ನವದೆಹಲಿ:
ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿನ ತಮ್ಮ ಭಾಷಣದಲ್ಲಿ ಹಿಂದೂಗಳೆಂದು ಹೇಳಿಕೊಳ್ಳುವವರು ಹಿಂಸಾಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದು ದೇಶಾದ್ಯಂತ ಚರ್ಚೆಯಾಗುತ್ತಿದೆ. ಒಟಿಟಿಯಲ್ಲಿನ ಸಿನಿಮಾಗಳು, ವೆಬ್ ಸರಣಿಗಳನ್ನು ಪರಿಶೀಲಿಸಲು ‘
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಷಣದ ಅಂಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರಧಾನಿ ಮೋದಿ ಇಡೀ ಹಿಂದೂ ಸಮುದಾಯವನ್ನು ಹಿಂಸಾಚಾರಕ್ಕೆ ತಳುಕುಹಾಕುವುದು ಗಂಭೀರವಾದ ವಿಷಯ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ನಾವು ರಾಹುಲ್ ಗಾಂಧಿ ಅವರ ಇಡೀ ಭಾಷಣವನ್ನು ಗಮನವಿಟ್ಟು ಕೇಳಿದ್ದೇವೆ. ಹಿಂದೂ ಧರ್ಮವು ಹಿಂಸೆಯನ್ನು ತಿರಸ್ಕರಿಸುತ್ತದೆ ಎಂದು ಅವರು ನಿಸ್ಸಂದಿಗ್ಧವಾಗಿ ಒತ್ತಿಹೇಳುತ್ತಾರೆ, ”ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ರಾಹುಲ್ ಗಾಂಧಿ ಭಾಷಣದ ಆಯ್ದ ಪ್ರಸಾರವನ್ನಷ್ಟೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿ ಪ್ರಚಾರ ಮಾಡುತ್ತಿರುವುದನ್ನು ಮಠಾಧೀಶರು ಟೀಕಿಸಿದ್ದಾರೆ. ಸತ್ಯಗಳನ್ನು ತಿರುಚುವವರಿಗೆ ಉತ್ತರದಾಯಿತ್ವವನ್ನು ಅವಿಮುಕ್ತೇಶ್ವರಾನಂದ ಸರಸ್ವತಿ ಒತ್ತಾಯಿಸಿದ್ದಾರೆ.
“ಗಾಂಧಿ ಹೇಳಿಕೆಯ ಆಯ್ದ ತುಣುಕುಗಳನ್ನು ಮಾತ್ರ ಪ್ರಚಾರ ಮಾಡುವುದು ತಪ್ಪುದಾರಿಗೆಳೆಯುವ ಮತ್ತು ಅನೈತಿಕವಾಗಿದೆ” ಎಂದು ಅವರು ಟೀಕಿಸಿದ್ದಾರೆ. ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದೂ ಆಗ್ರಹಿಸಿದ್ದಾರೆ.