ಮಹಿಷನಿಗೆ ಪುಷ್ಪಾರ್ಚನೆ : ಬನ್ನಿ, ನೋಡೇ ಬಿಡೋಣ: ಪ್ರತಾಪ್ ಸಿಂಹ ಸವಾಲ್​

ಮೈಸೂರು

    ನಾಳೆ ಮೈಸೂರು ನಗರದಲ್ಲಿ ಮಹಿಷ ದಸರಾ  ಆಚರಣೆ ಹಿನ್ನಲೆ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದಕ್ಕೆ ಪ್ಲ್ಯಾನ್​ ಮಾಡಲಾಗುತ್ತಿದೆ. ಇದಕ್ಕಾಗಿ ಮಹಿಷಾ ದಸರಾ ಆಚರಣೆ ಸಮಿತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪುಷ್ಪಾರ್ಚನೆ ಮಾಡಲು ಅವಕಾಶ ಸಿಗುತ್ತಾ ಎಂಬ ಕುತೂಹಲ ಮೂಡಿಸಿದ್ದು, ಬೆಟ್ಟದಲ್ಲಿ ಮಹಿಷನಿಗೆ ಪುಷ್ಪಾರ್ಚನೆ?! ಬನ್ನಿ ನೋಡೆ ಬಿಡೋಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

    ಈಗಾಗಲೇ ಮಹಿಷಾ ದಸರಾಗೆ ಪ್ರತಾಪ್‌ ಸಿಂಹ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಮತ್ತೊಮ್ಮೆ ಕಿಡಿಕಾರಿದ್ದಾರೆ. ಮಹಿಷನಿಗೆ ಪುಷ್ಪಾರ್ಚನೆ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆ ವರದಿ ಉಲ್ಲೇಖಿಸಿ ಪೋಸ್ಟ್ ಹಂಚಿಕೊಂಡಿದ್ದು, ಬೆಟ್ಟದಲ್ಲಿ ಮಹಿಷನಿಗೆ ಪುಷ್ಪಾರ್ಚನೆ?! ಬನ್ನಿ, ನೋಡೇ ಬಿಡೋಣ ಎಂದು ಸವಾಲು ಹಾಕಿದ್ದಾರೆ.

   ಈಗಾಗಲೇ ಮಹಿಷಾ ದಸರಾ ವಿಚಾರವಾಗಿ ಪ್ರತಾಪ್ ಸಿಂಹ ಸಾಕಷ್ಟು ವಿರೋಧಿಸಿದ್ದು, ಮಹಿಷ ದಸರಾ ಹೆಸರಿನಲ್ಲಿ ಚಾಮುಂಡೇಶ್ವರಿಗೆ ನಿಂದನೆ‌ ಮಾಡುತ್ತಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

   ಈವರೆಗೆ ಒಮ್ಮೆ ಮಾತ್ರ ಪುಷ್ಪಾರ್ಚನೆಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಚಾಮುಂಡಿ ನಿಂದಿಸಿದ್ದಾರೆಂದು ಆಕ್ಷೇಪವ್ಯಕ್ತವಾಗಿತ್ತು. ಆನಂತರ ಚಾಮುಂಡಿಬೆಟ್ಟದಲ್ಲಿ ಪುಷ್ಪಾರ್ಚನೆಗೆ ಅವಕಾಶ ನೀಡಿರಲಿಲ್ಲ. ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ಕೊಟ್ಟರೆ ಚಾಮುಂಡಿ ಚಲೋ ಮಾಡುವುದಾಗಿ ಪ್ರತಾಪ್ ಸಿಂಹ ಹೇಳಿದ್ದಾರೆ. 

   ಚಾಮುಂಡಿ‌ ಬೆಟ್ಟದಲ್ಲಿ‌ ಮಹಿಷ ಮಂಡಲೋತ್ಸವ ಆಚರಣೆ ವಿಚಾರವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದು, ಯಾರು ಬೇಕಾದರೂ ಯಾರಿಗೂ ಯಾವ ತೊಂದರೆಯಾಗದಂತೆ ಅವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು. ಆದರೆ ಕಾನೂನು ಸುವ್ಯವಸ್ಥೆಗೆ ಯಾವ ಸಮಸ್ಯೆ ಆಗಬಾರದು ಅಷ್ಟೇ ಎಂದು ಹೇಳಿದ್ದಾರೆ.

   ಇಂತಹದನ್ನು ಮಾಡಿ ಮಾಡಬೇಡಿ ಎಂದು ಹೇಳಲು ನಾವು ಯಾರು? ಅವರವರ ಧಾರ್ಮಿಕ ನಂಬಿಕೆ ಅವರಿಗೆ ಬಿಟ್ಟದ್ದು. ನೀವು ಮಾಡಲೇಬೇಡಿ ಎಂದು ವಿರೋಧ ಮಾಡಲು ಯಾರಿಗೂ ಹಕ್ಕಿಲ್ಲ. ಎಲ್ಲಾ ಪರಿಸ್ಥಿತಿಯನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದಿದ್ದಾರೆ. ಆ ಮೂಲಕ ಮಹಿಷ ದಸರಾ ಆಚರಣೆಗೆ ಪರೋಕ್ಷವಾಗಿ ಮಹದೇವಪ್ಪ ಒಪ್ಪಿಗೆ ಸೂಚಿಸಿದ್ದಾರೆ.

 

Recent Articles

spot_img

Related Stories

Share via
Copy link