ರೈತರ ಹತ್ಯೆಗೈದವರಿಗೆ ಕಠಿಣ ಶಿಕ್ಷೆಯಾಗಬೇಕು:ಮೊಹಮ್ಮದ್ ಜಿಕ್ರಿಯಾ

ದಾವಣಗೆರೆ:

ದೇಶದ ಬೆನ್ನೆಲುಬು ಅನ್ನದಾತರನ್ನು ಹತ್ಯೆಗೈದ ಕೊಲೆಗಡುಕರನ್ನ ರಕ್ಷಿಸುತ್ತಿರುವ ಪಾತಕಿ ಮನಸ್ಥಿತಿಯ ಕೇಂದ್ರ ಸರ್ಕಾರವು ಲಖಿಮ್ ಪುರ್ ಖೇರಿ ಪ್ರಕರಣದ ಪ್ರಮುಖ ಆರೋಪಿಗೆ ಕಠಿಣ ಶಿಕ್ಷಯಾಗಬೇಕೆಂದು ಕಿಸಾನ್ ಕಾಂಗ್ರೆಸ್ ನ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ ಒತ್ತಾಯಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಪ್ರಕರಣವನ್ನು ಹಳ್ಳ ಹಿಡಿಸಲು ಹಾಗೂ ಅವರನ್ನು ಉಳಿಸಲು ಇನ್ನಿಲ್ಲದ ಪಿತೂರಿಯಲ್ಲಿ ಕಾಲಹರಣ ಮಾಡುತ್ತಿದೆ.

ಕಳೆದ ಭಾನುವಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಮಾಯಕ ರೈತರ ಮೇಲೆ ಏಕಾಏಕಿ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಕಾರು ಹರಿಸಿ ನಡೆಸಿದ ಹತ್ಯಾಕಾಂಡ ಪ್ರಕರಣದಲ್ಲಿ 8 ಮಂದಿ ಸಾವನಪ್ಪಿದ್ದು ಈ ಪ್ರಕರಣದಲ್ಲಿ ಆಶಿಶ್ ಮಿಶ್ರ ಭಾಗಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರು ಸಹ ಅವನನ್ನು ಬಂಧಿಸದೆ ಪ್ರಕರಣವನ್ನು ಮುಚ್ಚಿ ಹಾಕಲು ಇನ್ನಿಲ್ಲದ ಹುನ್ನಾರ ನಡೆಸುತ್ತಿದೆ ಎಂಬ ಅನುಮಾನ ಕಾಡುತ್ತಿದೆ.ಕೇವಲ ದಾಖಲೆಗಾಗಿ ಎಫ್.ಐ.ಆರ್ ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ಆತ ಮನೆಯಲ್ಲಿ ಇಲ್ಲದ ಕಾರಣದ ನೆಪವೊಡ್ಡಿ ಸಮನ್ಸ್ ಅನ್ನು ಆರೋಪಿಯ ಮನೆಗೆ ಅಂಟಿಸಿ ಬಂದಿರುವ ಪೆÇಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸಿದ್ದಾರೆ. ಕೊಲೆ ಆರೋಪಿಯೊಬ್ಬನಿಗೆ ಆಮಂತ್ರಣ ನೀಡಿ ಪೆÇಲೀಸ್ ಅಧಿಕಾರಿಗಳು ಆರೋಪಿ ಬರುವಿಕೆಗಾಗಿ ಕಾದು ಕುಳಿತುಕೊಳ್ಳುವಂತಹ ಪರಿಸ್ಥಿತಿ ಉತ್ತರ ಪ್ರದೇಶದ ಪೆÇಲೀಸರದ್ದಾಗಿದೆ. ಬಹುಶಃ ಇಂಥಾ ಪರಿಸ್ಥಿತಿ ಉಂಟಾಗಿರುವುದು ಇತಿಹಾಸದಲ್ಲಿ ಇದೇ ಮೊದಲಿರಬಹುದು.

ಈ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಯು.ಪಿ ಸರ್ಕಾರಕ್ಕೆ ಆದೇಶ ನೀಡಿತ್ತು ಆದರೆ ಇದಕ್ಕೆ ಸಮಂಜಸ ಸ್ಪಂದನೆ ಸಿಕ್ಕಿಲ್ಲವೆಂದು ಅಸಮಾಧಾನ ಕೂಡ ವ್ಯಕ್ತ ಪಡಿಸಿದ ನಂತರವೂ ಸಹ ಪ್ರಕರಣದ ಕುರಿತು ಯಾವುದೇ ಬೆಳವಣಿಗೆ ನಡೆಯದಿರುವುದು ಕೇಂದ್ರ ಹಾಗೂ ಯು.ಪಿ ಸರ್ಕಾರದ ರೈತ ವಿರೋಧಿ ಧೋರಣೆ ಗಳಿಗೆ ಸಾಕ್ಷಿಯಾಗಿದೆ.

ಈ ದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸಾಮಾನ್ಯ ಜನರು ಕೇಂದ್ರಕ್ಕೆ ಪ್ರಶ್ನಿಸುವ,ಹಾಗೂ ಸರ್ಕಾರದ ವಿರುದ್ಧ ಪ್ರತಿಭಟಿಸುವ ಹಕ್ಕನ್ನೇ ಕಸಿದುಕೊಂಡಿದೆ. ಈ ರೀತಿಯ ಸರ್ವಾಧಿಕಾರಣೆ ಧೋರಣೆ ಹೊಂದಿರುವ ಸರ್ಕಾರವನ್ನು ದೇಶದ ಜನರು ನೋಡುತ್ತಿರುವುದು ಇದೇ ಮೊದಲಾಗಿದೆ. ಕನಿಷ್ಠ ಪಕ್ಷ ಪ್ರಕರಣದ ಕುರಿತಾಗಿ ವಿಷಾದ ವ್ಯಕ್ತಪಡಿಸುವ ಸೌಜನ್ಯವನ್ನು ಸಹ ಹೊಂದಿರದ ಕಟುಕ ಮನಸ್ಸಿನ ಪ್ರಧಾನ ಮಂತ್ರಿ ನಮ್ಮ ದೇಶಕ್ಕೆ ಸಿಕ್ಕಿರುವುದು ದೇಶದ ಜನರ ದುರ್ದೈವವೇ ಸರಿ.ಈ ಪ್ರಕರಣದ ಕುರಿತು ಈಗಾಗಲೇ ದೇಶಾದ್ಯಂತ ಅನೇಕ ಪ್ರತಿಭಟನೆಗಳು ನಡೆಯುತ್ತಿದ್ದು ಪ್ರಕರಣದಿಂದ ಬೇರೆಡೆಗೆ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು
ಕೂಡಲೇ ಕೇಂದ್ರ ಸಚಿವರನ್ನು ವಜಾಗೊಳಿಸಿ ಈ ಹತ್ಯಾಕಾಂಡಕ್ಕೆ ಕಾರಣನಾದ ಸಚಿವರ ಪುತ್ರನನ್ನು ಬಂಧಿಸುವುದಷ್ಟೇ ಅಲ್ಲದೆ ಕಠಿಣ ಶಿಕ್ಷೆ ವಿಧಿಸಬೇಕು,ಹಾಗೂ ರೈತರಲ್ಲಿ ಕ್ಷಮೆಯಾಚಿಸಬೇಕು ಎಂದು ಮೊಹಮ್ಮದ್ ಜಿಕ್ರಿಯಾ ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link