ಸಿದ್ದರಾಮಯ್ಯಗೆ ಶರದ್‌ ಪವಾರ್‌ ಪತ್ರ…!

ಬೆಂಗಳೂರು

    ಎನ್‌ಸಿಪಿ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಶರದ್ ಪವಾರ್ ನೇತೃತ್ವದಲ್ಲಿ ಧಂಗರ್ ಸಮುದಾಯವು ಭಾನುವಾರ ಪುಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಿದೆ ಎಂದು ಸಿಎಂ ಕಚೇರಿ ಅಧಿಕೃತ ಪ್ರಕಟಣೆ ತಿಳಿಸಿದೆ.

    ದೊರೆ ಅಹಲ್ಯಾದೇವಿ ಜನ್ಮದಿನದ ಸಂದರ್ಭದಲ್ಲಿ ಈ ಸನ್ಮಾನ ನಡೆಯಲಿದೆ. ಪವಾರ್ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಹ್ವಾನ ನೀಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತೀಚಿನ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಜಾತ್ಯತೀತ ಶಕ್ತಿಗಳ ಬಲವನ್ನು ಪ್ರದರ್ಶಿಸಿವೆ ಮತ್ತು ರಾಷ್ಟ್ರದ ರಾಜಕೀಯ ಚಲನವಲನದಲ್ಲಿ ಬದಲಾವಣೆಗೆ ದಾರಿ ಮಾಡಿಕೊಟ್ಟಿವೆ ಎಂದು ಅವರು ಹೇಳಿದ್ದಾರೆ.

    ಚುನಾವಣೆ ಪ್ರತಿಧ್ವನಿಯು ಮಹಾರಾಷ್ಟçಕ್ಕೂ ವ್ಯಾಪಿಸಿದ್ದು, ಅಲ್ಲಿನ ಜನರು ತಮ್ಮನ್ನು ಸನ್ಮಾನಿಸುವ ಉತ್ಸಾಹದಲ್ಲಿದ್ದಾರೆ. ಪುಣೆ ಜಿಲ್ಲೆಯ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಅಹಲ್ಯಾದೇವಿ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾಸ್ ಡಿಯೋಕಾಟೆ ನೇತೃತ್ವದ ನಿಯೋಗ ಅಹಲ್ಯಾದೇವಿ ಜನ್ಮ ದಿನಾಚರಣೆಯ ಆಹ್ವಾನ ನೀಡಲಿದೆ ಎಂದು ಅವರು ತಿಳಿಸಿದ್ದಾರೆ

 

Recent Articles

spot_img

Related Stories

Share via
Copy link
Powered by Social Snap