ಸಂಭ್ರಮದಿಂದ ನಡೆದ ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾಮಹೋತ್ಸವ

ಗುಳೇದಗುಡ್ಡ :

   ಪಟ್ಟಣದ ರಾವಜಿವಾಡದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಿಶನ್ ವತಿಯಿಂದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧಾನಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಾಲ್ಕುದಿನಗಳವರಗೆ ಸಂಭ್ರಮದಿಂದ ಆಚರಿಸಲಾಯಿತು.

   ಉತ್ತರಾರಾಧನೆಯ ಮಂಗಳವಾರ ಬೆಳಿಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳ ರಜತ ರಥೋತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು. ರಥವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಈ ಸಂದರ್ಭದಲ್ಲಿ ಪರ್ವತೇಶ ಮಹಿಳಾ ಮಂಡಳಿಯಿಂದ ಭಜನಾ ಪದ, ಸ್ವಸ್ತಿವಾಚನ ನಡೆಯಿತು. ಸಂಜೆ ರಂಗೋಲಿ ಸ್ಪರ್ಧೆ, ದಾಸರ ಪದಗಳ ಸ್ಪರ್ಧೆ ನಡೆಯಿತು. ಬುಧವಾರ ಸತ್ಯನಾರಾಯಣ ಪೂಜೆ ಹಾಗೂ ಭಕ್ತರಿಗೆ ಮಹಾಪ್ರಸಾದ ನಡೆಯಿತು.

   ಈ ಸಂದರ್ಭದಲ್ಲಿ ಅರ್ಚಕರಾದ ದಾಮೋದ ಆಚಾರ್ಯ, ಡಾ.ಸುರೇಶ ಪರ್ವತೀಕರ, ರಮೇಶ ಚಿಲ್ಲಾಪೂರ, ಶ್ರೀಧರ ನರೇಗಲ್ಲ, ಶ್ಯಾಮರಾವ ಪದಕಿ, ತಿಮ್ಮಣ್ಣ ಅಂಬೇಕರ, ವಿನೋದ ಅಂಬೇಕರ, ಸಂಜಯ ಕಾರಕೂನ, ರಮೇಶ ಪರ್ವತೀಕರ, ರಮೇಶ ಪದಕಿ, ರಾಮಚಂದ್ರ ಬಾಪಟ್, ಚಿನ್ನಪ್ಪ ಕರಡಿ, ಡಾ. ವಿ.ಎನ್. ಡಾಣಕಶಿರೂರ, ಮೀನಾಕ್ಷಿ ಅಂಬೇಕರ, ಅಂಜನಾ ಅಂಬೇಕರ, ರಶ್ಮಿ ಪದಕಿ, ಶೃತಿ ಕಾರಕೂನ, ಶೃತಿ ಪರ್ವತೀಕರ, ರತ್ನಾ ಜೋಶಿ, ಗೀತಾ ಕುಲಕರ್ಣಿ, ಪದ್ಮಜಾ ನರೇಗಲ್ಲ ಮತ್ತಿತರರು ಇದ್ದರು.

Recent Articles

spot_img

Related Stories

Share via
Copy link