ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ವತಿಯಿಂದ ಸುದ್ದಿಗೋಷ್ಠಿ

ಬೆಂಗಳೂರು:

     2025 ರಿಂದ 2030ರ ಸಾಲಿನಲ್ಲಿ ಪುರೋಹಿತರ ಪರಿಷತಿನ ಯೋಜನೆಗಳನ್ನು ಕುರಿತು ಇಂದು ಸುದ್ದಿಗೋಷ್ಠಿ ನಡೆಸಲಾಯಿತು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ವತಿಯಿಂದ ಸುದ್ದಿಗೋಷ್ಠಿಯಲ್ಲಿ ರಾಜ್ಯದ್ಯಕ್ಷರಾದ ಮಂಜುನಾಥ್ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿಯಾದ ವಿ ಅಶ್ವತ್ ನಾರಾಯಣ್ ಸೇರಿದಂತೆ ಅನೇಕ ಗಣ್ಯರು ಇದ್ದರು.

ಯೋಜನೆಗಳು;
1. 5 ವರ್ಷದಲ್ಲಿ 25 ಸಾವಿರ ಸದಸ್ಯತ್ವವನ್ನು ಸದಸ್ಯತ್ವಕ್ಕೆ ಚಾಲನೆ ನೀಡುವುದು

2. ಪ್ರತಿಯೊಬ್ಬ ಸದಸ್ಯರಿಗೂ ಗುರುತಿನ ಚೀಟಿ ವಿತರಿಸುವುದು

3. ಆರ್ಥಿಕ ಸಂಪನ್ಮೂಲ ಕ್ರೂಡಿಕರಿಸುವುದು (ದಾನಿಗಳ ಸಹಕಾರದಿಂದ)

4. ಬಡಪುರೋಹಿತರ ಹೆಣ್ಣು ಮಕ್ಕಳಿಗೆ ಕಲ್ಯಾಣ ಯೋಜನೆಯಡಿ ಸಹಾಯ ನೀಡುವುದು

5. ವೇದನಿಧಿಗೆ ಸಂಗ್ರಹಿಸುವುದು

6. ಆರೋಗ್ಯ ನಿಧಿ ಸಂಗ್ರಹಿಸುವುದು

7. ಮರಣೋತ್ತರ ನಿಧಿ ನೀಡುವುದು

8. ಆಪದ್ಧನವನ್ನು ಸಂಗ್ರಹಿಸುವುದು

9. ವೇದ ಪಾಠ ಶಾಲೆ ನಡೆಸಲು ಆಧ್ಯತೆ ನೀಡುವುದು

10. ಪ್ರತಿ ವರ್ಷ ಬೇಸಿಗೆ ಶಿಬಿರದ ಮೂಲಕ ಪುರೋಹಿತ ಮಕ್ಕಳಿಗೆ ಉಚಿತ ಸಂದ್ಯಾವಂದನೆ ದೇವತಾ ಅರ್ಚನೆ ಹೇಳಿಕೊಡುವುದು

11. ಅಪರ ಕ್ರಿಯೆ ವಿಷಯದಲ್ಲಿ ಹಿರಿಯ ವಿದ್ವಾಂಸರನ್ನು ಸಂಪರ್ಕಿಸಿ ಎಲ್ಲ ಜಿಲ್ಲೆಯಲ್ಲಿ ಸಮಿತಿ ರಚಿಸುವುದು

12. ಮೊದಲನೆ ದಿನದ ಕಾರ್ಯಕ್ಕೆ ಉಚಿತ ವಾಹನ ವ್ಯವಸ್ಥೆ ಮಾಡುವುದು

13. ಗೋ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡುವುದು

14. ಪರಿಷತ್ತಿಗೆ ಸ್ವಂತ ಕಟ್ಟಡಕಾಗಿ ದಾನಿಗಳ ಸಹಾಯ ಪಡೆಯುವುದು

15. ಪ್ರತಿವರ್ಷ ಬಡ ಪುರೋಹಿತರಿಗೆ ಎಲ್ಲಾ ಜಿಲ್ಲೆಯಿಂದ 70 ಜನ ಸದಸ್ಯರನ್ನು ಉಚಿತವಾಗಿ ಕಾಶಿಯಾತ್ರೆ ಮಾಡಿಸುವುದು

    ಇನ್ನು ಅನೇಕ ರೀತಿಯಾದ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯರೂಪಕ್ಕೆ ತರುವುದು ಪುರೋಹಿತರಿಗೆ ಸಹಕಾರ ನೀಡಲಾಗುವುದೂ ಎಂದು ರಾಜ್ಯದ್ಯಕ್ಷರಾದ ಮಂಜುನಾಥ್ ಶಾಸ್ತ್ರಿ ತಿಳಿಸಿದರು.

Recent Articles

spot_img

Related Stories

Share via
Copy link