ಬೆಂಗಳೂರು:

ಭ್ರಷ್ಟ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂಬ ನಿಟ್ಟಿನಲ್ಲಿ ನಮ್ಮ ಹೋರಾಟ ಸಾಗಿದೆಯೇ ಹೊರತು, ಸಚಿವ ಈಶ್ವರಪ್ಪ ರಾಜಿನಾಮೆಗಷ್ಟೆ ಸೀಮಿವಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಸಚಿವ ಈಶ್ವರಪ್ಪರ ರಾಜಿನಾಮೆ ಪಡೆಯುವ ಉದ್ದೇಶದಿಂದ ಹೋರಾಟ ಮಾಡುತ್ತಿಲ್ಲ. 40ಪರ್ಸೆಂಟ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಪ್ರತಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು ಎಂಬುದು ಪ್ರಮುಖ ಉದ್ದೇಶವಾಗಿದೆ ಎಂದರು.
ಸೂಕ್ತ ತನಿಖೆಯಾದರೆ, ಇನ್ನೂ ನಾಲ್ಕು ಮಂದಿ ಸಚಿವರು ರಾಜಿನಾಮೆ ಕೊಡಬೇಕಾಗಲಿದೆ ಎಂದು ತಿಳಿಸಿದ ಅವರು, ಸಮಾಜ ಕಲ್ಯಾಣ ತನಿಖೆ ಆದರೆ, ಇಲಾಖೆಯಲ್ಲಿ ಇನ್ನೂ ಎರಡು ವಿಕೆಟ್ ಪತನವಾಗಲಿದೆ. ಇದರಲ್ಲಿ ಒಬ್ಬರು ಹಾಲಿ, ಮತ್ತೊಬ್ಬರು ಮಾಜಿ ಸಚಿವರು. ಗೃಹ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಾಲಾಡಿದರೆ, ಇನ್ನೂ ನಾಲ್ಕು ವಿಕೆಟ್ ಪತನವಾಗಲಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








