ಶಿರಸಿ:
ಸೆ.5 ಶುಕ್ರವಾರ ನಡೆದ ಏರ್ ಗನ್ ಶೂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ತಾಲೂಕು ಚಿಪಗಿ, ಸೋಮನಹಳ್ಳಿಯಲ್ಲಿ ನಡೆದ ದುರಂತ ಘಟನೆಯಲ್ಲಿ 9 ವರ್ಷದ ಬಾಲಕ ಮೃತಪಟ್ಟಿದ್ದು ವರದಿಯಾಗಿತ್ತು.
ಮೃತ ಬಾಲಕನ ತಾಯಿ ಪವಿತ್ರಾ ಬಸಪ್ಪ ಉoಡಿ ನೀಡಿದ ದೂರಿನ ಅನ್ವಯ ನಿತೀಶ ಲಕ್ಷ್ಮಣ ಗೌಡ (40) ಸಾ| ಸದಾಶಿವಳ್ಳಿ ತಾ; ಶಿರಸಿ ಹಾಗೂ ರಾಘವ ಕೇಶವ ಹೆಗಡೆ (62)ಸಾ| ಸೋಮನಹಳ್ಳಿ ,ಚಿಪಗಿ ತಾ| ಶಿರಸಿ ಎಂಬಿಬ್ಬರನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಮೃತ ಬಾಲಕನ ತಾಯಿ ಪವಿತ್ರಾ, ಆರೋಪಿಗಳಲ್ಲೊಬ್ಬನಾದ ನಿತೀಶ ಗೌಡ, ತನ್ನ ಮಕ್ಕಳ ಬಗ್ಗೆ ದ್ವೇಷ ಭಾವದಿಂದ ಈ ಕೃತ್ಯ ಎಸಗಿದ್ದಾನೆಂದು ದೂರಿದ್ದಾರೆ. ಈ ನಡುವೆ ಆರೋಪಿ ನಿತೀಶ ಗೌಡನ ಎಡಗೈ ಸ್ವಾಧೀನ ಇಲ್ಲವಾಗಿದ್ದು ಈತನ ಕೈಗೆ ಏರ್ ಗನ್ ನೀಡಿರುವುದು ಇಲ್ಲಿ ಚರ್ಚೆಗೆ ಕಾರಣವಾಗಿದೆ.
ಘಟನೆ ಬಗ್ಗೆ ಬೆಳಿಗ್ಗೆ ವರದಿಯಾದಾಗ ಮಕ್ಕಳು ಆಟವಾಡುತ್ತಿರುವಾಗ ಮಿಸ್ ಫೈರ್ ಬಗ್ಗೆ ಅನುಮಾನಿಸಲಾಗಿತ್ತು. ಆದರೆ ಈಗ ಶಿರಸಿ ಪೊಲೀಸರ ಸಮರ್ಥ- ತೀವ್ರ ತನಿಖೆಯಿಂದ ಪ್ರಕರಣ ತಿರುವು ಪಡೆದುಕೊಂಡಿದೆ.ಡಿಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮಾರ್ಗದರ್ಶನ,ಸಿಪಿಐ ಶಶಿಕಾಂತ ವರ್ಮಾ ನೇತೃತ್ವದಲ್ಲಿ, ಪಿಎಸ್ಐ ಗಳಾದ ಸಂತೋಷ ಕುಮಾರ್ ಹಾಗೂ ಅಶೋಕ ರಾಥೋಡ್ ತನಿಖೆ ಮುಂದುವರಿಸಿದ್ದಾರೆ.








