಚಯಿಸಿದ್ದಾರೆ. ತಂದೆಯ ರೀತಿಯೇ ರಿಷಿ ದೇವ ಕೂಡ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಪ್ರಭುದೇವ ಅವರಿಗೆ ಮಗನ ಬಗ್ಗೆ ಹೆಮ್ಮೆ ಇದೆ. ತಂದೆಯಂತೆ ಸ್ಟೆಪ್ಗಳನ್ನು ಕಲಿತು ರಿಷಿ ಡ್ಯಾನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ.
