ಪ್ರಾರ್ಥನೆ, ದಾನ, ಮತ್ತು ಸಹಿಷ್ಣುತೆಯ ರಂಜಾನ್ ಹಬ್ಬ

   ಪ್ರಾಚೀನ ಕಾಲದಿಂದಲೂ ಮನುಷ್ಯ ಸಂಘ ಜೀವಿಯಾಗಿದ್ದಾನೆ. ಮನುಷ್ಯರು ಎಲ್ಲರೊಡನೆ ಬದುಕಿ ಬಾಳುವ ಸಂಸ್ಕøತಿಯನ್ನು ಅವಲಂಬಿಸಿದ್ದಾರೆ. ದೈನಂದಿನ ಕೆಲಸ ಕಾರ್ಯಗಳಿಂದ ಬೇಸತ್ತ ಮನುಷ್ಯನು ವರ್ಷದಲ್ಲಿ ಕೆಲವು ಸಲ ತನ್ನ ಈ ಕೆಲಸಗಳ ಒತ್ತಡಗಳನ್ನು ಬದಿಗೊತ್ತಿ ಸಂತೋಷಪಡುವ, ಹರ್ಷೋಲ್ಲಾಸ ವನ್ನು ಅನುಭವಿಸುವ ಕೆಲವು ದಿನಗಳು ಬರಬೇಕೆಂದು ಒತ್ತಾಯಿಸುವುದು ಪ್ರಕೃತಿ ಸಹಜ. ದೈನಂದಿನ ಏಕತಾನತೆಗೆ ಹಬ್ಬಗಳೆ ಸರಿಯಾದ ಚಿಕಿತ್ಸೆ. ಜಗತ್ತಿನ ಎಲ್ಲಾ ಧರ್ಮೀಯರಲ್ಲೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯವಿದೆ.

ಪಿಎಸ್‌ಐ ನೇಮಕಾತಿ ಅಕ್ರಮ: ರಕ್ತಚಂದನ ದೋಚಿದ್ದವನಿಗೆ 27ನೇ ರ‍್ಯಾಂಕ್

  •  ಉಪವಾಸ ವ್ರತ

ಇಸ್ಲಾಂ ಧರ್ಮದ ರೀತ್ಯ ಎಲ್ಲಾ ಮುಸ್ಲಿಮರಿಗೂ ರಂಜಾನ್ ತಿಂಗಳಲ್ಲಿ ಒಂದು ತಿಂಗಳ ಕಾಲ ಉಪವಾಸ ಆಚರಿಸುವ ಆದೇಶವಿದೆ. ಉಪವಾಸ ಆಚರಿಸುವವರೆಲ್ಲರೂ ಮುಂಜಾನೆ ಉಪಾಹಾರ ಸೇವಿಸಿ ದಿನವಿಡೀ ನೀರು, ಪಾನೀಯಗಳು, ತಿನಿಸುಗಳು ತಿನ್ನದೆ ಸಾಯಂಕಾಲದವರೆಗೂ ಪುಣ್ಯ ಕಾರ್ಯ ಆರಾಧನೆ ಮಾಡುವಲ್ಲಿ ತೊಡಗಿಸಿಕೊಳ್ಳುವುದಲ್ಲದೆ ಉಪವಾಸಿ ಉಪವಾಸವು ಒಂದು ವಿಶಿಷ್ಟ ಆರಾಧನೆ.

ಆದ್ದರಿಂದ ಉಪವಾಸವು ಎಲ್ಲಾ ಸಮುದಾಯಗಳ ಮೇಲೂ ಕಡ್ಡಾಯವಾಗಿತ್ತು. ಉಪವಾಸ ಆಚರಿಸುವವರು ಸುಳ್ಳು, ಕಪಟ, ಮೋಸ, ವಂಚನೆ, ಚಾಡಿ, ಕಳವು ಇತ್ಯಾದಿಗಳಿಂದ ದೂರವಿದ್ದರೆ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗುತ್ತಾರೆ. ಉಪವಾಸ ಕೇವಲ ಹೊಟ್ಟೆಯ ಉಪವಾಸವಲ್ಲ. ಬದಲಿಗೆ, `ಅಂಗಾಂಗದ ಉಪವಾಸ’ ಎಂದು ಕರೆಯಲಾಗುತ್ತದೆ.

ಬಿಜೆಪಿಗೆ ಶಾ ಸಂಚಲನ : ನಾಳೆ ರಾಜ್ಯಕ್ಕೆ ಅಮಿತ್‌ ಶಾ, ಸಿಎಂ ಬೊಮ್ಮಾಯಿ ಜತೆ ಚರ್ಚೆ

ಉಪವಾಸವು ಸಹನೆ ಮತ್ತು ತಾಳ್ಮೆಯ ಪಾಠವನ್ನು ನೀಡುತ್ತದೆ. ಅನುಕಂಪ ಹಾಗೂ ಮಾನವೀಯತೆ ಯನ್ನು ಕಲಿಸುತ್ತದೆ. ಉಪವಾಸ ಆಚರಿಸುವವರು ಕೃತಜ್ಞತೆ, ವಿನಮ್ರತೆ ಹಾಗೂ ದಾಸ್ಯ ಭಾವನೆಯನ್ನು ಕಲಿಯುತ್ತಾರೆ.ಹಸಿವನ್ನು ಅನುಭವಿಸಿದವರಿಗೆ ಮಾತ್ರ ಹಸಿವಿನ ಕಷ್ಟವನ್ನರಿಯಲು ಸಾಧ್ಯ. ರಂಜಾನ್ ತಿಂಗಳಿನಲ್ಲಿ ಅನೇಕರು ಉಪವಾಸ ಆಚರಿಸಿದವರಿಗೆ ಸಾಮೂಹಿಕ ಸೆಹರಿ ಮತ್ತು ಇಫ್ತಾರ್ ಕೂಟಗಳನ್ನು ಮಸೀದಿಗಳು ಮತ್ತು ಮನೆಗಳಲ್ಲಿ ಆಚರಿಸುತ್ತಾರೆ.

        ರಂಜಾನ್ ಶ್ರೇಷ್ಠ ಮಾಸ. ಸಹನೆಯ ತಿಂಗಳಾಗಿದೆ. ಸತ್ಯ, ವಿಶ್ವಾಸೀಯ ಸಮೃದ್ಧಿಯ ತಿಂಗಳಾಗಿದೆ. ಉಪವಾಸದಿಂದ ಆತ್ಮಶುದ್ಧಿಯಾದಂತೆ ದೇಹದ ಶುದ್ಧಿಯೂ ಆಗುತ್ತದೆ. ಆತ್ಮ ನಿಯಂತ್ರಣ, ಆತ್ಮ ಸಂಸ್ಕರಣೆ, ಇಂದ್ರಿಯಗಳ ಮೇಲೆ ಹತೋಟಿ, ಭಾವವಿಕಾರಗಳ ಹತೋಟಿಗಳಿರುತ್ತದೆ. ಜೀವನಾವಶ್ಯಕತೆಗಳನ್ನು ವೈಭವದಿಂದ ಪೂರೈಸುವ ಅಥವಾ ಅವುಗಳ ಕಡೆಗೆ ವೈರಾಗ್ಯ ಬೆಳೆಸಿಕೊಳ್ಳುವುದರ ನಡುವೆ ಸಂತುಲಿತ ರೂಪದಲ್ಲಿ ನ್ಯಾಯ ಮಾರ್ಗದಿಂದ ಅವುಗಳನ್ನು ಪೂರೈಸುವುದು ಉಪವಾಸದ ಶಿಕ್ಷಣವಾಗಿದೆ.

 ರಾಜ್ಯಾಧ್ಯಂತ ಇಂದಿನಿಂದ ಮೂರು ದಿನ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

  • ಜಕಾತ್ (ಕಡ್ಡಾಯ ದಾನ):

ರಂಜಾನ್ ತಿಂಗಳಿನಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವುಳ್ಳವರು ಕಡ್ಡಾಯವಾಗಿ ಅರ್ಹರಿಗೆ ಜಕಾತ್ (ದಾನ) ನೀಡಲೇಬೇಕಾಗಿದೆ. ಧನಿಕರ ಸ್ವತ್ತಿನಲ್ಲಿರುವ ಬಡವರ ಹಕ್ಕಿಗೆ ಜಕಾತ್ ಎಂದು ಕರೆಯುತ್ತಾರೆ. ಜಕಾತ್ ಇಸ್ಲಾಂ ಧರ್ಮದ ಆರ್ಥಿಕ ವ್ಯವಸ್ಥೆಯನ್ನು ಹಾಗೂ ಸಾಮಾಜಿಕ ಹೊಣೆಯನ್ನು ನಮಗೆ ತಿಳಿಸಿಕೊಡುತ್ತದೆ.

ಒಬ್ಬ ಮನುಷ್ಯನು ತಾನು ದುಡಿದ ಐಶ್ವರ್ಯದ ಶೇಕಡ ಎರಡೂವರೆ ಅಷ್ಟು ಭಾಗವನ್ನು ಬಡಬಗ್ಗರಿಗೆ, ದೀನದಲಿತರಿಗೆ, ದರಿದ್ರರಿಗೆ, ವಿಧವೆಯರಿಗೆ ವರ್ಷದಲ್ಲಿ ಒಂದು ಬಾರಿ ದಾನ ಮಾಡಬೇಕು. ದಾನ ಮಾಡಿದಾಗ ನಾನು ಕೊಟ್ಟಿದ್ದೇನೆ ಎಂಬ ಅಹಂಭಾವ ಅವನಿಗೆ ಬರಬಾರದು. ಜೊತೆಗೆ ಅವನು ದುಡಿಯುವ ಐಶ್ವರ್ಯ ಧರ್ಮ ಬದ್ಧವಾಗಿರಬೇಕು.

ಪಿಎಸ್‌ಐ ಪರೀಕ್ಷೆ ಅಕ್ರಮ: ಬೆಂಗಳೂರಿನಲ್ಲಿ 22 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲು

ಹಲಾಲ್ ಆಗಿರಬೇಕು. ಅಲ್ಲಾಹನ ಸೃಷ್ಟಿಯಲ್ಲಿ ಉಳ್ಳವರು ಇದ್ದಾರೆ, ಉಳ್ಳದವರೂ ಇದ್ದಾರೆ. ಇರುವವನು ಇಲ್ಲದವನಿಗೆ ಮಾಡಬೇಕಾದ ಧನ ಸಹಾಯ ಜಕಾತ್ ಮೂಲಕ ನಡೆದು ಹೋಗುತ್ತದೆ. ಜಕಾತ್ ದಾನವಾಗಲಿ, ಭಿಕ್ಷೆಯಾಗಲಿ ಅಲ್ಲ. ಅದು ಬಡವರ ಹಕ್ಕು.ಜಕಾತ್ ಸಮಾಜದ ಎಲ್ಲ ವರ್ಗದ ಜನಗಳಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಮಾನ ಅವಕಾಶ ನೀಡುತ್ತದೆ. ತನ್ಮೂಲಕ ಸೋದರತ್ವ ಭಾವನೆಯನ್ನು ಅವರಲ್ಲಿ ಬಿತ್ತುತ್ತದೆ.

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್‌

  • ಈದುಲ್ ಪಿತರ್ (ರಂಜಾನ್ ಹಬ್ಬ)

ಇಸ್ಲಾಂ ಕ್ಯಾಲೆಂಡರಿನ 9 ನೇ ತಿಂಗಳು ರಂಜಾನ್, ಇಸ್ಲಾಂ ಧರ್ಮದ ಅತಿ ಪ್ರಮುಖವಾದ ಹಬ್ಬವೆಂದರೆ ಈದುಲ್ ಪಿತರ (ರಂಜಾನ್) ಜಗತ್ತಿನ ಮುಸ್ಲಿಮರೆಲ್ಲರೂ ಒಂದು ತಿಂಗಳ ಕಾಲ ಸತತ ಉಪವಾಸ ವ್ರತ ಆಚರಿಸಿದ ನಂತರ “ಶವ್ವಾಲ್’’ ತಿಂಗಳ ಒಂದನೇ ತಾರೀಖಿನಂದು ಆಚರಿಸಲಾಗುವ ಹಬ್ಬವಿದು.

ಒಂದು ತಿಂಗಳ ಪೂರ್ತಿ ಪುಣ್ಯಕಾರ್ಯಗಳು ಮಾಡಿದ ಪ್ರತಿಫಲವಾಗಿ ನಡೆಯುವ ಬಹುಮಾನವು “ರಂಜಾನ್ ಹಬ್ಬ’’. ಈ ಹಬ್ಬದ ಸಮಯದಲ್ಲಿ ನೀಡಲಾಗುವ ದಾನ (ಪಿತ್ರ) ಕ್ಕೆ ಸಂಬಂಧಿಸಿದಂತೆ “ಈದಲ್ ಪಿತರ್’’ ಎಂಬ ಹೆಸರು ಬಂದಿದೆ. ಬಾಲಚಂದ್ರ ದರ್ಶನ ಮಾಡಿ ರಂಜಾನ್ ತಿಂಗಳನ್ನು ಉಲ್ಲಾಸ, ಭಕ್ತಿಯೊಂದಿಗೆ ಆಚರಿಸಲು ಜಗತ್ತಿನ ಮುಸ್ಲಿಮರೆಲ್ಲರೂ ಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಾರೆ.

17ನೇ ದಿನವೂ ಮುಂದುವರಿದ ‘ಕೆಜಿಎಫ್ 2’ ಅಬ್ಬರ; ಯಶ್ ಎದುರು ಮಂಕಾದ ಅಜಯ್​ ದೇವಗನ್, ಟೈಗರ್ ಸಿನಿಮಾ

ರಂಜಾನ್ ತಿಂಗಳಿನಲ್ಲಿ ಆರಾಧನೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಕಡ್ಡಾಯ ನಮಾಜ್‍ನ ಹೊರತಾಗಿ ಐಚ್ಛಿತ ನಮಾಜ್‍ಗಳನ್ನು ಹೆಚ್ಚೆಚ್ಚು ಆಚರಿಸುತ್ತಾರೆ. ತಿಂಗಳು ಪೂರ್ಣ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ.ಎಲ್ಲಾ ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ವ್ರತ ಆಚರಿಸುತ್ತಾರೆ. ರಂಜಾನ್ ಮಾಹೆ ಮುಗಿದ ನಂತರ “ಶವ್ವಾಲ್’’ ತಿಂಗಳ ಬಾಲಚಂದ್ರನ ದರ್ಶನವಾದ ಮಾರನೆಯ ದಿನ ಈದುಲ್ ಪಿತರ್ (ರಂಜಾನ್) ಆಚರಿಸುತ್ತಾರೆ.

ರಕ್ಷಿತ್ ಶೆಟ್ಟಿ ಸಿನಿಮಾ ವೀಕ್ಷಿಸಿ ಶಭಾಸ್ ಎಂದ ರಾಣಾ ದಗ್ಗುಬಾಟಿ

ಅಂದು ಎಲ್ಲರೂ ಉತ್ತಮ ಹೊಸ ಉಡುಪುಗಳನ್ನು ಧರಿಸಿ ತೆರಳಿ ಅಲ್ಲಿ ವಿಶೇಷ ನಮಾಜ್ ಆಚರಿಸಿ, ಸಾರ್ವಜನಿಕರಲ್ಲಿ “ಈದ್ ಮುಬಾರಕ್’’ ಎಂದು ಹೇಳಿ ಎಲ್ಲರಿಗೂ ಶುಭ ಕೋರುತ್ತಾರೆ. ಮುಸ್ಲಿಮರು ಇತರೆ ಧರ್ಮೀಯರಿಗೆ ಶುಭ ಹಾರೈಸುತ್ತಾರೆ ಹಾಗೂ ಅಂದು ಸಹ ಭೋಜನದ ವ್ಯವಸ್ಥೆಯನ್ನು ಹಾಗೂ ಇಡೀ ಮನುಕುಲದ ಕಲ್ಯಾಣ ಮತ್ತು ವಿಶ್ವ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

  • ಭಾರತ ದೇಶದಲ್ಲಿ ರಂಜಾನ್ ಹಬ್ಬದ ಆಚರಣೆ

ಸರ್ವಜನಾಂಗೀಯ ಶಾಂತಿಯ ತೋಟದಂತಿರುವ ನಮ್ಮ ಭಾರತ ದೇಶ ವಿಭಿನ್ನತೆಯಲ್ಲಿ ಏಕತೆಗಾಗಿ ಜಗತ್ತಿನಲ್ಲಿಯೇ ಪ್ರಸಿದ್ಧವಾಗಿದೆ. ಹಿಂದಿನಿಂದಲೂ ಕೂಡ ಮುಸ್ಲಿಂ ಬಾಂಧವರು ದೇಶದ ಇತರೆ ಧರ್ಮೀಯರಲ್ಲಿ ಜೊತೆಗೂಡಿ ಪರಸ್ಪರ “ಈದ್ ಮುಬಾರಕ್’’ ಎಂದು ಶುಭ ಹಾರೈಸಿ, ರಂಜಾನ್ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವ ಸಂಪ್ರದಾಯವಿದೆ. ದೇಶದ ಇತರೆ ಧರ್ಮೀಯರು ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಇಫ್ತಾರ್ ಕೂಟಗಳನ್ನು ಆಯೋಜಿಸುವ ಮತ್ತು ಮುಸ್ಲಿಮರು ಇದೇ ರೀತಿ ಇಫ್ತಾರ್ ಕೂಟ ಹಾಗೂ “ಈದ್ ಮಿಲನ್’’ ಸಮಾರಂಭಗಳನ್ನು ಆಯೋಜಿಸುವ ಸಂಪ್ರದಾಯವಿದೆ.

                                            (ಸಾಂದರ್ಭಿಕ )                                                                                                                                           -ಮನ್ಸೂರ್ ಅಹಮದ್, ಕಾರ್ಯದರ್ಶಿ ಸಿಎಂಎ, ತುಮಕೂರು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link