2020ರ ಮೊದಲ ತ್ರೈಮಾಸಸಿಕದಲ್ಲಿ ದೇಶಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಆಡಿ ಎ8 ಎಲ್…!

ತುಮಕೂರು :

     ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚಿನಿಂದಲೂ ಐಷಾರಾಮಿ ಕಾರು ತಯಾರಿಕೆಯಲ್ಲಿ ಹೇಸರು ಮಾಡಿರು ಕಂಪನಿ ಆಡಿ ,ಈ ಕಂಪನಿಯೂ ತಾನು ಬಿಡುಗಡೆ ಮಾಡುವ ಎಲ್ಲಾ ಕಾರುಗಳಲ್ಲಿ ಏನಾದರೊಂದು ಹೊಸ ಆವಿಷ್ಕಾರ ಅಥವಾ ಹೊಸತನವನ್ನು ಪರಿಚಯಿಸುವ ಆಡಿ ಈ ಬಾರಿಯೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ತಂತ್ರಜ್ಞಾನ ಹಾಗು ಅಪ್ ಡೇಟೆಡ್ ವಿನ್ಯಾಸದೊಂದಿಗೆ ತನ್ನ ಪ್ರಸಿದ್ಧ ಕಾರಾದ ೆ8 ಎಲ್ ಅನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದೆ.

   ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿರುವ ಮಾದರಿಗಿಂತ 37 ಎಂಎಂ ಉದ್ದ ಮತ್ತು 17 ಎಂಎಂ ಎತ್ತರವನ್ನು ಹೊಂದಿದೆ. ಹೊಸ ಆಡಿ ಎ8 ಎಲ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.10 ಕೋಟಿಯಾಗಿದೆ.

   ಹೊಸ ಆಡಿ ಎ8 ಎಲ್ ಹಿಂದಿನ ಮಾದರಿಗಿಂತ ಆಕರ್ಷಕ ಲುಕ್ ಅನ್ನು ಹೊಂದಿದೆ. ಸುಧಾರಿತ ಮುಂಭಾಗ ಗ್ರಿಲ್ ಸ್ಲಿಕ್ ಹೆಚ್‍ಡಿ ಮ್ಯಾಟ್ರಿಕ್ಸ್ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದೆ.ಇನ್ನು ಇದರ ಪೂರ್ತಿ ದೇಹದಲ್ಲಿ ಅವಬಶ್ಯಕತೆಗೆ ತಕ್ಕಂತೆ  ಕ್ರೋಮ್ ಅಳವಡಿಕೆ .

    ಅಂದವಾಗಿ ವಿನ್ಯಾಸಗೊಳಿಸಲಾದ ಹಿಂಭಾಗದಲ್ಲಿ ಸ್ಲಿಮ್ ಎಲ್‍ಇಡಿ ಟೇಲ್ ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ. ಕಾರಿನ ಇಂಟಿರಿಯರ್‍‍ನಲ್ಲಿ ವರ್ಚುವಲ್ ಕಾಕ್‍‍ಪಿಟ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮಧ್ಯದ ಕನ್ಸೋಲ್‍ನಲ್ಲಿ 10.1 ಇಂಚಿನ ಇನ್ಫೋಟೇನ್‍‍ಮೆಂಟ್ ಟಚ್‍‍ಸ್ಕ್ರೀನ್ ಮತ್ತು ಕ್ಲೈಮೆಂಟ್ ಕಂಟ್ರೂಲ್ ಮತ್ತು ಮಲ್ಟಿಮೀಡಿಯಾ ಸ್ಕ್ರೀನ್ ಅನ್ನು ಹೊಂದಿದೆ.ಹೊಸ ಕಾರಿನಲ್ಲಿ ವಿವಿಧ ರೀತಿಯ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ 3.0 ಲೀಟರ್ ವಿ6 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ. ಇನ್ನೂ 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ.

     ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರು 6.3 ಲೀಟರ್ ಡಬ್ಲ್ಯು 12 ಲಾಂಗಿಟ್ಯೂಡಿನಲ್ ಎಂಜಿನ್‌ ಅನ್ನು ಹೊಂದಿದೆ. ಇದು 12-ಸಿಲಿಂಡರ್ ಎಂಜಿನ್ ಆಗಿದ್ದು ಅದನ್ನು ಡಬ್ಲ್ಯೂ-ಓರಿಯಂಟೇಶನ್‌ನಲ್ಲಿ ಇರಿಸಲಾಗಿದೆ.ಈ ಎಂಜಿನ್ 6,200 ಆರ್‍‍ಪಿಎಂನಲ್ಲಿ 500 ಬಿ‍‍ಹೆಚ್‍‍ಪಿ ಪವರ್ ಮತ್ತು 4,750 ಆರ್‍‍‍ಪಿಎಂನಲ್ಲಿ 625 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆಡಿ ಎ8 ಎಲ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap