ಓಬಿಸಿ ವಿದ್ಯಾರ್ಥಿಗಳ ಹಾಸ್ಟೆಲ್ ಕೊರತೆ ನೀಗಿಸುವಂತೆ ಸಚಿವರಲ್ಲಿ ಮನವಿ

ತುಮಕೂರು

      ಜಿಲ್ಲೆಯ ಹಿಂದುಳಿದ ವರ್ಗಗಳ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ವಿಲ್ಲದೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟ ನಿವಾಸಿಸುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರಿಗೆ ಓಬಿಸಿ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಮಿತಿ ಯಿಂದ ಮನವಿ ಸಲ್ಲಿಸಲಾಯಿತು.

     ಸಮಿತಿ ಪರವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿ ದ ಮುಖಂಡ ಟಿ. ಎನ್. ಮಧುಕರ್ ಅವರು ಉನ್ನತ ಶಿಕ್ಷಣ ಪಡೆಯುವ ಆಸೆ ಹೊತ್ತು ತುಮಕೂರು ವಿವಿ ಸ್ನಾತಕೋತ್ತರ ಕೇಂದ್ರ ಹಾಗೂ ಇತರೆ ಕಾಲೇಜುಗಳ ಪಿಜಿ ಕೋರ್ಸ್ ಗಳಿಗೆ ಪ್ರಸಕ್ತ ಪ್ರವೇಶ ಪಡೆದಿರುವ ಇನ್ನೂರೈವತ್ತಕ್ಕೂ ಅಧಿಕ ಹಿಂದುಳಿದ ವರ್ಗದ ವಿದ್ಯಾರ್ಥಿಗಳು,

    ಹಾಸ್ಟೆಲ್ ಸಿಗದೆ ಓದನ್ನೇ ಸ್ಥಗಿತಗೊಳಿಸುವ ಹಂತ ತಲುಪಿದ್ದಾರೆ. ಈ ರೀತಿ ಯ ಅತಂತ್ರ ತೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕೂಡಲೇ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ಪ್ರತೀ ವರ್ಷ ಎದುರಾಗುತ್ತಿರುವ ಈ ಸಮಸ್ಯೆ ಗೆ ಹೆಚ್ಚು ವರಿ ಹಾಸ್ಟೆಲ್ ಗಳ ಸ್ಥಾಪನೆ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿ ಕೊಡುವಂತೆ ಮನವಿ ಮಾಡಿ ದರು.

    ಮನವಿ ಸ್ವೀಕರಿಸಿದ ಸಚಿವ ರು, ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಕೆ. ಶ್ರೀ ನಿವಾಸ್ ಅವರಿಗೆ ಈ ಕುರಿತು ಪರಿಶೀಲಿಸಿ ಕ್ರಮ ವಹಿಸುವಂತೆ ನಿರ್ದೇಶಿಸಿದರು. ಬಳಕೆ ಯಾಗದ ಹಾಸ್ಟೆಲ್ ಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆಯೂ ಸಚಿವರು ಸಮಿತಿ ಯವರು ಮನವಿ ಆಧರಿಸಿ ಜಿಲ್ಲಾ ಧಿಕಾರಿಗಳಿಗೆ ಸೂಚಿಸಿದರು.

    ಹಿಂದುಳಿದ ವರ್ಗಗಳ ಒಕ್ಕೂಟ ದ ಮುಖಂಡ ರಾದ ಟಿ. ಆರ್. ಆಂಜಿನಪ್ಪ ಧನಿಯಾಕುಮಾರ್ , ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ. ಆರ್. ಸುರೇಶ್, ಸವಿತಾ ಸಮಾಜದ ಜಿಲ್ಲಾ ಧ್ಯಕ್ಷ ಮಂಜೇಶ್ ಗಾಂಧಿ ಇತರ ಮುಖಂಡರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap