2022 ಹೊಸ ವರ್ಷಕ್ಕೆ ಆರ್ ಬಿಐ ಹೊಸ ನಿಯಮ ಜಾರಿಗೆ

ಮುಂಬೈ :

      2022 ಹೊಸ ವರ್ಷಕ್ಕೆ ಆರ್ ಬಿಐ ಹೊಸ ನಿಯಮ ಜಾರಿಗೆ ತಂದಿದ್ದು, ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳ ಕೆವೈಸಿ ನಿಯಮ ಪಾಲಿಸದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳಿಸುವ ಸಾಧ್ಯತೆ ಇದೆ

        2022 ರ ಜನವರಿ 1 ರಿಂದ ಆರ್ ಬಿಐ ಹೊಸ ನಿಯಮ ಜಾರಿಗೆ ಬರಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು KYC ನಿಯಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕು.

     ಈ ಅವಧಿಯಲ್ಲಿ, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ KYC ವಿವರಗಳನ್ನ ನಿಯಮಿತವಾಗಿ ನವೀಕರಿಸುತ್ವೆ.

KYC ನಿಯಮಗಳಿಗೆ ಅನುಸಾರವಾಗಿರುವ ಬ್ಯಾಂಕ್ ಖಾತೆಯನ್ನ ಹೊಂದಿರುವವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದಾಗ್ಯೂ ಕೆಲವು ಜನರು KYC ಅವಧಿ ಮುಗಿದಿದ್ದು, ಅವ್ರ KYC ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಹೊಸ ವರ್ಷದಿಂದ ಬ್ಯಾಂಕ್ ಖಾತೆ ಕೆಲಸ ಮಾಡದೇ ಇರಬಹುದು. ಯಾಕಂದ್ರೆ, RBI ಈ ಹಿಂದೆ KYC ಬಾಕಿ ಇರುವ ಖಾತೆಗಳನ್ನ ಫ್ರೀಜ್ ಮಾಡದಂತೆ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನಗಳನ್ನ ನೀಡಿದೆ. ಇವು ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತವೆ.

ಬ್ಯಾಂಕ್‌ಗಳು ಮಾತ್ರವಲ್ಲದೇ ಹಣಕಾಸು ಕಂಪನಿಗಳು, ಮ್ಯೂಚುವಲ್ ಫಂಡ್‌ಗಳು, ಬ್ರೋಕಿಂಗ್ ಹೌಸ್‌ಗಳು ಮತ್ತು ಡಿಪಾಸಿಟರಿಗಳು ಎಲ್ಲಾ ಕ್ಷೇತ್ರದ ನಿಯಮಗಳನ್ನ ಅನುಸರಿಸಬೇಕು. ಮನಿ ಲಾಂಡರಿಂಗ್ ವಿರೋಧಿ ಕಾನೂನುಗಳಿಗೆ ಅನುಗುಣವಾಗಿ ಗ್ರಾಹಕರ KYC ನವೀಕರಿಸಬೇಕು. ಈ ಕ್ರಮದಲ್ಲಿ ಕೆವೈಸಿ ಅವಧಿ ಮುಗಿದು ಹೋಗಿರುವ ಬಹಳಷ್ಟು ಗ್ರಾಹಕರು ಇನ್ನೂ ಇದ್ದಾರೆ. ಹಾಗಾಗಿ KYC ನಿಯಮಗಳು ಜಾರಿಗೆ ಬಂದರೆ, ಅದು ಅವರೆಲ್ಲರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಅಂದ್ಹಾಗೆ, ಗ್ರಾಹಕರು, ಹಲವಾರು ರೀತಿಯಲ್ಲಿ ತಮ್ಮ KYC ಪೂರ್ಣಗೊಳಿಸಬಹುದು. ವೀಡಿಯೋ, ಡಿಜಿ ಲಾಕರ್ ಮೂಲಕ ದಾಖಲೆಗಳನ್ನ ಹಂಚಿಕೊಳ್ಳಬೋದು. ಇನ್ನು ನೇರವಾಗಿ ಬ್ಯಾಂಕ್ ಶಾಖೆಗೆ ಹೋಗಿ KYC ಪೂರ್ಣಗೊಳಿಸುವುದು.

ಮೇ 2021ರಲ್ಲಿ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನಗಳನ್ನ ನೀಡಿದ್ದು, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕೆವೈಸಿ ಅಪ್‌ಡೇಟ್ ಗಡುವನ್ನ ಡಿಸೆಂಬರ್ 31ಕ್ಕೆ ವಿಸ್ತರಿಸುತ್ತಿದೆ. ಆದ್ರೆ, ಆ ಆದೇಶಗಳು ಈ ತಿಂಗಳ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿವೆ. ನಂತ್ರ ಬ್ಯಾಂಕ್‌ಗಳು KYC ಅಪೂರ್ಣ ಖಾತೆಗಳನ್ನ ಫ್ರೀಜ್ ಮಾಡಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link