ರಿಯಲ್ ಸ್ಟಾರ್‌ ಉಪೇಂದ್ರಗೆ ಮಾಲಾಶ್ರೀ ಮಗಳು ಜೋಡಿ

ಬೆಂಗಳೂರು:

   ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್‌ ‘ಕಾಟೇರ’ ಸಿನಿ ಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ​ಮೊದಲ ಸಿನಿ ಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ಜೊತೆ ನಟಿಸುವ ಅವಕಾಶ ಆರಾಧನಾಗೆ ಸಿಕ್ಕಿತ್ತು. ಇದೀಗ ಆರಾಧನಾ ರಾಮ್‌ ‘ಕಾಟೇರ’ ಸಿನಿಮಾ ನಂತರ ಬಹುತೇಕ ಒಂದೂವರೇ ವರ್ಷದ ಬಳಿಕ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪ್ಪಿ ಅಭಿನಯದ ‘ನೆಕ್ಸ್ಟ್‌ ಲೆವೆಲ್‌’ ಚಿತ್ರಕ್ಕೆ ಆರಾಧನಾ ರಾಮ್ ನಾಯಕಿಯಾಗಿದ್ದು ಆರಾಧನಾ ಅಭಿಮಾನಿಗಳು ಬಹಳಷ್ಟು ಎಕ್ಸೈಟ್ ಆಗಿದ್ದಾರೆ.

   ಹಿರಿಯ ನಟಿ ಮಾಲಾಶ್ರೀ ಮತ್ತು ದಿವಂಗತ ನಿರ್ಮಾಪಕ ರಾಮು ಅವರ ಮಗಳಾದ ಅರಾಧನಾ, ‘ಕಾಟೇರ’ ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಆರಾಧನಾಗೆ ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಸಿನಿಮಾದಲ್ಲೇ ಗ್ರ್ಯಾಂಡ್ ಎಂಟ್ರಿ ಸಿಕ್ಕಿತ್ತು. ದರ್ಶನ್ ಗೆ ಜೋಡಿ ಯಾಗಿ ನಟಿಸಿದ್ದ ಕಾಟೇರ ಸಿನಿಮಾವು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತು. ಇಲ್ಲಿಂದ ಆರಾಧನಾ ರಾಮ್ ಸಿನಿಮಾ ವೃತ್ತಿ ವೇಗವಾಗಿ ಮುಂದಕ್ಕೆ ಸಾಗುವುದು ಪಕ್ಕಾ ಎನ್ನುವ ನಿರೀಕ್ಷೆಯಿತ್ತು. ಇದೀಗ ರಿಯಲ್ ಸ್ಟಾರ್ ಉಪ್ಪಿ ಅಭಿನಯದ ‘ನೆಕ್ಸ್ಟ್‌ ಲೆವೆಲ್‌’ ಚಿತ್ರಕ್ಕೆ ಆರಾಧನಾ ರಾಮ್ ನಾಯಕಿಯಾಗಿ ನಟಿಸಲಿದ್ದಾರೆ.ಅದರಲ್ಲೂ ಉಪೇಂದ್ರ ಅವರೊಂದಿಗೆ ತೆರೆ ಹಂಚಿ ಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 

   ‘ಕಾಟೇರ’ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಸಿನಿ ಪ್ರಿಯರ ಮನ ಗೆದ್ದ ಆರಾಧನಾ ರಾಮ್ ಅವರು ಈ ಸಿನಿಮಾದಲ್ಲಿ ಬೋಲ್ಡ್ ಹಾಗೂ ಗ್ಲಾಮರಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳ ಲಿದ್ದಾರೆ. ‘ನೆಕ್ಸ್ಟ್ ಲೆವೆಲ್’ ಚಿತ್ರದಲ್ಲಿ ಅರಾಧನಾ ಅವರು ಮುಖ್ಯಮಂತ್ರಿ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ದಲ್ಲಿ ನಮ್ ಏರಿಯಾಲ್ ಒಂದಿನ, ತುಗ್ಲಕ್, ಹುಲಿರಾಯ ಹಾಗೂ ಶಾರ್ದೂಲ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್‌ ಕೌಶಿಕ್‌, ಉಪೇಂದ್ರಗೆ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ‌. ರೋಜ್, ಮಾಸ್ ಲೀಡರ್, ವಿಕ್ಟರಿ-2, ಖಾಕಿ, ಛೂ ಮಂತರ್‌ ಸಿನಿಮಾಗಳನ್ನು ನಿರ್ಮಾಣ ಮಾಡಿರೋ ತರುಣ್‌ ಶಿವಪ್ಪ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ನೆಕ್ಸ್ಟ್‌ ಲೆವೆಲ್‌’ ಸಿನಿಮಾ ಚಿತ್ರೀಕರಣ ನವೆಂಬರ್‌ನಿಂದ ಆರಂಭವಾಗಲಿದೆ

Recent Articles

spot_img

Related Stories

Share via
Copy link