ತುಮಕೂರು :-
ಬಂಗಾಳ ಮೂಲದ ಕೂಲಿ ಕಾರ್ಮಿಕನೋರ್ವ ತುಮಕೂರು ನಗರದ ತಿಮ್ಮರಾಜ ನಹಳ್ಳಿ ಸಮೀಪದ ರೈಲ್ವೆ ಕ್ಯಾಂಪ್ ನಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವ ಘಟನೆಯೊಂದು ತುಮಕೂರುವ ಕೋರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಬಂಗಾಳ ಮೂಲದ ಬಿಕ್ರಂ ಆರ್ಡರ್ ಎಂಬುವ 29 ವರ್ಷದ ಸಾಧಾರಣ ಮೈಕಟ್ಟು 5 ಅಡಿ ಎತ್ತರದ ಎಣ್ಣೆಗೆಂಪು ಮೈಬಣ್ಣದ ಬಂಗಾಳಿ ಹಾಗೂ ಹಿಂದಿ ಭಾಷೆ ಮಾತನಾಡಬಲ್ಲ ವ್ಯಕ್ತಿ ತುಮಕೂರು ನ ತಿಮ್ಮರಾಜನಹಳ್ಳಿ ಗ್ರಾಮದ ಸಮೀಪದ ರೈಲ್ವೆ ಕ್ಯಾಂಪ್ ಬಳಿ ಡಿಸೆಂಬರ್ 5ರ ಗುರುವಾರ ಮಧ್ಯಾಹ್ನ 3:00 ಸಂದರ್ಭದಲ್ಲಿ ಕಣ್ಮರೆಯಾದವರು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ, ಈತ ಸ್ವಲ್ಪಮಟ್ಟಿನ ಮಾನಸಿಕ ಅಸ್ವಸ್ಥನಾಗಿದ್ದು ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಸಮೀಪದ ಪೊಲೀಸ್ ಠಾಣೆಗೆ ಅಥವಾ ತುಮಕೂರು ಗ್ರಾಮಾಂತರ ರಕ್ತ ನಿರೀಕ್ಷಕ 9480802931 ಅಥವಾ ಕೋರ ಪೊಲೀಸ್ ಠಾಣೆ 9480802949 ನಂಬರ್ಗೆ ದೂರವಾಣಿ ಕರೆ ಮೂಲಕ ತಿಳಿಸಲು ಕೋರಲಾಗಿದೆ .