ರಿಟರ್ನ್ಸ್ ಫೈಲ್ ಮಾಡಲು ಮಾರ್ಚ್ 31 ಕೊನೆಯ ದಿನ

ತುಮಕೂರು :

  ನಿಮ್ಮ ಟಿಡಿಎಸ್ ಕ್ರೆಡಿಟ್ ಅನ್ನು ಕ್ಲೈಮ್ ಮಾಡುವ ವಿಚಾರದಲ್ಲಿ ಸಮಸ್ಯೆ ಆಗುತ್ತಿದ್ದರೆ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31ರವರೆಗೆ ಕಾಲಾವಕಾಶ ಇದೆ. ನಿಮ್ಮ ಪರಿಷ್ಕೃತ ಟಿಡಿಎಸ್ ಅನ್ನು ಸಲ್ಲಿಸುವಂತೆ ನಿಮ್ಮಿಂದ ಟಿಡಿಎಸ್ ಕಡಿತ ಮಾಡಿದ ಕಂಪನಿ ಅಥವಾ ಬ್ಯಾಂಕ್ ಅಥವಾ ಮತ್ಯಾವುದಾದರೂ ಸಂಸ್ಥೆಗೆ ನೀವು ಮನವಿ ಮಾಡಬೇಕಾಗುತ್ತದೆ. ಆರು ವರ್ಷದ ಬಳಿಕ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುವುದಿಲ್ಲ. 

   ಟಿಡಿಎಸ್ ಎಂದರೆ ಮೂಲದಲ್ಲೇ ಕಡಿತಗೊಳಿಸಲಾಗುವ ತೆರಿಗೆ. ನಿಮ್ಮ ಎಫ್​ಡಿ ಹಣ ಮೆಚ್ಯೂರ್ ಆದಾಗ ಬ್ಯಾಂಕ್​ನವರು ನಿರ್ದಿಷ್ಟ ಟಿಡಿಎಸ್ ಅನ್ನು ಮುರಿದುಕೊಳ್ಳುತ್ತಾರೆ. ಈ ಟಿಡಿಎಸ್ ಹಣದ ಲೆಕ್ಕ ಆದಾಯ ತೆರಿಗೆಗೆ ಹೋಗುತ್ತದೆ. ಹಲವರಿಗೆ ಸಂಬಳ ನೀಡುವಾಗಲೇ ಟಿಡಿಎಸ್ ಮುರಿದುಕೊಂಡಿರಲಾಗುತ್ತದೆ. ಹೀಗೆ ನಿಮ್ಮಿಂದ ಯಾವುದೇ ಟಿಡಿಎಸ್ ಮುರಿದುಕೊಂಡಿದ್ದರೆ ಅದು ನಿಮ್ಮ ಫಾರ್ಮ್ 26ಎಎಸ್ ಅಥವಾ ಎಐಎಸ್​ನಲ್ಲಿ  ನಮೂದಾಗುತ್ತದೆ. 

   ಹೀಗೆ ನಮೂದಾಗಬೇಕಾದರೆ ಟಿಡಿಎಸ್ ಡಿಡಕ್ಟರ್​ಗಳು ಟಿಡಿಎಸ್ ರಿಟರ್ನ್ ಫೈಲ್ ಮಾಡಿರಬೇಕು. ಅದೂ ನಿಮ್ಮ ಪ್ಯಾನ್ ನಂಬರ್ ಇತ್ಯಾದಿ ಎಲ್ಲಾ ಸರಿಯಾದ ಮಾಹಿತಿಯೊಂದಿಗೆ ರಿಟರ್ನ್ ಸಲ್ಲಿಸಿರಬೇಕು. ಸರಿಯಾಗಿ ಸಲ್ಲಿಸದಿದ್ದರೆ ಫಾರ್ಮ್ 26ಎಎಸ್ ಮತ್ತು ಎಐಎಸ್​ನಲ್ಲಿ ನಿಮ್ಮ ಟಿಡಿಎಸ್ ದಾಖಲೆಗಳು ನಮೂದಾಗಿರುವುದಿಲ್ಲ. ನೀವು ಈ ಟಿಡಿಎಸ್ ಅನ್ನು ಕ್ಲೇಮ್ ಮಾಡಲು ಸಾಧ್ಯವಾಗುವುದಿಲ್ಲ.

   ಕಳೆದ ವರ್ಷದ ಬಜೆಟ್​ನಲ್ಲಿ ಸರ್ಕಾರವು ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಕಾಲಮಿತಿ ಹಾಕಿದೆ. ಪರಿಷ್ಕೃತ ಟಿಡಿಎಸ್ ರಿಟರ್ನ್ ಅನ್ನು ಆರು ವರ್ಷದ ಬಳಿಕ ಸಲ್ಲಿಸಲು ಆಗುವುದಿಲ್ಲ. ಟಿಡಿಎಸ್ ಡಿಡಕ್ಟರ್​ಗಳು ಸರಿಯಾಗಿ ಟಿಡಿಎಸ್ ರಿಟರ್ನ್ ಫೈಲ್ ಮಾಡಿರದಿದ್ದರೆ ಅದನ್ನು ಸರಿಪಡಿಸಲು ಮಾರ್ಚ್ 31ರವರೆಗೆ ಕಾಲಾವಕಾಶ ಇರುತ್ತದೆ. ಈ ರೀತಿ ಟಿಡಿಎಸ್ ಡಿಡಕ್ಟರ್​ಗಳು ಮಾಡಿದ ತಪ್ಪಿನಿಂದ 2007-08ರಿಂದ 2018-19ರ ಹಣಕಾಸು ವರ್ಷಕ್ಕೆ ಟಿಡಿಎಸ್ ಕ್ರೆಡಿಟ್ ಅನ್ನು ಕ್ಲೇಮ್ ಮಾಡಲು ಸಾಧ್ಯವಾಗದೇ ಇರುವವರು ಈ ಕಾಲಾವಕಾಶ ಬಳಸಿಕೊಳ್ಳಬಹುದು. ತಮ್ಮ ಟಿಡಿಎಸ್ ಡಿಡಕ್ಟರ್ ಬಳಿ ಹೋಗಿ ಪರಿಷ್ಕೃತ ಟಿಡಿಎಸ್ ರಿಟರ್ನ್ ಸಲ್ಲಿಸಬೇಕೆಂದು ಮನವಿ ಮಾಡಿಕೊಳ್ಳಬಹುದು. 

   ಒಂದು ವೇಳೆ ಬ್ಯಾಂಕ್ ಅಥವಾ ನಿರ್ದಿಷ್ಟ ಟಿಡಿಎಸ್ ಡಿಡಕ್ಟರ್​ಗಳು ನಿಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಆದಾಯ ತೆರಿಗೆ ಇಲಾಖೆ ಬಳಿ ನಿಮ್ಮ ದೂರು ದಾಖಲಿಸಬಹುದು. ಇಲಾಖೆಯೇ ಈ ಸಂಸ್ಥೆಗಳಿಗೆ ನೋಟೀಸ್ ನೀಡುತ್ತದೆ.

Recent Articles

spot_img

Related Stories

Share via
Copy link