ಕರ್ನಾಟಕಕ್ಕೆ ಮರು ನಾಮಕರಣ ಮಾಡಿದರೂ ತಪ್ಪಿಲ್ಲ: ಎಂ ಬಿ ಪಾಟೀಲ್‌

ಬೆಂಗಳೂರು: 

    12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಅವರ ಹೆಸರನ್ನು ವಿಜಯಪುರ ಜಿಲ್ಲೆಗೆ ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಇದೆ ಎಂದು ಸಚಿವ ಎಂಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ ಮತ್ತು ಇಡೀ ಕರ್ನಾಟಕ ರಾಜ್ಯವನ್ನು ‘ಬಸವ ನಾಡು’ ಎಂದು ಮರುನಾಮಕರಣ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

    ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆ ಬೆನ್ನಲ್ಲೇ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲರ ಈ ಹೇಳಿಕೆ ಹೊರಬಿದ್ದಿದೆ.

    ‘ಹೊಯ್ಸಳರ ಕಾಲದಲ್ಲಿ ಈ ಪ್ರದೇಶವನ್ನು ವಿಜಯಪುರ ಎಂದು ಕರೆಯಲಾಗುತ್ತಿತ್ತು. ನಂತರ ಆದಿಲ್ ಶಾಹಿ ವಂಶಸ್ಥರ ಆಳ್ವಿಕೆಯಲ್ಲಿ ಬಿಜಾಪುರವಾಗಿ ಮಾರ್ಪಟ್ಟಿತು. ಈ ಹೆಸರನ್ನು ಮತ್ತೆ ವಿಜಯಪುರ ಎಂದು ಬದಲಾಯಿಸಲಾಯಿತು. ಇದೀಗ ಇದನ್ನು ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕೆಂದು ಅನೇಕರು ಒತ್ತಾಯಿಸಿದ್ದಾರೆ. ಈ ಜಿಲ್ಲೆ ಬಸವಣ್ಣನವರ ಜನ್ಮಸ್ಥಳವಾಗಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸುವ ಪಾಟೀಲ್ ಹೇಳಿದರು.

   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆದರೂ, ಹೆಸರು ಬದಲಾವಣೆಯಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು, ಬಿಜಾಪುರ ವಿಜಯಪುರ ಆಯಿತು. ಬಸವೇಶ್ವರ ಆಗಬೇಕಾದರೆ ಬಹಳಷ್ಟು ಕಡೆ ಹೆಸರು ಬದಲಾವಣೆ ಆಗಬೇಕಾಗಿರುವುದರಿಂದ ಸ್ವಲ್ಪ ತೊಂದರೆಯಾಗುತ್ತದೆ. ಇಂತಹ ಆತಂಕಗಳು ಎದ್ದಿವೆ. ನಾನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಮತ್ತು ಸಾಧಕ-ಬಾಧಕಗಳನ್ನು ಪರಿಗಣಿಸಿ ನಂತರ ನಾವು ನಿರ್ಧರಿಸುತ್ತೇವೆ’ ಎಂದು ಹೇಳಿದರು.

   2014ರಲ್ಲಿ ರಾಜಧಾನಿಯನ್ನು ಬೆಂಗಳೂರು ಎಂದು ಬದಲಾಯಿಸುವುದು ಸೇರಿದಂತೆ ಕರ್ನಾಟಕದ 12 ನಗರಗಳ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರವು ಅನುಮೋದನೆ ನೀಡುವುದರೊಂದಿಗೆ, ಬಿಜಾಪುರವನ್ನು ವಿಜಯಪುರ ಎಂದು ಕರೆಯಲಾಯಿತು.

   ‘ಕರ್ನಾಟಕಕ್ಕೆ ‘ಬಸವ ನಾಡು’ ಎಂದು ಮರುನಾಮಕರಣ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಟೀಲ, ‘ಇದು ಸಹಜ, ಅದರಲ್ಲಿ ತಪ್ಪೇನಿದೆ?’ ಜಗತ್ತಿನ ಮೊದಲ ಸಂಸತ್ತು ‘ಅನುಭವ ಮಂಟಪ’ವನ್ನು ಸಮಾಜಕ್ಕೆ ಕೊಟ್ಟವರು ಬಸವಣ್ಣ. ನಮ್ಮ ನಾಡು ‘ಬಸವ ನಾಡು’ ಆಗಬೇಕು ಮತ್ತು ‘ಬಸವ ಸಂಸ್ಕೃತಿ’ಯನ್ನು ಅಳವಡಿಸಿಕೊಳ್ಳಬೇಕು ಎಂದು ನಾವು ಹೇಳುತ್ತಲೇ ಬಂದಿದ್ದೇವೆ’ ಎಂದರು.

    ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ಐಕಾನ್ ಅಥವಾ ನಾಯಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.ಬೆಂಗಳೂರಿನ ಇಡೀ ಮೆಟ್ರೋ ರೈಲು ಜಾಲಕ್ಕೆ ಬಸವೇಶ್ವರರ ಹೆಸರಿಡಬೇಕು ಎಂಬ ಬೇಡಿಕೆಗಳೂ ಇವೆ. ಅದೇ ರೀತಿ ವಿಜಯಪುರ ವಿಮಾನ ನಿಲ್ದಾಣಕ್ಕೂ ಅವರ ಹೆಸರನ್ನಿಡಬೇಕು ಎನ್ನುವ ಒತ್ತಾಯಗಳು ಕೇಳಿಬಂದಿವೆ. ಹೀಗಾಗಿ, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap