ಆಗ್ರಾ :
ತೀವ್ರ ವಾಯು ಮಾಲಿನ್ಯದಿಂದ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಉಸಿರಾಡುವುದು ಕೂಡ ಪ್ರಯಾಸಕರವಾಗಿದ್ದು, ದಿನೇ ದಿನೇ ಗಾಳಿಯ ಗುಣಮಟ್ಟ ಹದಗೆಡ್ತಾ ಇದೆ. ಜನಸಾಮಾನ್ಯರಿಗೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡ್ತಾ ಇವೆ.
ಹಾಗಾಗಿ ತಾಜ್ ಮಹಲ್ ನಂತಹ ಸ್ಮಾರಕಗಳಿಗೆ ಕೂಡ ಮಾಲಿನ್ಯದ ಆತಂಕ ಎದುರಾಗಿದ್ದು, ಸ್ಮಾರಕ ಶ್ವೇತವರ್ಣದ ಮಾರ್ಬಲ್ಸ್ಗಳಿಂದ ಕೂಡಿದ್ದು, ವಾಯುಮಾಲಿನ್ಯದಿಂದ ಅವುಗಳ ಅಂದಕ್ಕೆ ಹಾನಿಯಾಗುವ ಸಾಧ್ಯೆತೆಯಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯು ಏರ್ ಪ್ಯೂರಿಫೈಯರ್ ವಾಹನವೊಂದನ್ನು ತಾಜ್ ಮಹಲ್ ಬಳಿ ನಿಯೋಜಿಸಿದೆ.
ಈ ಪ್ಯೂರಿಫೈಯರ್ 300 ಮೀಟರ್ ವಿಸ್ತೀರ್ಣದಲ್ಲಿ 8 ಗಂಟೆಗಳ ಅವಧಿಯಲ್ಲಿ 15 ಲಕ್ಷ ಕ್ಯೂಬಿಕ್ ಮೀಟರ್ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ ಎಂದು ಮಂಡಳಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
