ಬೆಂಗಳೂರು
ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ವಿಚಾರಗಳು ಈಗ ಬಯಲಾಗುತ್ತಿವೆ. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರಿಗೆ ಹೂ ಗುಚ್ಛ ನೀಡುವ ನೆಪದಲ್ಲಿ ಇಂಜೆಕ್ಟ್ ಮಾಡಲು ಮುನಿರತ್ನ ಅವರು ಪ್ಲ್ಯಾನ್ ಹಾಕಿಕೊಂಡಿದ್ದರು ಎಂದು ಹೇಳಲಾಗಿದೆ.
ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರ ಹುಟ್ಟು ಹಬ್ಬದ ದಿನದಂದು ಹೂ ಗುಚ್ಛ ನೀಡುವ ನೆಪದಲ್ಲಿ ಇಂಜೆಕ್ಟ್ ಮಾಡಲು ಮುನಿರತ್ನ ಅವರು ಪ್ಲ್ಯಾನ್ ಹಾಕಿಕೊಂಡಿದ್ದರು ಎಂದು ಮುನಿರತ್ನ ಅವರ ಆಪ್ತ ಖಾಸಗಿ ವಾಹಿನಿಯಲ್ಲಿ ಬಹಿರಂಗವಾಗಿ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಒಕ್ಕಲಿಗ ಸಮುದಾಯದ ಹಿರಿಯ ನಾಯಕ ಹಾಗೂ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರಿಗೆ ಹೂ ಗುಚ್ಛ ನೀಡುವ ನೆಪದಲ್ಲಿ ಕೈಗೆ ಗ್ಲೌಸ್ ಹಾಕಿಕೊಂಡು ಅದರಲ್ಲಿ ಬ್ಲೇಡ್ ಅಳವಡಿಸಿದ್ದಂತೆ, ಆ ಗ್ಲೌಸ್ ನಲ್ಲಿ HIV ಸೋಂಕಿತೆಯ ರಕ್ತದ ಟ್ಯೂಬ್ ಅಂಟಿಸಿದ್ದರುಸ್ಟೋಕಟ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬೆಚ್ಚಿ ಬಿದಿದ್ದಾರೆ.
ಈ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಶಾಸಕ ಮುನಿರತ್ನ ಅವರನ್ನ ನಾವ್ಯಾರೂ ಬೆಂಬಲಿಸಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಈ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ತನಿಖೆ ಮಾಡಿದಾಗ ಸತ್ಯಾಸತ್ಯೆತೆ ಹೊರಬರುತ್ತದೆ. ಆದರೆ, ಈ ತರಹ ಘಟನೆ ರಾಜಕೀಯದಲ್ಲಿ ನಡೆದರೇ ರಾಜಕೀಯದಲ್ಲಿ ಯಾವ ರಾಜಕಾರಣಿಯೂ ಬದುಕುವುದಕ್ಕೆ ಆಗುವುದಿಲ್ಲ. ಯಾವ ಮಂತ್ರಿಯೂ ಕೆಲಸ ಮಾಡಲು ಆಗಲ್ಲ. ಜನರನ್ನ ಹೇಗೆ ನಂಬುವುದು. ಜನರ ಹತ್ತಿರ ನಾವು ಹೋಗಲಿಲ್ಲ ಅಂದ್ರೆ, ಜನ ನಮ್ಮನ್ನ ದೂರ ಮಾಡುತ್ತಾರೆ ಎಂದು ಆರ್ ಅಶೋಕ್ ಬೆಚ್ಚಿಬಿದ್ದಿದ್ದಾರೆ.
ಇನ್ನು ನನಗೆ ಮಾತ್ರವಲ್ಲ. ಡಿ ಕೆ ಸುರೇಶ್, ಕುಸುಮಾ ಹನುಮಂತರಾಯಪ್ಪ ಅವರ ಹೆಸರುಗಳು ಸಹ ಕೇಳಿ ಬಂದಿವೆ. ಈ ಬಗ್ಗೆ ತನಿಖೆಯಾಗಲಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದ್ರು, ನಮ್ಮ ಪಕ್ಷಕ್ಕೆ ಮುನಿರತ್ನ ಅವರು ಬಂದು ಐದು ವರ್ಷವಾಗಿದೆ. ಕಾಂಗ್ರೆಸ್ ನಲ್ಲಿ 30 ವರ್ಷಗಳ ಇದ್ದರು. ನಾವು ಮಂತ್ರಿಗಳಾಗಿ, ಶಾಸಕರಾಗಿ ಕೆಲಸ ಮಾಡಲು ಭಯ ಆಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಈ ಬಗ್ಗೆ ಸರ್ಕಾರ ಹಾಗೂ ಗೃಹ ಸಚಿವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ನೋಡುತ್ತೇನೆ ಎಂದು ಆರ್ ಅಶೋಕ್ ತಿಳಿಸಿದರು.
ಮುನಿರತ್ನ ವಿರುದ್ಧ ರಾಜ್ಯ ಬಿಜೆಪಿಯಿಂದ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಪಕ್ಷದಿಂದ ಮುನಿರತ್ನ ಅವರಿಗೆ ನೋಟೀಸ್ ನೀಡಲಾಗಿದೆ. ಅವರು ಜೈಲಿನಲ್ಲಿದ್ದಾರೆ. ಸರ್ಕಾರ ತನಿಖೆ ಮಾಡಬೇಕು. ಪೊಲೀಸ್ ಇಲಾಖೆ ಸತ್ಯನಾ ಅಥವಾ ಸುಳ್ಳಾ ಎಂಬ ತನಿಖೆಯ ಮೇಲೆ ನಮ್ಮ ಪಾರ್ಟಿ ಕ್ರಮ ಕೈಗೊಳ್ಳುತ್ತದೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ಬಂದಿದೆ ಎಂದು ತಿಳಿಸಿದ್ದಾರೆ.
ಅತ್ಯಾಚಾರದ ವಿಚಾರ ನಮ್ಮ ಹೈಕಮಾಂಡ್ ಗಮನಕ್ಕೆ ಬಂದಿಲ್ಲ. ತನಿಖೆಯಿಂದ ಎಲ್ಲಾ ತಿಳಿದು ಬರಲಿದೆ. ಭಾರತದ ದೇಶದಲ್ಲಿಯೇ ಈ ತರ ಆಗುತ್ತದೆ ಎಂದರೇ ಭಯವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಶ್ ಅವರು ಭಯಬೀತಿಯಿಂದ ಹೇಳಿಕೆ ನೀಡಿದ್ದಾರೆ.