ಸ್ವಾಮಿ ಜಪಾನಂದಜೀಗೆ ರಮಣಶ್ರೀ ಶರಣ ಪ್ರಶಸ್ತಿ

ಪಾವಗಡ:


  ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಿಂದ ಪ್ರದಾನ

 ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ರಮಣಶ್ರೀ ಶರಣ ಪ್ರಶಸ್ತಿಯನ್ನು ಸ್ವಾಮಿ ಜಪಾನಂದಜೀ ಅವರಿಗೆ ಮಂಗಳವಾರ ರಾಜಧಾನಿ ಬೆಂಗಳೂರಿನ ರಮಣಶ್ರೀ ರಿಚ್ಮಂಡ್ ಹೋಟೆಲ್ ಸಭಾಂಗಣದಲ್ಲಿ ಸಿಎಂ ಬಸವರಾಜಬೊಮ್ಮಾಯಿ ಪ್ರದಾನ ಮಾಡಿದರು.

ಶಿವಶರಣರ ಹಾಗೂ ವಚನ ಸಾಹಿತ್ಯದ ವಿಚಾರಧಾರೆಗಳನ್ನು ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮೂಲಕ ಸ್ವಾಮಿ ಜಪಾನಂದಜೀ ಅವರು ಕಾರ್ಯಾನುಷ್ಟಾನಗೊಳಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಶ್ರೀಗಳಿಗೆ ಪ್ರದಾನ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಷಡಕ್ಷರಿ ತಿಳಿಸಿದರು.

ಈ ಪ್ರಶಸ್ತಿಗೆ ಯಾವುದೇ ರೀತಿಯ ಅರ್ಜಿಗಳನ್ನು, ಶಿಫಾರಸ್ಸುಗಳನ್ನು ಆಹ್ವಾನಿಸದೆ ಕೇವಲ ಹಿರಿಯ ಚೇತನಾಶಕ್ತಿಗಳಿಂದ ಒಡಗೂಡಿರುವ ಸಮಿತಿಯು ಆಯ್ಕೆ ಮಾಡಿದ್ದು, ಹಿರಿಯ, ಸಂಶೋಧನಾಕಾರರಾದ ಗೊ.ರು.ಚನ್ನಬಸಪ್ಪ, ಹಿರಿಯ ಪತ್ರಕರ್ತರಾದ ರವಿ ಹೆಗ್ಗಡೆ, ವಿಶ್ವೇಶ್ವರ ಹೆಗ್ಗಡೆ, ಮನು ಬಳಿಗಾರ್ ರವರನ್ನೊಳಗೊಂಡ ಸಮಿತಿಯು ಸ್ವಾಮೀಜಿಯವರ ಸೇವಾ ಕಾರ್ಯಗಳನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದೆ.

ನೀರಿನ ಬವಣೆ ಚರ್ಚೆ:

ಸ್ವಾಮಿ ಜಪಾನಂದಜಿರವರೊಡನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಭಾಷಿಸುತ್ತಾ, ಪಾವಗಡದ ನೀರಿನ ಬವಣೆಯ ಹಿನ್ನೆಲೆಯಲ್ಲಿ ಪಾವಗಡದಿಂದ ಬೆಂಗಳೂರಿಗೆ ಪಾದಯಾತ್ರೆ (14-2-2012) ನಡೆಸಿದ ಸಂದರ್ಭದಲ್ಲಿ ಸ್ವಾಮೀಜಿಯವರೊಂದಿಗೆ ಅಂದು ನಡೆಸಿದ ಸಮಾಲೋಚನೆಗಳನ್ನು ಮತ್ತು ಘಟನಾವಳಿಗಳನ್ನು ನೆನಪಿಸಿಕೊಂಡು ಈ ಸಂಬಂಧ ಚರ್ಚೆಗೆ ಅವಕಾಶ ನೀಡಬೇಕೆಂದರು. ಸಿಎಂ ಸಹ ಸಮ್ಮತಿಸಿದರು.

ದೀನ ದಲಿತರು ಬಡಜನರಸೇವೆಯೊಂದೇ ಜಂಗಮನಾದವನಿಗೆ ಆತ್ಮತೃಪ್ತಿಯ, ಪರಮಾತ್ಮ ಮೆಚ್ಚುವ ಕಾರ್ಯವಾಗಿದೆ. ರಾಮಕೃಷ್ಣಪರಮಹಂಸರು, ಸ್ವಾಮೀ ವಿವೇಕಾನಂದರು, ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜಕ್ಕೆ ನಿರಂತರ ಶಕ್ತಿ ಕೊಡಿ ಎಂಬುದಷ್ಟೇ ನನ್ನ ಪ್ರಾರ್ಥನೆ.ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನ ನೀಡಿರುವ ಈ ಪ್ರಶಸ್ತಿ ನನ್ನ ಸೇವಾ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.
-ಸ್ವಾಮಿಜಪಾನಂದಜೀ.
ಸ್ವಾಮಿ ಜಪಾನಂದಜೀ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ರಮಣಶ್ರೀ ಶರಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap