ದಾವಣಗೆರೆ:
ತಾಲೂಕು ಆಡಳಿತ ನಿಗದಿತ ಅವಧಿಯಲ್ಲಿ ಪಾಲು ಪಾರೀಕತ್ ಮಾಡಿಕೊಡುತ್ತಿಲ್ಲ ಎಂದು ದಾವಣಗೆರೆ ರೈತ ಸಂಘದ ತಾಲೂಕು ಅಧ್ಯಕ್ಷ ಎ.ಆರ್. ಕರಿಬಸಪ್ಪ ಈಚಘಟ್ಟ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಪಾಲು ಪಾರೀಕತ್ ಮಾಡಿಕೊಡಬೇಕು ಎಂದು ತಾಲೂಕು ಆಡಳಿತಕ್ಕೆ 2020 ರಂದು
ಆಗಸ್ಟ್ 10 ರಂದು ಅರ್ಜಿ ಸಲ್ಲಿಸಿ, ಶುಲ್ಕವನ್ನು ಪಾವತಿಸಲಾಗಿದೆ. ಆದರೂ, ಪಾಲು ಪಾರೀಕತ್ ಮಾಡಿಕೊಟ್ಟಿಲ್ಲ. ಕೂಡಲೇ ಪಾಲು ಪಾರೀಕತ್ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಆ. 12 ರಂದು ತಹಶೀಲ್ದಾರ್ ಕಚೇರಿಯಿಂದ ಉಪ ವಿಭಾಗಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಲಾಗುವುದು. ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು. ಭೂ ಮಾಪಕರಿಗೆ ಪಾಲು ವಿಭಾಗ ಮಾಡಲು ಭೂಮಿ ಅಳತೆ ಮಾಡಿಕೊಡಲು ಕೇಳಿಕೊಂಡಿದ್ದೇವೆ. ಈಗಾಗಲೇ ಒಂದು ವರ್ಷ ಕಳೆದರೂ ಮಾಡಿಕೊಟ್ಟಿಲ್ಲ ಎಂದು ದೂರಿದರು.
ಆಕಾರ ಬಂದು ಆರ್ ಟಿಸಿ ತಾಳೆಯಿದ್ದು ವರ್ಷಗಟ್ಟಲೆ ಇಲ್ಲಸಲ್ಲದ ಸಬೂಬು ಹೇಳುತ್ತಲೇ ಸತಾಯಿಸುತಿದ್ದಾರೆ. ರೆವಿನ್ಯೂ ಸ್ಕೆಚ್ ಕೊಟ್ಟಿಲ್ಲ. ನಾಳೆಯೊಳಗೆ ತಹಶೀಲ್ದಾರ್ ಆಸ್ತಿ ಪಾಲು ಭಾಗ ಮಾಡಿಕೊಡದೇ ಇದ್ದರೆ ಅ.12 ಕ್ಕೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಳ್ಳಾಪುರದ ಹನುಮಂತಪ್ಪ, ಕೊಗ್ಗನೂರು ಹನುಮಂತಪ್ಪ, ತುಪ್ಪದಹಳ್ಳಿ ಬಸವರಾಜಪ್ಪ, ಬುಳ್ಳಾಪುರದ ಪರಮೇಶ್ವರಪ್ಪ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ