ವಿಜಯನಗರ/ಹೊಸಪೇಟೆ
ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತ ನಗರದ ಒಳಾಂಗಣ ಕ್ರಿಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ, ಜಿಲ್ಲೆಯ SSLC ಮತ್ತು PUC ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಿಶೇಷವಾಗಿ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕುಗಳಿಂದ ತಲಾ 10 ವಿದ್ಯಾರ್ಥಿಗಳಂತೆ ಒಟ್ಟು 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.
ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗ (OBC), ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗ ಸೇರಿದಂತೆ ಎಲ್ಲ ವರ್ಗದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಈ ವೇಳೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರ ಪುತ್ರರಾದ ಹೆಚ್.ಜಿ. ವಿರುಪಾಕ್ಷಿ ಅವರು ಮಾತನಾಡುತ್ತ ನಮ್ಮ ತಂದೆಯವರಾದ ಕಾಲವದಿಯಲ್ಲಿ ನಮ್ಮ ವಿಜಯನಗರ ಕ್ಷೇತ್ರಕ್ಕೆ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಕಾಳಜಿವಹಿಸಿ ಕ್ಷೇತ್ರವನ್ನ ಶಿಕ್ಷಣದಿಂದ ಅಭಿವೃದ್ಧಿ ಗೊಳಿಸುತ್ತೇವೆ ಎಂದರು.
ಎ.ಬಿ. ರಾಮಚಂದ್ರಪ್ಪ ಕಾರ್ಯಕ್ರಮ ಒಟ್ಟಾರೆ ಉಸ್ತುವಾರಿಯನ್ನ ಸೋಮಶೇಖರ್ ಬಣ್ಣದಮನೆ, ಕೊಡಿಹಳ್ಳಿ ಭೀಮಪ್ಪ, ಹಾಲುಮತ, ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೇಖರಪ್ಪ ವರಪೇಟೆ, ಜೆ.ಶಿವಕುಮಾರ್, ಮಾಲ್ವಿ ಪ್ರಕಾಶ್ ಹೆಚ್ ಬಿ ಹಳ್ಳಿ, ಶಶಿಧರ್ ಹೂವಿನ ಹಗಲಿ, ಪರಶುರಾಮ್ ಹರಪನಹಳ್ಳಿ, ಶಿವಕುಮಾರ್ ಕೊಟ್ಟೂರು, ಬೋರಸ್ವಾಮಿ ಕುಡ್ಲಿಗಿ, ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.








