ನಿತಿನ್‌ ಸಿನಿಮಾದಿಂದ ಹೊರ ನಡೆದ ರಶ್ಮಿಕಾ ಮಂದಣ್ಣ….!

ಬೆಂಗಳೂರು: 

       ನಟ ನಿತಿನ್ ನಟನೆಯ 32ನೇ ಚಿತ್ರದಿಂದ ರಶ್ಮಿಕಾ ಮಂದಣ್ಣ ಹೊರ ಬಂದಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇದೀಗ ಆ ಸುದ್ದಿ ಪಕ್ಕಾ ಆಗಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡ ಸ್ಪಷ್ಟಪಡಿಸಿದೆ. ನಿತಿನ್ ಹುಟ್ಟುಹಬ್ಬಕ್ಕೆ ಸಿನಿಮಾ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ.

     ಜೊತೆಗೆ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಅನ್ನೋದನ್ನು ಚಿತ್ರತಂಡ ಪರೋಕ್ಷವಾಗಿ ತಿಳಿಸಿದೆ. ಡೇಟ್ಸ್ ಕಾರಣ ನೀಡಿ ನಿತಿನ್ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹೊರಗುಳಿದಿದ್ದಾರೆ. ಸದ್ಯ ಹಿಂದಿ, ತೆಲುಗು ಸಿನಿಮಾಗಳಲ್ಲಿ ಕೊಡಗಿನ ಬೆಡಗಿ ನಟಿಸುತ್ತಿದ್ದಾರೆ. ನಿತಿನ್- ರಶ್ಮಿಕಾ ನಟನೆಯ ‘ಭೀಷ್ಮ’ ಸಿನಿಮಾ ಹಿಟ್ ಆಗಿತ್ತು. ಹಾಗಾಗಿ ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿತ್ತು. ಚಿತ್ರದಲ್ಲಿ ರಶ್ಮಿಕಾ ನಟಿಸೋದು ಕನ್ಫರ್ಮ್ ಆಗಿತ್ತು. ಸಿನಿಮಾ ಮುಹೂರ್ತ ಸಮಾರಂಭದಲ್ಲೂ ರಶ್ಮಿಕಾ ಭಾಗಿ ಆಗಿದ್ದರು. ಇದೀಗ ಸಿನಿಮಾದಿಂದ ಹೊರ ಬಂದಿದ್ದಾರೆ.

    ಕನ್ನಡದ ಮತ್ತೊಬ್ಬ ನಟಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಪವನ್ ಕಲ್ಯಾಣ್, ಮಹೇಶ್ ಬಾಬು ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮ್ ಪೋತಿನೇನಿ, ವಿಜಯ್ ದೇವರಕೊಂಡ, ಬಾಲಕೃಷ್ಣ ಹೀಗೆ ಸ್ಟಾರ್ ನಟರ ಜೊತೆಗೆಲ್ಲಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಿತಿನ್ ಸಿನಿಮಾದಿಂದ ರಶ್ಮಿಕಾ ಹೊರ ಬರುತ್ತಾರೆ ಅಂದಾಗ ಮೊದಲಿಗೆ ಆ ಜಾಗಕ್ಕೆ ಶ್ರೀಲೀಲಾ ಹೆಸರು ಕೇಳಿಬಂದಿತ್ತು. ಇದೀಗ ಅದು ಅಧಿಕೃತವಾಗಿದೆ. 

    ” ನಿತಿನ್ ಮುಂದಿನ ಚಿತ್ರಕ್ಕೆ ‘ಎಕ್ಸ್ಟ್ರಾಡಿನರಿ ಮ್ಯಾನ್’ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಸುಧಾಕರ್ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಕ್ಕಂತಂ ವಂಶಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ನಿತಿನ್ ಖಡಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ ಚಿತ್ರದ ನಾಯಕಿ ಶ್ರೀಲೀಲಾ ಎಂದು ಹೇಳಿದೆ.

     ಅಲ್ಲಿಗೆ ರಶ್ಮಿಕಾ ಚಿತ್ರದಿಂದ ಹೊರಬಂದಿರೋದು ನಿಜ ಅಂದಂತಾಗಿದೆ. ರಶ್ಮಿಕಾ ಸದ್ಯ ಬಾಲಿವುಡ್‌ನ ‘ಅನಿಮಲ್’, ತೆಲುಗಿನ ‘ಪುಷ್ಪ- 2’ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ‘ರೈನ್‌ಬೊ’ ಎನ್ನುವ ತಮಿಳು, ತೆಲುಗು ಮಹಿಳಾ ಪ್ರಧಾನ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಮತ್ತಷ್ಟು ಸಿನಿಮಾಗಳ ಮಾತುಕತೆ ನಡೀತಿದೆ. ಹಾಗಾಗಿ ಬ್ಯುಸಿ ಇರುವುದರಿಂದ ‘ಎಕ್ಸ್ಟ್ರಾಡಿನರಿ ಮ್ಯಾನ್’ ಚಿತ್ರಕ್ಕೆ ಡೇಟ್ಸ್ ಹೊಂದಿಸುವುದು ಕಷ್ಟ ಎಂದಿದ್ದಾರೆ. ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ಈಗ ಶ್ರೀಲೀಲಾ ಪಾಲಾಗುತ್ತಿದೆ. ಹಾಗಾಗಿ ‘ಎಕ್ಸ್ಟ್ರಾಡಿನರಿ ಮ್ಯಾನ್’ ಚಿತ್ರದಿಂದ ರಶ್ಮಿಕಾ ಹೊರ ಬರ್ತಾರೆ ಅಂದಾಗ ಮೊದಲಿಗೆ ಶ್ರೀಲೀಲಾ ಹೆಸರು ಚಾಲ್ತಿಗೆ ಬಂದಿತ್ತು.

     ಡಿಸೆಂಬರ್ 23ಕ್ಕೆ ‘ಎಕ್ಸ್ಟ್ರಾಡಿನರಿ ಮ್ಯಾನ್’ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಹ್ಯಾರಿಸ್ ಜಯರಾಜ್ ಮ್ಯೂಸಿಕ್ ಚಿತ್ರಕ್ಕಿದೆ. ಇನ್ನುಳಿದಂತೆ ‘ಭೀಷ್ಮ’ ಚಿತ್ರಕ್ಕೆ ಕೆಲಸ ಮಾಡಿದ ತಂಡ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ       

Recent Articles

spot_img

Related Stories

Share via
Copy link
Powered by Social Snap