ಸ್ಮಶಾನದ ಕಾಂಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ : ಪ್ರಮೋದ್ ಮುತಾಲಿಕ್ ಆರೋಪ

ಹುಬ್ಬಳ್ಳಿ:

   ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿರುವ ಹಿಂದೂ ಸ್ಮಶಾನದ ಕಾಂಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ​ ಮಾಡಲಾಗಿದೆ ಎಂದಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಕ್ಯಾಂಟೀನ್ ನಿರ್ಮಾಣದ ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂದು ಶಾಸಕ ಅಬ್ಬಯ್ಯ ದರ್ಪ ತೋರಿದ್ದಾರೆ ಎಂದು ಹೇಳಿದ್ದಾರೆ.

   ಹಿಂದೂ ಸ್ಮಶಾನದ ಕಾಂಪೌಂಡ್ ಒಡೆದು ಎರಡೇ ದಿನದಲ್ಲಿ ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್ ಕಟ್ಟಿದ್ದಾರೆ. ಕೂಡಲೇ ಕ್ಯಾಂಟೀನ್ ಕಟ್ಟಡದ ಸ್ಥಳಾಂತರ ಮಾಡುವಂತೆ ಆಗ್ರಹ ಮಾಡಲಾಗಿದೆ. ಇಲ್ಲದಿದ್ದರೆ ನಾವೇ ಇಂದಿರಾ ಕ್ಯಾಂಟೀನ್​​​ ತೆರವು ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್​ ಹೇಳಿಕೆ ನೀಡಿದ್ದಾರೆ.

   ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅವರು ಏನು ಮಾಡಿದರೂ ನಡೆಯತ್ತದೆ ಅನ್ನೋದು ಅವರಿಗೆ ಶೋಭೆ ತರುವಂಥದ್ದಲ್ಲ. ನಿಮಗೆ ತಾಕತ್ ಇದ್ದರೆ ಮುಸ್ಲಿಂ ಕಬರಸ್ತಾನದಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟಿ ಎಂದು ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

   ನೀವು ದಲಿತರ ವೋಟ್ ಮೇಲೆ ಗೆದ್ದಿದ್ದೀರಿ, ದಲಿತರಿಗೆ ಅನ್ಯಾಯ ಮಾಡುತ್ತಿದ್ದೀರಿ. ಇವತ್ತು ಇಂದಿರಾ ಕ್ಯಾಂಟಿನ್, ನಾಳೆ ಅಬ್ಬಯ್ಯ ಕ್ಯಾಂಟಿನ್ ಕಟ್ಟುತ್ತೀರಿ. ಕೂಡಲೇ ಇಂದಿರಾ ಕ್ಯಾಂಟಿನ್ ಕಟ್ಟಡವನ್ನು ಸ್ಥಳಾಂತರ ಮಾಡಿ. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಇಲ್ಲಿನ ದಲಿತರಿಗೆ ತೊಂದರೆ ಕೊಡುತ್ತಿದ್ದೀರಿ. ಇಲ್ಲದಿದ್ದರೆ ನಾವೇ ತೆರವು ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಮರು ಸವಾಲ್ ಹಾಕಿದ್ದಾರೆ. ಯಾಕೆ ಸಂಘರ್ಷಕ್ಕೆ ಕರೆಯುತ್ತಿದ್ದೀರಿ? ಬಿ.ಸಿ. ರೋಡ್ ಏನು ಪಾಕಿಸ್ತಾನದಲ್ಲಿ, ಅಪಘಾನಿಸ್ತನದಲ್ಲಿದೆಯಾ? ಬಿ.ಸಿ ರೋಡ್ ಅಲ್ಲ ಇಡೀ ದೇಶವೇ ನಮ್ಮದು. ಸವಾಲ್ ಹಾಕಿದ ಗೂಂಡಾಗಳನ್ನು ಒದ್ದು ಒಳಗಡೆ ಹಾಕಬೇಕಿತ್ತು. ಕಾಂಗ್ರೆಸ್ ಸರ್ಕಾರವೇ ಇದಕ್ಕೆಲ್ಲ ಕಾರಣ. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಮುಸ್ಲಿಂ ಸರ್ಕಾರ ಬಂದಿದೆ ಅನ್ನೋ ಸೊಕ್ಕಿನಿಂದ ಇದೆಲ್ಲ ಮಾಡುತ್ತಿದ್ದಾರೆ. ಬಿಸಿ ರೋಡ್ ಮಾತ್ರ ಅಲ್ಲ, ಶ್ರೀನಗರದಲ್ಲಿಯೂ ದ್ವಜ ಹಾರಿಸಿದ್ದೇವೆ. ಬಿ.ಸಿ ರೋಡ್ ಅಲ್ಲ ನಿಮ್ಮ ಮನೆಯ ಒಳಗೂ ಬರುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

   ಕಾಂಗ್ರೆಸ್ ತುಷ್ಟೀಕರಣ ಅತೀಯಾಗಿದೆ. ಅವರು 136 ಸೀಟ್ ಬಂದಿರೋದು ಮುಸ್ಲಿಮರಿಂದ ಅಂದುಕೊಂಡಿದ್ದಾರೆ. ಹೀಗೆ ಮುಂದುವರೆದರೆ ನೀವು ಕಸದ ಬುಟ್ಟಿಗೆ ಹೋಗುತ್ತೀರಿ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಕಾರಣಕ್ಕೆ ಮನಸಿಗೆ ಬಂದಂತೆ ಹೇಳಿಕೆ ನೀಡಬಾರದು. ಹಿಂದೂಗಳು ಎಲ್ಲದಕ್ಕೂ ಉತ್ತರ ನೀಡಲು ಸಿದ್ಧವಾಗಿದ್ದಾರೆ ಎಂದಿದ್ದಾರೆ.

Recent Articles

spot_img

Related Stories

Share via
Copy link