ಹಗರಿಬೊಮ್ಮನಹಳ್ಳಿ:
ತಾಲೂಕಿನ ಹಂಪಾಪಟ್ಟಣ ಕೃಷಿಪತ್ತಿನ ಸಹಕಾರ ಸಂಘವು 2017-18ನೇ ಸಾಲಿನಲ್ಲಿ 76.7894 ಲಕ್ಷ ರೂ.ಗಳ ಲಾಂಭಾಂಶವನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷ ಟಿ.ಹನುಮಂತಪ್ಪ ತಿಳಿಸಿದರು.
ಅವರು ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆ ವಹಿಸಿ ಸಭೆಗೆ ಮಾಹಿತಿ ನೀಡಿದರು. ನಂತರ ಸಂಘವು ನಿರ್ದೇಶಕರ ಸಹಕಾರದಿಂದ ಉತ್ತಮ ಆಡಳಿತ ನೀಡುತ್ತಿದ್ದು, ರೈತರಿಂದಲೂ ಸಹಕಾರ ದೊರೆಯುತ್ತಿದೆ ಎಂದರು.
ನಂತರ ಸಂಘದ ಕಾರ್ಯದರ್ಶಿ ಕೆ.ಮಲ್ಲಿಕಾರ್ಜುನ ಮಾತನಾಡಿ, ಸಂಘದಿಂದ ದುಡಿಯುವ ಬಂಡವಾಳವಾಗಿ 7,23,72201 ರೂ.ಗಳಿದ್ದು, ಕೃಷಿ ಸಾಲವಾಗಿ 5,36,32741 ರೂ.ಗಳನ್ನು ಮತ್ತು ಕೃಷಿಯೇತರ ಸಾಲವಾಗಿ 88,91069ರೂ.ಗಳನ್ನು ವಿತರಿಸಲಾಗಿದೆ. ಅಲ್ಲದೆ ಸಂಘದ ಸದಸ್ಯರಿಂದ 57,29593 ರೂ.ಗಳನ್ನು ಶೇರು ಸಂಗ್ರಹ ಮಾಡಲಾಗಿದೆ ಎಂದರು. ಸಂಘದಿಂದ ರೈತರಿಗೂ ರೈತರಿಂದ ಸಹಕಾರ ಸಂಘ ಅವಿನಾಭಾವ ಸಂಬಂಧ ಹೊಂದಿದ್ದು, ಉತ್ತಮ ಆಡಳಿತ ನೀಡಲು ಅನುಕೂಲವಾಗಿದೆ ಎಂದರು.
ಉಪಾಧ್ಯಕ್ಷ ಕೋಡಿಹಳ್ಳಿ ಬಸವರಾಜ, ನಿರ್ದೇಶಕರಾದ ಎಸ್.ಪಂಪಾಪತಿ, ಕೆ.ಮುದುಕಪ್ಪ, ಪಿ.ಗವಿಸಿದ್ದಮ್ಮ, ಕೆ.ಪಕ್ಕೀರಮ್ಮ, ಟಿ.ಬಿದ್ದ ಹನುಮಂತಪ್ಪ ಸೇರಿದಂತೆ ಸದಸ್ಯರು ಕೂಡ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
