ಧರ್ಮ ಸಂಘರ್ಷ, ಬೆಲೆ ಏರಿಕೆ, ಮೂರನೆ ಮಹಾಯುದ್ಧದ ಕಾರ್ಮೋಡ, ಕೊರೋನಾ ನಾಲ್ಕನೆಯ ಅಲೆಯ ಭೀತಿ ನಡುವೆ ಸ್ಥಿತ ಪ್ರಜ್ಞೆಯ ಹುಡುಕಾಟ

     ಪತ್ರಿಕೆಗಳಲ್ಲಿ, ಮೊದಲನೆಯ ಪುಟ ರಾಜಕೀಯ ಕೆಸರಾಟ – ಭ್ರಷ್ಟಾಚಾರದ ಹಗರಣಗಳು, ಎರಡನೆಯ ಪುಟ ಕೊಲೆ, ಅತ್ಯಾಚಾರ, ವಂಚನೆ, ಮೋಸ, ಕಳ್ಳತನ, ಆತ್ಮಹತ್ಯೆ, ಮೂರನೆಯ ಪುಟ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳು, ಆಕ್ರೋಶ, ದ್ವೇಷ, ಸೌಹಾದರ್ ದಾನ-ಧರ್ಮಗಳು, ಉಚಿತ ಶಿಬಿರಗಳು, ನಾಲ್ಕನೆಯ ಪುಟ ಯುದ್ಧದ ಸಾವು ನೋವುಗಳು,

ಬಲಿಷ್ಠ ನಾಯಕರ ಯುದ್ದೋತ್ಸಾಹಿ ಹೇಳಿಕೆಗಳು, ಒಬ್ಬರಿಗೆ ಇನ್ನೊಬ್ಬರ ಧಮಕಿಗಳು, ಐದನೆಯ ಪುಟದಲ್ಲಿ ಕೆಲವು ಶ್ರೀಮಂತ ಕಂಪನಿಗಳ ಶರವೇಗದ ಲಾಭಗಳಿಕೆ, ಇನ್ನೊಂದಿಷ್ಟು ನಿರುದ್ಯೋಗ, ಹಣದುಬ್ಬರ ಹೆಚ್ಚಳ, ಬೆಲೆ ಏರಿಕೆ, ಆರನೆಯ ಪುಟದಲ್ಲಿ ಮನರಂಜನೆ ಆರ್‍ಆರ್‍ಆರ್, ಜೇಮ್ಸ್, ಭೀಸ್ಟ್, ಕೆಜಿಎಫ್ ಸಿನಿಮಾಗಳ ಹಣದ ಸುರಿಮಳೆ, ಏಳನೆಯ ಪುಟದಲ್ಲಿ ಒಂದಷ್ಟು ಕ್ರೀಡಾ ಚಟುವಟಿಕೆಗಳು.

ಮಂಡ್ಯದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ  ಪ್ರತಿಕ್ರಿಯೆ

ಇನ್ನು ಟಿವಿಯಲ್ಲಿ ಇದರ ಪಡಿಯಚ್ಚು, ಜೊತೆಗೊಂದಿಷ್ಟು ಮಸಾಲೆ.

ಇಂತಹ ಸನ್ನಿವೇಶದಲ್ಲಿ ಏನನ್ನಾದರೂ ಮಾಡುವ ತವಕ. ಆದರೆ ಮಾಡಲಾಗುತ್ತಿಲ್ಲ, ಬಡತನವನ್ನು ಆಕರ್ಷಕವಾಗಿ ಕಣ್ಣೀರಾಗುವಂತೆ ವರ್ಣಿಸಬಲ್ಲೆ, ಭ್ರಷ್ಟತೆಯನ್ನು ಕೋಪ ಉಕ್ಕುವಂತೆ ಚಿತ್ರಿಸಬಲ್ಲೆ, ದೌರ್ಜನ್ಯಗಳನ್ನು ಕೆಂಡಾಮಂಡಲವಾಗುವಂತೆ ಬರೆಯಬಲ್ಲೆ, ವೇಶ್ಯಾವಾಟಿಕೆಯನ್ನು ಮನಮಿಡಿಯುವಂತೆ ಹೇಳಬಲ್ಲೆ, ರೈತರ ಕಷ್ಟ ಕೋಟಲೆಗಳನ್ನು ನಿಮ್ಮ ಮನದಾಳಕ್ಕೆ ಮುಟ್ಟುವಂತೆ ಸೃಷ್ಟಿಸಬಲ್ಲೆ, ಬಾಲಕಾರ್ಮಿಕರ ಸ್ಥಿತಿಯನ್ನು ಮನಕರಗುವಂತೆ ನಿರೂಪಿಸಬಲ್ಲೆ,

ಧರ್ಮಗಳನ್ನು ಕಟು ಮಾತುಗಳಲ್ಲಿ ಖಂಡಿಸಬಲ್ಲೆ, ಜಾತಿಗಳ ಅಸ್ತಿತ್ವವನ್ನು ಅಲ್ಲಗಳೆಯಬಲ್ಲೆ, ಬುದ್ದ, ಬಸವ, ಗಾಂಧಿ, ವಿವೇಕಾನಂದ, ಅಂಬೇಡ್ಕರ್ ಅವರುಗಳನ್ನು ದೇವರಂತೆ ಚಿತ್ರಿಸಬಲ್ಲೆ, ಪ್ರೀತಿ, ಕರುಣೆ, ಸಮಾನತೆ, ಮಾನವೀಯತೆಯ ಶ್ರೇಷ್ಠತೆಯನ್ನು ಸಾರಬಲ್ಲೆ, ನಿಮ್ಮನ್ನು ಮೆಚ್ಚಿಸುವ ಸಿನಿಮಾ ನಿರ್ಮಿಸಬಲ್ಲೆ, ನಿಮ್ಮನ್ನು ರಂಜಿಸುವ ಲೇಖನ ಬರೆಯಬಲ್ಲೆ, ನಿಮ್ಮನ್ನು ನಗಿಸುವ ಸಾಹಿತ್ಯ ರಚಿಸಬಲ್ಲೆ, ನಿಮ್ಮನ್ನು ಅಳಿಸುವ ಕಥೆ, ಕಾದಂಬರಿ ಸೃಷ್ಟಿಸಬಲ್ಲೆ, ನಿಮ್ಮನ್ನು ಭಕ್ತಿಯ ಲೋಕದಲ್ಲಿ ತೇಲಿಸಬಲ್ಲೆ, ನಿಮ್ಮನ್ನು ಮೌಡ್ಯದ ಆಳಕ್ಕೆ ಸೆಳೆಯಬಲ್ಲೆ,

ರಾಜ್ಯದ 75 ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳಲ್ಲಿ ಯೋಗ ಉತ್ಸವ: ಶ್ವಾಸ ಗುರು ವಚನಾನಂದ ಸ್ವಾಮೀಜಿ

ನಿಮ್ಮನ್ನು ಮಹಾನ್ ಬುದ್ದಿವಂತರೆಂದು ನಂಬಿಸಬಲ್ಲೆ, ನಿಮ್ಮನ್ನು ಮಾತಿನ ಮೋಡಿಯಲ್ಲಿ ಬೀಳಿಸಬಲ್ಲೆ..!

ಹೌದು, ಇದನ್ನು ಕೇವಲ ಲೇಖನಿಯಿಂದ ಮಾಡಬಲ್ಲೆ, ಆದರೆ, ನಿಮ್ಮನ್ನು ನಾಗರಿಕರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ, ನಿಮ್ಮನ್ನು ನಿಜವಾದ ಮನುಷ್ಯರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ, ನಿಮ್ಮ ಕಷ್ಟ ಕೋಟಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ, ನನಗೂ ನನ್ನಂತೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ, ಇದೆಲ್ಲಾ ಹೇಳಿದ ನಾನೂ ನಿಮ್ಮೊಳಗೊಬ್ಬನೆ, ನಿಮ್ಮಂತೆ ನನ್ನ ಮನಸ್ಸೂ ಬದಲಾವಣೆಗಾಗಿ ತುಡಿಯುತ್ತಿದೆ, ನಿಮ್ಮೊಂದಿಗೆ ನಾನೂ ಆ ನಿರೀಕ್ಷೆಯಲ್ಲಿ…

ವಿವೇಕಾನಂದ ಎಚ್.ಕೆ.
98440 13068

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap