ಬೆಂಗಳೂರು:
ಭಾಲ್ಕಿ ತಾಲೂಕಿನ ಕೋನಮೇಲಕುಂದ ಗ್ರಾಮ ಪಂಚಾಯತ್ ಕಾರ್ಯಕ್ರಮವು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗುವುದು ನಿಶ್ಚಿತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆಅರಿವು ಕೇಂದ್ರ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅರಿವು ಕೇಂದ್ರ ಜ್ಞಾನ ದಾಸೋಹದ ಕೇಂದ್ರವಾಗಿದೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಂತ್ರಜ್ಞಾನ ಅರಿವು ಹಾಗೂ ಕೌಶಲ್ಯವನ್ನು ಪಡೆಯುವುದರಲ್ಲಿ ಹಿಂದೆ ಬೀಳಬಾರದು.
ತಂತ್ರಜ್ಞಾನದ ಜ್ಞಾನದ ಕೊರತೆಯಿಂದ ಅವಕಾಶ ವಂಚಿತರಾಗಬಾರದು. ಹೀಗಾಗಿಯೇ ಅರಿವು ಕೇಂದ್ರಗಳನ್ನು ಡಿಜಿಟಲ್ ಪರಿಕರಗಳನ್ನು ನೀಡುವ ಮೂಲಕ ಮೇಲ್ದರ್ಜೆಗೇರಿಸಲಾಗಿದೆ. ಹಾಗೂ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ.
ಭಾಲ್ಕಿ ತಾಲೂಕಿನ ಕೋನಮೇಲಕುಂದ ಗ್ರಾಮ ಪಂಚಾಯತ್ ನ ಅರಿವು ಕೇಂದ್ರದಲ್ಲಿ ಆಯೋಜಿಸಲಾದ ಉಚಿತ ಕಂಪ್ಯೂಟರ್ ತರಬೇತಿಗೆ ಶಾಲಾ ಮಕ್ಕಳು ಮುಂಜಾನೆಯೇ ಅರಿವು ಕೇಂದ್ರಕ್ಕೆ ಬಂದು ಕಂಪ್ಯೂಟರ್ ತರಗತಿಯಲ್ಲಿ ಭಾಗವಹಿಸಿ ನಂತರ ಶಾಲೆಗೆ ಹೋಗುತ್ತಿದ್ದಾರೆ.ಈ ಕಾರ್ಯಕ್ರಮವು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗುವುದು ನಿಶ್ಚಿತ ಎಂದಿದ್ದಾರೆ.








