ಲೋಕ ಚುನಾವಣೆ ಫಲಿತಾಂಶ : ಭವಿಷ್ಯ ನುಡಿದ ಪ್ರಶಾಂತ್‌ ಕಿಶೋರ್‌ …..!

ನವದೆಹಲಿ :

    ಭಾರತದಲ್ಲಿ ಈಗ 18ನೇ ಲೋಕಸಭಾ ಚುನಾವಣೆಗಳು ನಡೆದಿವೆ. ಈಗಾಗಲೇ ದೇಶದಲ್ಲಿ ಐದು ಹಂತದ ಚುನಾವಣೆಗಳು ಮುಗಿದಿದ್ದು, ಇನ್ನು ಎರಡು ಹಂತದ ಮತದಾನ ಬಾಕಿ ಇದೆ. ಏಳು ಸ್ಥಾನಗಳಿಗೆ ನಡೆದ ಮತ ಏಣಿಕೆ ಕಾರ್ಯ ಜೂನ್‌ 4ರಂದು ನಡೆಯಲಿದೆ. ಈ ಮಧ್ಯೆ ಹಲವು ರಾಜಕೀಯ ಸಮೀಕ್ಷೆಗಳು ಹೊರ ಬಿದ್ದಿವೆ.

    ಬಿಜೆಪಿ 400 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎನ್‌ಡಿಎ ಹೇಳಿಕೊಳ್ಳುತ್ತಿದ್ದು, INDIA ಮೈತ್ರಿ ಕೂಟ ಸುಲಭ ಬಹುಮತ ಸಾಧಿಸುವುದಲ್ಲದೆ, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿಕೊಳ್ಳುತ್ತಿವೆ. ಈ ನಡುವೆ ಜನ್ ಸೂರಜ್ ಪಕ್ಷದ ಮುಖ್ಯಸ್ಥ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸಹ ತಮ್ಮ ಭವಿಷ್ಯ ನುಡಿದಿದ್ದಾರೆ. ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಅಲ್ಲದೆ ಕೇಂದ್ರ ಸರ್ಕಾರದ ಸಾಧನೆ ತೃಪ್ತಿ ಸಹ ತಂದಿಲ್ಲ ಎಂದು ಸಹ ಹೇಳಿದ್ದಾರೆ.

     ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಜನ್ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಗೆ ಮತ್ತೊಂದು ಗೆಲುವು ನೀಡಬಹುದು ಎಂದು ಹೇಳಿದ್ದಾರೆ. ಬಿಜೆಪಿಯ ಸ್ಥಾನಗಳ ಸಂಖ್ಯೆ 2019 ರ ಹತ್ತಿರ ಅಥವಾ ಅದಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ನಾನು ಭಾವಿಸುತ್ತೇನೆ. ಬಿಜೆಪಿ ಕಳೆದ ಚುನಾವಣೆಯಲ್ಲಿ ಪಡೆದಷ್ಟೇ ಸ್ಥಾನಗಳನ್ನು ಪಡೆಯಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 2019ರಲ್ಲಿ ಬಿಜೆಪಿ ಬಿಜೆಪಿ 303 ಸ್ಥಾನಗಳನ್ನು ಪಡೆದಿತ್ತು.

    ಬಿಜೆಪಿಯ 370 ಸೀಟುಗಳನ್ನು ಗೆಲ್ಲುತ್ತದೆ ಎಂಬುದಕ್ಕೆ ಪ್ರಶಾಂತ್ ಕಿಶೋರ್ ಬೆಳಕು ಚೆಲ್ಲಿದ್ದಾರೆ. ಇದು ಚುನಾವಣೆಯ ಚರ್ಚೆಯನ್ನೇ ಬದಲಿಸಿದೆ ಎಂದರು. ಒಂದು ಕಂಪನಿಯಿಂದ ನಿರೀಕ್ಷೆಗಳು ತುಂಬಾ ಹೆಚ್ಚಾದಾಗ ಮತ್ತು ಉತ್ತಮ ಪ್ರದರ್ಶನ ನೀಡಿದರೂ ಅವರು ಅದನ್ನು ಪೂರೈಸದಿದ್ದಾಗ, ಅದರ ಪರಿಣಾಮವು ಷೇರು ಮಾರುಕಟ್ಟೆಯ ಮೇಲೆ ಗೋಚರಿಸುತ್ತದೆ. ಹಾಗೆಯೇ ಬಿಜೆಪಿ 370 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದರೆ, ಅದು ವಿಷಯವಾಗಬಹುದು. ಚರ್ಚೆ ಮತ್ತು ಅದರ ಪರಿಣಾಮವನ್ನು ಮಾರುಕಟ್ಟೆಯಲ್ಲಿಯೂ ಕಾಣಬಹುದಾಗಿದೆ ಎಂದಿದ್ದಾರೆ.

    ಕಳೆದ 3-4 ತಿಂಗಳಲ್ಲಿ 370 ಮತ್ತು 400 ಸ್ಥಾನಗಳನ್ನು ಮೀರಿದ ಚರ್ಚೆ ನಡೆಯುತ್ತಿದೆ. ಇದು ಬಿಜೆಪಿಯ ತಂತ್ರ ಅಥವಾ ಪ್ರತಿಪಕ್ಷಗಳ ದೌರ್ಬಲ್ಯ ಎಂದು ಪರಿಗಣಿಸಲಾಗಿದೆ. ಆದರೆ ಬಿಜೆಪಿ ತನ್ನ ಗುರಿಯನ್ನು 272 ರಿಂದ 370 ಕ್ಕೆ ಶಿಫ್ಟ್ ಆಗಿದೆ. ಇದರಿಂದ ಬಿಜೆಪಿಗೆ ಲಾಭವಾಗಿದೆ. ಈಗ ಯಾರೂ ಮೋದಿ ಜೀ ಸೋಲುತ್ತಾರೆ ಎಂದು ಹೇಳುತ್ತಿಲ್ಲ, 370 ಸೀಟು ಬರುತ್ತದೋ ಇಲ್ಲವೋ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap