ಕಟ್ಟೆಚ್ಚರದಲ್ಲಿರಲು ಅಣ್ವಸ್ತ್ರ ಪಡೆಗಳಿಗೆ ಆದೇಶಿಸಿದ ಪುಟಿನ್: ತುರ್ತು ಸಭೆ ಕರೆದ UNSC

ರಷ್ಯಾ-ಉಕ್ರೇನ್:

ರಷ್ಯಾ-ಉಕ್ರೇನ್ ಯುದ್ಧದ ನಡುವೆ UNSC ಇಂದು ಅಪರೂಪದ ತುರ್ತು ಸಾಮಾನ್ಯ ಸಭೆಯ ಅಧಿವೇಶನವನ್ನು ನಡೆಸಲಿದೆ.

ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಮುಂದುವರೆಸುತ್ತಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪರಮಾಣು ಪಡೆಗಳಿಗೆ ಹೆಚ್ಚಿನ ಜಾಗರೂಕರಾಗಿರಲು ಆದೇಶಿಸುವ ಮೂಲಕ ಉದ್ವಿಗ್ನತೆ ಹೆಚ್ಚಿಸಿದ್ದಾರೆ.

NATO ಮತ್ತು ಕಠಿಣ ಆರ್ಥಿಕ ನಿರ್ಬಂಧಗಳ ಉಲ್ಲೇಖಿಸಿ, ಪುಟಿನ್ ರಷ್ಯಾದ ಪರಮಾಣು ಶಸ್ತ್ರಾಸ್ತ್ರಗಳ ಸನ್ನದ್ಧತೆಯನ್ನು ಹೆಚ್ಚಿಸಲು ನಿರ್ದೇಶನ ನೀಡಿದ್ದಾರೆ, ಉಕ್ರೇನ್ ಆಕ್ರಮಣವು ಪರಮಾಣು ಯುದ್ಧಕ್ಕೆ ಮುಂದುವರೆಯಬಹುದು ಎಂಬ ಭಯವನ್ನು ಹೆಚ್ಚಿಸಿದೆ.

ಹೆಲಿಕಾಪ್ಟರ್‌ಗಳು ಮತ್ತು ಇತರ ವಿಮಾನಗಳನ್ನು ಹೊಡೆದುರುಳಿಸಲು ಸ್ಟಿಂಗರ್ ಕ್ಷಿಪಣಿಗಳು ಸೇರಿದಂತೆ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಿ ತಲುಪಿಸುವುದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಹೇಳಿವೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿಯು ಬೆಲರೂಸಿಯನ್ ಗಡಿಯಲ್ಲಿ ಅನಿರ್ದಿಷ್ಟ ಸ್ಥಳದಲ್ಲಿ ರಷ್ಯಾದ ನಿಯೋಗದೊಂದಿಗೆ ಸಭೆಯ ಯೋಜನೆಯನ್ನು ಪ್ರಕಟಿಸಿದೆ.

ಕೈವ್‌ ನಲ್ಲಿ ಸಂಘರ್ಷ ಮುಂದುವರೆದಿದ್ದು, ಇದರ ನಡುವೆ ಅನೇಕ ಬೆಳವಣಿಗೆ ನಡೆದಿವೆ. ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ ನಲ್ಲಿಯೂ ಕದನ ನಡೆದಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link