ಹಾಸ್ಯ ನಟನಿಗೆ ಕೈ—–ಕೊಡದ ಪೂಜಾರಿ…!

ಚೆನ್ನೈ:

     ತಮಿಳು ನಾಡಿನಲ್ಲಿ ಅತ್ಯಂತ ಹೆಸರು ವಾಸಿಯಾದ  ಹಾಸ್ಯನಟ ಯೋಗಿ ಬಾಬು  ತಮ್ಮ ವಿಭಿನ್ನ ಅಭಿನಯ ಶೈಲಿಯಿಂದಲೇ ಎಲ್ಲರ  ಮನೆ ಮಾತಾಗಿದ್ದಾರೆ.ಎಲ್ಲ ಸೂಪರ್​ಸ್ಟಾರ್​ಗಳೊಂದಿಗೂ ನಟಿಸಿ ಸೈ ಎನಿಸಿಕೊಂಡಿರುವ ಯೋಗಿ ಬಾಬು, ರಜನಿಕಾಂತ್​ ಜತೆ ಜೈಲರ್​ ಸಿನಿಮಾದಲ್ಲಿ ನಟಿಸಿದ್ದಾರೆ.

   ಏನಿದು ಯೋಗಿ ಬಾಬು ತಮಿಳಿನ ಹಾಸ್ಯದ ಸೂಪರ್‌ ಸ್ಟಾರ್‌ ಆಗಿರಬಹುದು ಆದರೆ ಏಕೆ ಇಷ್ಟೋಂದು ಪೀಟಿಕೆ ಹಾಕುತ್ತಿದ್ದಾರೆ ಎಂದುಕೊಂಡರೆ ಈ ಹಾಸ್ಯ ದಿಗ್ಗಜನಿಗೆ ಸಂಬಂಧಿಸಿದ  ವಿಡಿಯೋವೊಂದು ಎಲ್ಲೆಡೆ ವೈರಲ್‌ ಆಗುತ್ತಿದೆ .

   ಯೋಗಿ ಬಾಬು ಅವರು ಮುರುಗನ್ ದೇವರ ದೊಡ್ಡ ಭಕ್ತ. ಆಗಾಗ ಮುರುಗನ್​ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಕಳೆದ ತಿಂಗಳು ತಿರುವಳ್ಳೂರ್​ ಜಿಲ್ಲೆಯಲ್ಲಿರುವ ಸಿರುವಪುರಿ ಮುರುಗನ್​ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ವೈರಲ್​ ಆಗಿರುವ ಇದಕ್ಕೆ ಸಂಬಂಧಿಸಿ​ದ್ದಾಗಿದೆ.

      ಪಂಚೆ ಮತ್ತು ಶರ್ಟ್​ ಧರಿಸಿ, ಹೂವು ಮತ್ತು ನಿಂಬೆಹಣ್ಣಿನ ಹಾರ ಹಾಕಿಕೊಂಡಿರುವ ಯೋಗಿ ಬಾಬು ಮೊದಲು ಅಭಿಮಾನಿಯೊಬ್ಬರ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಇದಾದ ಬಳಿಕ ತಮ್ಮ ಎದುರಿಗೆ ಇರುವ ಪೂಜಾರಿಯೊಬ್ಬರ ಬಳಿ ತೆರಳಿ ಶೇಕ್​ ಹ್ಯಾಂಡ್​ ಮಾಡಲು ಕೈ ಮುಂದೆ ಚಾಚುತ್ತಾರೆ. ಆದರೆ, ಪೂಜಾರಿ ಶೇಕ್​ ಹ್ಯಾಂಡ್​ ಮಾಡದೇ ಅಲ್ಲಿಯೇ ನಿಂತು ಮಾಡಿಸಿ ಕಳುಹಿಸುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap