ಡೆನ್ಮಾರ್ಕ್ ನಲ್ಲಿ ಡೋಲು ಬಾರಿಸಿದ ಪ್ರಧಾನಿ; ನರೇಂದ್ರ ಮೋದಿಯವರ ಈ ವಿಡಿಯೋ ಫುಲ್‌ ವೈರಲ್

ಡೆನ್ಮಾರ್ಕ್:

ಡೆನ್ಮಾರ್ಕ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೋಪೆನ್ ಹೇಗನ್ ನಲ್ಲಿರುವ ಭಾರತೀಯ ಮತ್ತು ಡ್ಯಾನಿಶ್ ಸಮುದಾಯಗಳೊಂದಿಗೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಮಂಗಳವಾರ ಅಲ್ಲಿ ಭಾರತೀಯ ಸಂಸ್ಕೃತಿಗಳಲ್ಲಿ ಒಂದಾಗಿರುವ ಡೋಲು ಬಾರಿಸುವುದರಲ್ಲಿ ಭಾರತೀಯ ಕಲಾವಿದರು ಮಗ್ನರಾಗಿದ್ದರು.

IPL2022 : ಇಂದಿನ ಪಂದ್ಯದಲ್ಲಿ RCB – CSK ಮುಖಾಮುಖಿ

ಇದನ್ನು ಗಮನಿಸಿದ ಪ್ರಧಾನಿ ಮೋದಿ ತಾವು ಏಕೆ ಒಂದು ಪ್ರಯತ್ನ ಮಾಡಬಾರದು ಎಂದು ಭಾವಿಸಿದವರೇ ನೇರವಾಗಿ ಕಲಾವಿದರ ಬಳಿಗೆ ಹೋಗಿ ಡೋಲನ್ನು ಪಡೆದು ಬಾರಿಸಲು ಆರಂಭಿಸಿದರು.ಅವರ ಈ ತಾಳಕ್ಕೆ ಭಾರತೀಯ ಕಲಾವಿದರು ಹೆಜ್ಜೆ ಹಾಕುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಭಾರತೀಯ ಮತ್ತು ಡ್ಯಾನಿಶ್ ಪ್ರಜೆಗಳು, ಅಧಿಕಾರಿಗಳು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

ರಮೇಶ್ ಜಾರಕಿಹೊಳಿ ವಿರುದ್ಧ 600 ಕೋಟಿ ರೂ. ವಂಚನೆ ಆರೋಪ: ಕಾಂಗ್ರೆಸ್ ಟ್ವೀಟ್

ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಭಾರತೀಯ ಮೂಲದ ಸಮುದಾಯಗಳೊಂದಿಗೆ ಚರ್ಚೆ ನಡೆಸಿದರು ಮತ್ತು ಭಾರತೀಯ ವೈವಿಧ್ಯಮಯ ಸಂಸ್ಕೃತಿಯನ್ನು ಮತ್ತಷ್ಟು ಶಕ್ತಿಯುತಗೊಳಿಸುವಂತೆ ಕರೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap