ಬೆಂಗಳೂರು:
ದೇಶದ 133 ನಗರಗಳು ಹಾಗೂ ರಾಜ್ಯದ 24 ನಗರಗಳಲ್ಲಿ ಭಾನುವಾರ ಕಾಮೆಡ್–ಕೆ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಇದೇ 27ರಂದು ಅಭ್ಯರ್ಥಿಗಳಿಗೆ ಅಂಕಪಟ್ಟಿ ಕಳುಹಿಸಿಕೊಡಲಾಗುತ್ತದೆ.
ಖಾಸಗಿ ವೃತ್ತಿಪರ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಸೇರಿದಂತೆ ಮತ್ತಿತರ ಕೋರ್ಸ್‌ಗಳಿಗೆ ಪ್ರವೇಶಾತಿ ಕಲ್ಪಿಸುವ ಕಾಮೆಡ್-ಕೆ (ಯುಜಿಇಟಿ) ಆನ್‌ಲೈನ್ ಪ್ರವೇಶ ಪರೀಕ್ಷೆಗೆ 58,834 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ.83.85 ಹಾಜರಾತಿ ಕಂಡು ಬಂದಿದೆ. ಈ ಬಾರಿ ಒಟ್ಟು 70,163 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.
ರಾಜ್ಯದ 90 ಪರೀಕ್ಷಾ ಕೇಂದ್ರಗಳ ಸಹಿತ ದೇಶದ 248 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. ತಾತ್ಕಾಲಿಕ ಕೀ ಉತ್ತರವನ್ನು ಮತ್ತು ಅದಕ್ಕೆ ಆಕ್ಷೇಪ ಸಲ್ಲಿಸುವ ಅರ್ಜಿ ನಮೂನೆಯನ್ನು ಇದೇ 16ರಂದು ಕಾಮೆಡ್–ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. 24ರಂದು ಅಂತಿಮ ಕೀ ಉತ್ತರ ಲಭ್ಯವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ