ಬೆಂಗಳೂರು :
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸತ್ರೀ ಎಷ್ಟು ಕ್ಲೋಸ್ ಎಂಬುದು ಇಡೀ ಕರ್ನಾಟಕ ಜನತೆಗೆ ತಿಳಿದಿದೆ. ದೊಡ್ಮನೆಯಲ್ಲಿದ್ದಾಗ ಇವರಿಬ್ಬರು ತುಂಬಾ ಆತ್ಮೀಯತೆಯಲ್ಲಿದ್ದರು. ಎಷ್ಟರ ಮಟ್ಟಿಗೆ ಎಂದರೆ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿದ್ದರು.
ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೆ ಹೋಳಿ ಹಬ್ಬದ ಸಂದರ್ಭ ಇಬ್ಬರೂ ಜೊತೆಯಾಗಿ ವಿಡಿಯೋ ಶೂಟ್- ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದರು. ವಿಡಿಯೋದಲ್ಲಿ ಐಶ್ವರ್ಯಾ ಅವರು ಶಿಶಿರ್ಗೆ ಕಿಸ್ ಕೊಟ್ಟಿದ್ದರು. ಈ ವಿಡಿಯೋ ಭರ್ಜರಿ ವೈರಲ್ ಆಗಿತ್ತು.
ಇದೀಗ ಇವರಿಬ್ಬರಿಗೆ ಸಂಬಂಧ ಪಟ್ಟ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಳ್ಳೆ ಹುಡ್ಗ ಪ್ರಥಮ್ ಕೂಡ ಇದ್ದಾರೆ. ಇದರಲ್ಲಿ ಪ್ರಥಮ್ ಅವರು ಐಶ್ವರ್ಯಾ ಎದರೇ ಶಿಶಿರ್ಗೆ ವಾರ್ನ್ ಮಾಡಿದ್ದಾರೆ. ಹಾಗಂತ ಇದು ಕೋಪದಲ್ಲಲ್ಲ. ತಮಾಷೆಯಾಗಿ ರೇಗಿಸುತ್ತ ಶಿಶಿರ್ಗೆ ಪ್ರಥಮ್ ವಾರ್ನ್ ಮಾಡಿದ್ದಾರೆ.
ಇತ್ತೀಚಿಗೆ ಯಾವುದೊ ಖಾಸಗಿ ಕಾರ್ಯಕ್ರಮವೊಂದಕ್ಕೆ ಪ್ರಥಮ್ ಆಗಿಮಿಸಿದ್ದಾರೆ. ಇದೇ ಕಾರ್ಯಕ್ರಮಕ್ಕೆ ಐಶೂ-ಶಿಶಿರ್ ಕೂಡ ಅತಿಥಿಗಳಾಗಿ ಬಂದಿದ್ದರು. ಪ್ರಥಮ್ ಮತ್ತು ಐಶ್ವರ್ಯ ಬಹಳ ಚೆನ್ನಾಗಿ ಮುಂಚಿನಿಂದಲೂ ಪರಿಚಯವಿರುವವರು. ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡುವಾಗ, ಐಶ್ವರ್ಯ ಜೊತೆ ನಾನು ಸಿನಿಮಾ ಮಾಡುತ್ತೀನಿ ಎಂದು ಪ್ರಥಮ್ ಹೇಳಿದ್ದಾರೆ. ಇದನ್ನು ಕೇಳಿದ ಐಶ್ವರ್ಯಾ, ಅಯ್ಯೋ ನೀವು ಇದನ್ನು ಅವತ್ತಿಂದ ಹೇಳುತ್ತಲೇ ಇದ್ದೀರಿ ಯಾವಾಗ ಅಂತ ಗೊತ್ತಿಲ್ಲ..ಒಂದು ನನಗೆ ಮಗು ಆದ್ಮೇಲೆ ಇಲ್ಲ ನಿಮಗೆ ಮಕ್ಕಳು ಆದ್ಮೇಲೆನೇ ಸಿನಿಮಾ ಆಗೋದು ಎಂದು ಐಶು ಹೇಳಿದ್ದಾರೆ.
ಪ್ರಥಮ್ ಈ ಮಾತನ್ನು ಇಲ್ಲಿಗೆ ಬಿಟ್ಟಿಲ್ಲ ಅಲ್ಲಿದ್ದ ಶಿಶಿರ್ ಅವರನ್ನು ಕಾಲು ಎಳೆದಿದ್ದಾರೆ. ನಾವಿಬ್ಬರೂ ಕೂಡ ಒಟ್ಟಿಗೆ ಕೆಲಸ ಮಾಡುತ್ತೀವಿ ಆ ಚಿತ್ರಕ್ಕೆ ಶಿಶಿರ್ ವಿಲನ್ ಆಗಿ ಮಾಡಬೇಕು. ನಡುವಿನಲ್ಲಿ ಬಂದು ಕಾಫಿ ಏನಾದರೂ ಕುಡಿಸಲು ಬಂದ್ರೆ ಮುಖಕ್ಕೆ ಹೊಡೀತಿನಿ. ಶಿಶಿರ್ ಇದನ್ನು ನೆನಪಿನಲ್ಲಿ ಇಟ್ಟಿಕೋ ನಾನು ಐಶ್ವರ್ಯ ಸಿನಿಮಾ ಮಾಡ್ತಾ ಇದ್ದೀವಿ ನಮಗೆ ತೊಂದರೆ ಕೊಡೋದೆಲ್ಲ ಇಲ್ಲ ಇದು ನಿನಗೆ ಕೊಡುತ್ತಿರುವ ವಾರ್ನಿಂಗ್ ಎಂದು ಪ್ರಥಮ್ ತಮಾಷೆ ಮಾಡಿದ್ದಾರೆ.ಇದಕ್ಕೆ ಐಶ್ವರ್ಯಾ ಸಿಂಧೋಗಿ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
