ತೆಲಂಗಾಣ:
ಟಾಲಿವುಡ್ ನಟ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ಬಿಡುಗಡೆಗೂ ಮುನ್ನವೇ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಅಮೆರಿಕಾದಲ್ಲಿ ಅದ್ದೂರಿಯಾಗಿ ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮಾಡಲಾಗಿದೆ. ಆ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಈತನಕ ಯಾರೂ ಮಾಡಿರದ ದಾಖಲೆಯನ್ನು ‘ಗೇಮ್ ಚೇಂಜರ್’ ಮಾಡಿದೆ. ವಿಶೇಷ ಏನೆಂದರೆ, ರಾಮ್ ಚರಣ್ ಅವರ ಅಭಿಮಾನಿಗಳು ಕೂಡ ಒಂದು ಹೊಸ ರೆಕಾರ್ಡ್ ಸೃಷ್ಟಿ ಮಾಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ‘ಆರ್‌ಆರ್‌ಆರ್’ ಸಿನಿಮಾದ ನಂತರ ರಾಮ್ ಚರಣ್ ಅಭಿನಯದ ಯಾವುದೇ ಚಿತ್ರ ಬಿಡುಗಡೆ ಆಗಿಲ್ಲ. ಆದ್ದರಿಂದ ಅವರ ಅಭಿಮಾನಿಗಳು ‘ಗೇಮ್ ಚೇಂಜರ್’ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಕಾಲಿವುಡ್ನ ಖ್ಯಾತ ನಿರ್ದೇಶಕ ಶಂಕರ್ ಅವರು ‘ಗೇಮ್ ಚೇಂಜರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಶ್ರೀವೆಂಕಟೇಶ್ವರ ಕ್ರಿಯೇಷನ್ಸ್’ ಹಾಗೂ ‘ಜೀ ಸ್ಟುಡಿಯೋಸ್’ ಬ್ಯಾನರ್ ಮೂಲಕ ದಿಲ್ ರಾಜು ಮತ್ತು ಸಿರಿಶ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ಅವರು ದ್ವಿಪಾತ್ರ ಮಾಡಿದ್ದಾರೆ.
ರಾಮ್ ಚರಣ್ ಜೊತೆ ಕಿಯಾರಾ ಅಡ್ವಾಣಿ, ಅಂಜಲಿ, ಶ್ರೀಕಾಂತ್, ಎಸ್.ಜೆ. ಸೂರ್ಯ, ಸುನಿಲ್, ಸಮುದ್ರಕನಿ, ಜಯರಾಮ್ ಮುಂತಾದ ಕಲಾವಿದರು ‘ಗೇಮ್ ಚೇಂದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಅವರು ಕಥೆ ಬರೆದಿದ್ದಾರೆ. ಎಸ್ಯು ವೆಂಕಟೇಶನ್, ವಿವೇಕ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಹರ್ಷಿತ್ ಅವರು ಈ ಚಿತ್ರದ ಸಹ-ನಿರ್ಮಾಪಕರು. ಸಾಯಿ ಮಾಧವ್ ಬುರ್ರಾ ಅವರು ಸಂಭಾಷಣೆ ಬರೆದಿದ್ದಾರೆ. ಎಸ್. ಥಮನ್ ಅವರ ಸಂಗೀತ ಈ ಚಿತ್ರಕ್ಕಿದೆ. ಎಸ್. ತಿರುನಾವುಕ್ಕರಸು ಛಾಯಾಗ್ರಹಣ ಮಾಡಿದ್ದಾರೆ.








