ಮುಂಚಿತವಾಗಿ ಬರಲಿದೆ ಮುಂಗಾರು ಮಳೆ…!

ಬೆಂಗಳೂರು: 

     ಕರ್ನಾಟಕದಲ್ಲಿ ಅವಧಿಗೂ ಮುನ್ನ ಪೂರ್ವ ಮುಂಗಾರು ಮಳೆ ಬರುವ  ಸಾಧ್ಯತೆ ಹೆಚ್ಚಾಗಿಯೇ ಇದೆ  ಎಂದು ತಜ್ಞರು ಹೇಳಿದ್ದಾರೆ.

    ಉತ್ತರ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಈ ವರ್ಷ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆಯಿದೆ ಎಂದು ತಜ್ಞರು  ಹೇಳಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಮಾರ್ಚ್ 6ರಿಂದ 8ರ ನಡುವೆ ಅಕಾಲಿಕ ಮಳೆಯಾಗಿದ್ದು, ಇದು ಹಲವೆಡೆ ಬೆಳೆ ಹಾನಿಗೂ ಕಾರಣವಾಗಿದೆ. 

    ಅಂತೆಯೇ ದೇಶದ ಉತ್ತರ ಹಾಗೂ ಕೇಂದ್ರ ಭಾಗದಲ್ಲಿ ಮಾರ್ಚ್‌ 15ರ ತನಕ ಹಗುರವಾದ ಮಳೆಯಾಗಲಿದೆ. ಮಾರ್ಚ್‌ 16ರಿಂದ 22ರ ತನಕ ದೇಶದ ದಕ್ಷಿಣ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.

    1901ರ ಬಳಿಕ ಕಳೆದ ಫೆಬ್ರುವರಿಯು ಅತ್ಯಂತ ಬಿಸಿಲಿನಿಂದ ಕೂಡಿತ್ತು. ಈ ರೀತಿ ಹವಾಮಾನ ವಾತಾವರಣದಿಂದ ಮುಂಗಾರು ಪೂರ್ವ ಮಳೆ ಅವಧಿಗೂ ಮುನ್ನವೇ ಬರಲಿದೆ. ಸಾಮಾನ್ಯವಾಗಿ ಮುಂಗಾರು ಪೂರ್ವ ಮಾರುತಗಳು ಮಾರ್ಚ್‌ ಮಧ್ಯದಲ್ಲಿ ರಚನೆಯಾಗುತ್ತವೆ. ಈ ವರ್ಷ ಬೇಗ ಸೃಷ್ಟಿಯಾಗಿವೆ. ಹೆಚ್ಚಿರುವ ಉಷ್ಣಾಂಶವು ಇದಕ್ಕೆ ಕಾರಣವಾಗಿದೆ’ ಎಂದು ಸ್ಕೈಮೆಟ್‌ನ ಹವಾಮಾನ ತಜ್ಞ ಮಹೇಶ್‌ ಮಲಾವತ್‌ ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap