ಮೈಸೂರು :
ಮಸೀದಿಗಳ ಮೇಲಿನ ಧ್ವನಿವರ್ಧಕಗಳ ವಿಚಾರದಲ್ಲಿ ಮುಸ್ಲಿಂ ಸಮುದಾಯ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು. ಇಲ್ಲವಾದರೆ ಹಿಂದೂ ಸಮಾಜದಿಂದ ಪೂರ್ಣ ಬಹಿಷ್ಕಾರ ಹಾಕಲಾಗುವುದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಜಾನ್ ನಿಂದ ವಿದ್ಯಾರ್ಥಿಗಳು, ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಮಸೀದಿ ಮೇಲಿನ ಮೈಕ್ ತೆರವಿಗೆ ನೀಡಿದ್ದ ಗಡುವು ಮುಗಿದಿದೆ. ಗಡುವು ಮುಗಿದರೂ ರಾಜ್ಯ ಸರ್ಕಾರ ಮೈಕ್ ತೆರವುಗೊಳಿಸಿಲ್ಲ. ಅಜಾನ್ ನಿಲ್ಲಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.ಅಜಾನ್ ಪರ್ಯಾಯವಾಗಿ ಇಂದು ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಣ, ರಾಮಮಂತ್ರ, ಭಜನೆ, ಭಕ್ತಿ ಗೀತೆಗಳನ್ನು ಲೌಡ್ ಸ್ಪೀಕರ್ ಗಳಲ್ಲಿ ಹಾಕಲಾಗಿದೆ.
ರಾಜ್ಯದಲ್ಲಿ ಅಜಾನ್ V/s ಸುಪ್ರಭಾತ : ಶ್ರೀರಾಮಸೇನೆ ಹೋರಾಟಕ್ಕೆ ದಲಿತ ಸೇನೆಯಿಂದ ಕೌಂಟರ್!
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ