ಮುಚ್ಚುವ ಹಂತದಲ್ಲಿದ್ದ ಟೌನ್ ಬ್ಯಾಂಕ್‍ಗೆ ಪುನಶ್ಚೇತನ

ತುರುವೇಕೆರೆ:

ಸದಸ್ಯರು, ಆಡಳಿತ ಮಂಡಳಿಯ ಕಾರ್ಯಕ್ಕೆ ಎಂ.ಟಿ.ಕೃಷ್ಣಪ್ಪ ಮೆಚ್ಚುಗೆ

     ನಗದು ವಹಿವಾಟಿನ ದುರುಪಯೋಗದಿಂದ ಮುಚ್ಚವ ಹಂತಕ್ಕೆ ತಲುಪಿದ್ದ ಪಟ್ಟಣದ ಟೌನ್ ಬ್ಯಾಂಕ್, ಸದಸ್ಯರ ಸಹಕಾರ ಪಡೆದು ಪ್ರಸ್ತುತ 68 ಲಕ್ಷÀ ರೂಪಾಯಿಗಳ ಸಂಗ್ರಹದೊಂದಿಗೆ ಸುಸ್ಥಿತಿಯಲ್ಲಿ ನಡೆಯುತ್ತಿರುವುದಕ್ಕೆ ಬ್ಯಾಂಕ್‍ನ ಅಧ್ಯಕ್ಷ ಟಿ.ಎನ್.ಶಿವರಾಜು ಅವರ ಶ್ರಮ ಅವಿರತವಾದುದು ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ದಿ ಟೌನ್ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಘದ ವಜ್ರ ಮಹೋತ್ಸವ ಸ್ಮಾರಕ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1909 ರಲ್ಲಿ ಹಿಂದಿನ ಆಡಳಿತ ಮಂಡಳಿ ಹಾಗೂ ಬ್ಯಾಂಕ್ ಸಿಬ್ಬಂದಿಯ ಶ್ರಮದಿಂದಾಗಿ ಬ್ಯಾಂಕ್ ಪ್ರಾರಂಭವಾಗಿ 112 ವರ್ಷಗಳಿಂದ ಕೋಟ್ಯಂತರ ರೂಪಾಯಿಗಳ ವ್ಯವಹಾರಗಳನ್ನು ನಡೆಸುತ್ತಾ ಬಂದಿದೆ.

ಅನೇಕ ಏಳು ಬೀಳುಗಳನ್ನು ಕಂಡಿದ್ದು ಇಂದಿಗೂ ಜನರ ವಿಶ್ವಾಸವನ್ನು ಗಳಿಸಿಕೊಂಡು ಕಳೆದ 5 ವರ್ಷಗಳಿಂದ ಬ್ಯಾಂಕ್ ಉತ್ತಮ ಆರ್ಥಿಕ ಸ್ಥಿತಿಯತ್ತ ಸಾಗುತ್ತಿರುವುದಕ್ಕೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ ಅಪಾರವಾದುದು ಎಂದರು.
ಜಿಪಂ ಸದಸ್ಯ ಚೌದ್ರಿರಂಗಪ್ಪ ಮಾತನಾಡಿ, ಯಾವುದೇ ಒಂದು ಸಂಘ ಅಭಿವೃದ್ದಿ ಹೊಂದಬೇಕಾದರೆ ಆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರೆ ಮೂಲ ಕಾರಣ ಕರ್ತರು. ಸದಸ್ಯರು ತಾವು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ ಎಂದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮೂಡಲಗಿರಿಯಪ್ಪ, ಮುಖಂಡ ಉಗ್ರೇಗೌಡ, ಪ.ಪಂ.ಅಧ್ಯಕ್ಷ ಯಜಮಾನ್ ಮಹೇಶ್, ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಟಿ.ಎನ್.ರುದ್ರೇಶ್, ಶಿವಕುಮಾರ್, ನಾಗರಾಜು, ಚಂದ್ರಶೇಖರ್, ಟಿ.ವೈ.ನಾಗರಾಜು, ವಿದ್ಯಾಕೃಷ್ಣ, ಶಾಂತಮ್ಮ, ಗುರುದತ್, ರಂಗನಾಥ್, ವ್ಯವಸ್ಥಾಪಕ ಶರತ್‍ಕುಮಾರ್, ಸಿಬ್ಬಂದಿ ಅರುಣ್‍ಕುಮಾರ್, ಅನಂತ ಸೇರಿದಂತೆ ಇತರೆ ಸದಸ್ಯರುಗಳು ಇದ್ದರು.

ಧೈರ್ಯವಾಗಿ ವ್ಯವಹರಿಸಿ :

ಟೌನ್ ಬ್ಯಾಂಕ್ ಅಧ್ಯಕ್ಷ ಟಿ.ಎನ್.ಶಿವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, 112 ನೇ ವಾರ್ಷಿಕೊತ್ಸವ ಹಾಗೂ ವಜ್ರಮಹೋತ್ಸವ ಕಟ್ಟಡ ಶಂಕು ಸ್ಥಾಪನಾ ಕಾರ್ಯಕ್ರಮವನ್ನು ನಾವಿಂದು ಆಚರಿಸುತ್ತಿದ್ದೇವೆ. ಎಲ್ಲರ ಸಹಕಾರವಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದಕ್ಕೆ ನಾವೆ ಉದಾಹರಣೆಯಾಗಿದ್ದು, ಸಂಘಕ್ಕೆ ಮತ್ತೆ ಮರುಜೀವ ತುಂಬಲಾಗಿದೆ. ಇದೀಗ ಸಂಘ ಅತ್ಯುತ್ತಮವಾಗಿ ಮುನ್ನೆಡೆಯುತ್ತಿದ್ದು ಗ್ರಾಹಕರು ಅಂಜದೆ ಧೈರ್ಯವಾಗಿ ನಮ್ಮ ಬ್ಯಾಂಕ್‍ನಲ್ಲಿ ವ್ಯವಹಾರ ನಡೆಸಬಹುದು ಎಂದು ಮನವಿ ಮಾಡಿದರು.

2014 ರ ಹಿಂದಿನ ಆಡಳಿತ ಮಂಡಳಿಯು ಸರಿಯಾಗಿ ಸಾಲ ವಸೂಲಾತಿ, ಬ್ಯಾಂಕ್ ವ್ಯಾಪ್ತಿಯ ಅಂಗಡಿಗಳಿಂದ ಬಾಡಿಗೆ ಪಡೆಯದ್ದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಬ್ಯಾಂಕ್ ಸೂಪರ್ ಸೀಡ್ ಆಗಿ ಸುಮಾರು 2 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವನ್ನು ಅಂದು ಅನುಭವಿಸಿದ್ದು, ನಂತರ ಶಿವರಾಜು ಅಧ್ಯಕ್ಷರಾದ ಮೇಲೆ ಸಂಘ ಅಭಿವೃದ್ದಿಯತ್ತ ಸಾಗುತ್ತಿದೆ.

-ಎಸ್.ರುದ್ರಪ್ಪ, ಮಾಜಿ ಶಾಸಕರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap