ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ : ಪರ ವಿರೋಧ ಚರ್ಚೆ…!

ಬೆಂಗಳೂರು: :

   ಕೊಲೆಯಾದ ರೇಣುಕಾಸ್ವಾಮಿಯವರ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅವರು ಸರ್ಕಾರಕ್ಕೆ ಮನವಿ ಮಾಡಿದ್ದು, ಈ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಕೂಡ ಈ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

    ಇವೆಲ್ಲದರ ನಡುವೆ ಒಂದು ವೇಳೆ ಸರ್ಕಾರಿ ಉದ್ಯೋಗ ನೀಡಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅಮಮಾನ ಅಂಥ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಹಲವು ಮಂದಿ ಕೊಲೆಯಾಗಿದ್ದಾರೆ. ಅದರಲ್ಲೂ ದಲಿತ, ಹಿಂದುಳಿದ ಅನೇಕ ಮಂದಿ ರೇಣುಕಸ್ವಾಮಿಗಿಂತ ಭೀಕರವಾಗಿ ಕೊಲೆಯಾಗಿ ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಇಂತಹ ಸನ್ನಿವೇಶದಲ್ಲಿ ರೇಣುಸ್ವಾಮಿ ಹೆಂಡತಿಗೆ ಸರ್ಕಾರಿ ಉದ್ಯೋಗ ನೀಡುವುದು ಅನ್ಯಾಯಾವಾಗುತ್ತದೆ.

   ಇದಲ್ಲದೇ ಈಗಾಗಲೇ ಕೊಲೆಯಾಗಿ ಸಾವನ್ನಪ್ಪಿರುವ ದಲಿತರು ಸೇರಿದಂಥೆ ಅನೇಕರಿಗೆ ಇನ್ನೂ ಕೂಡ ನ್ಯಾಯ ಅನ್ನೋದು ಮರಿಚೀಕೆಯಾಗಿದೆ. ಮೊದಲು ಅವರಿಗೆ ಸರ್ಕಾರಿ ಕೆಲಸ ನೀಡಬೇಕೇ ಹೊರತು, ರೇಣುಕಸ್ವಾಮಿಗೆ ಅಲ್ಲ ಅಂಥ ಅನೇಕ ಮಂದಿ ವಾದ ಮಾಡುತ್ತಿದ್ದಾರೆ. ಸದ್ಯ ಸರ್ಕಾರಿ ಕೆಲಸ ನೀಡದೇ ಹೋದ್ರು ಒಳ ಗುತ್ತಿಗೆ ನೌಕರಿಯನ್ನು ರೇಣುಕಸ್ವಾಮಿ ಪತ್ನಿಗೆ ನೀಡುವುದು ಬಹುತೇಕ ಖಚಿತವಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಈ ಬಗ್ಗೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸುವುದು ನಿಶ್ಚಿತ ಎನ್ನಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap