PSI ಎಕ್ಸಾಂಗೂ ಮೊದಲೇ ಆಯ್ಕೆ ಪಟ್ಟಿ ಸಿದ್ಧವಾಗಿತ್ತು! ಈ ಬಾರಿ ಕೆಲಸ ಆಗದವರಿಗೆ ಮುಂದಿನ ಬ್ಯಾಚ್​ನಲ್ಲಿ ನೌಕರಿ

ಬೆಂಗಳೂರು: 

ಬಗೆದಷ್ಟು ಆಳ ಎಂಬಂತಾಗಿದೆ ಪಿಎಸ್​ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಜಾಡು. 2020ನೇ ಸಾಲಿನಲ್ಲಿ 545 ಎಸ್​ಐ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಪಿಎಸ್​ಐ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲೇ ಯಾರು ಎಸ್​ಐಗಳು ಎಂಬುದು ಖಚಿತವಾಗಿತ್ತು.

ಪರೀಕ್ಷೆಗೂ ಮೊದಲೇ ಎಸ್​ಐಗಳ ಆಯ್ಕೆ ಪಟ್ಟಿ ಸಿದ್ಧವಾಗಿತ್ತು! ಇದಾದ ಮೇಲೆ ನೆಪಮಾತ್ರಕ್ಕೆ ದೈಹಿಕ ಸಹಿಷ್ಣುತೆ ಮತ್ತು ಲಿಖಿತ ಪರೀಕ್ಷೆ ನಡೆಸಲಾಗಿದೆ ಎಂಬುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಡಾ.ಪುನೀತ್‌ ರಾಜ್‌ಕುಮಾರ್​ಗೆ ಬಸವಶ್ರೀ ಪ್ರಶಸ್ತಿ: ಮುರುಘಾ ಶರಣರಿಂದ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ

545 ಎಸ್​ಐ ನೇಮಕಾತಿಯಲ್ಲಿ ಹಣ ಕೊಟ್ಟು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಬಾರದೆ ಇದ್ದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಬಾಕಿ ಇರುವ 402 ಎಸ್​ಐ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಕೆಲಸ ಮಾಡಿಸಿ ಕೊಡುವುದಾಗಿ ಏಜೆಂಟ್​ಗಳು ಭರವಸೆ ಕೊಟ್ಟಿದ್ದಾರೆ. ಲಕ್ಷಾಂತರ ರೂ. ಪಡೆದು ವಾಪಸ್​ ಕೊಡಲು ಸಾಧ್ಯವಾಗದೆ ಮತ್ತೆ ನಡೆಯುವ ನೇಮಕಾತಿಯಲ್ಲಿ ಅಕ್ರಮ ಎಸಗಲು ದಲ್ಲಾಳಿಗಳು ಶತಪ್ರಯತ್ನ ನಡೆಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಪ್ರಭಾವಿಗಳು, ಹಣವಂತರು ವಾಮಮಾರ್ಗದಲ್ಲಿ ತಮ್ಮ ಮಕ್ಕಳನ್ನು ಪೊಲೀಸ್​ ಅಧಿಕಾರಿ ಮಾಡಲು ರಾಜಕೀಯ ಮುಖಂಡರು, ಪ್ರಭಾವಿಗಳು ಮತ್ತು ಅಧಿಕಾರಿಗಳನ್ನು ಸಂಪರ್ಕ ಮಾಡಿ ಡೀಲ್​ ಕುದುರಿಸಿದ್ದಾರೆ. ಇಲ್ಲಿ ಅಭ್ಯಥಿರ್ಗಳ ಜಾತಿ, ಯಾರ ಕಡೆಯ ಅಭ್ಯಥಿರ್, ಯಾವ ವಿಧಾನಸಭಾ ಕ್ಷೇತ್ರ ಎಂಬೆಲ್ಲ ‘ಮಾನದಂಡ’ಗಳು ಪರಿಗಣನೆಯಾಗಿವೆ!

ಜ್ಞಾನಾಧಾರಿತ `ಸೂಪರ್ ಪವರ್’ ಭಾರತದ ಸೃಷ್ಟಿಯ ಸಂಕಲ್ಪ: ಅಮಿತ್ ಶಾ

ಇದಾದ ಮೇಲೆ ಅಭ್ಯಥಿರ್ಗಳಿಗೆ ದೈಹಿಕ ಸಹಿಷ್ಣುತಾ ಪರೀಕ್ಷೆಯಲ್ಲಿ ಪಾಸ್​ ಆಗ್ತಾನಾ ಇಲ್ಲವೇ? ಮತ್ತು ಲಿಖಿತ ಪರೀಕ್ಷೆಯಲ್ಲಿ ಮಾತ್ರ ಸಹಾಯ ಮಾಡಿದರೆ ಸಾಕಾ? ಎಂಬುದರ ಮೇಲೆ ಡೀಲ್​ ‘ಮೊತ್ತ’ ನಿಗದಿಯಾಗಿದೆ. ದೈಹಿಕ ಸಹಿಷ್ಣುತಾ ಪರೀಕ್ಷೆಯಲ್ಲಿ ಪಾಸ್​ ಆಗ್ತಾನೆ, ಲಿಖಿತ ಪರೀಕ್ಷೆಗೆ ಸಹಾಯ ಮಾಡಿದರೆ ಸಾಕು ಎಂದರೆ 60ರಿಂದ 70 ಲಕ್ಷ ರೂ. ಅಥವಾ ಎರಡರಲ್ಲೂ ಸಹಾಯ ಬೇಕೆಂದರೆ, 75ರಿಂದ 1 ಕೋಟಿ ರೂ.ವರೆಗೂ ‘ವ್ಯವಹಾರ’ ನಡೆಸಲಾಗಿದೆ.

ಡೀಲ್​ ಪಕ್ಕಾ, ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಬರುವಂತೆ ಮಾಡಲು ಶೇ.30ರಿಂದ 50 ಹಣ ಪಾವತಿ ಮಾಡಿದ್ದಾರೆ. ನೇಮಕಾತಿ ಆದೇಶ ಅಭ್ಯರ್ಥಿ ಕೈ ಸೇರುವ ಹೊತ್ತಿಗೆ ಎಲ್ಲ ಹಣ ಸಂದಾಯ ಮಾಡುವಂತೆ ಷರತ್ತುಗಳನ್ನು ವಿಧಿಸಿ ಡೀಲ್​ ಮುಗಿಸಿದ್ದಾಗಿ ಬಂಧನಕ್ಕೆ ಒಳಗಾದ ಅಭ್ಯರ್ಥಿಗಳು ಬಾಯ್ಬಿಟ್ಟಿದ್ದಾರೆ.

ಕೋವಿಡ್-19: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,568 ಹೊಸ ಕೇಸ್ ಪತ್ತೆ, 20 ಮಂದಿ ಸಾವು

ರಾಜ್ಯದ 92 ಪರೀಕ್ಷಾ ಕೇಂದ್ರಗಳ ಪೈಕಿ ಬೆಂಗಳೂರಿನಲ್ಲೇ 7 ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಉತ್ತನ ಅಧಿಕಾರಿಗಳ ‘ಕೈವಾಡ’ವಿಲ್ಲದೆ ಒಎಂಆರ್​ ಶೀಟ್​ ತಿದ್ದುವಷ್ಟರಮಟ್ಟಿಗಿನ ಅಕ್ರಮ ಎಸಗಲು ಸಾಧ್ಯವಿಲ್ಲ ಎಂಬ ಆರೋಪ ಪೊಲೀಸ್​ ವಲಯದಲ್ಲಿಯೇ ಕೇಳಿಬರುತ್ತಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link