ಬೆಂಗಳೂರು:
ಬೆಂಗಳೂರು 27,000 ಕೋಟಿ ರೂಪಾಯಿ ವೆಚ್ಚದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರೋಡ್) ಕಾಮಗಾರಿಗೆ ಅಗತ್ಯವಾಗಿರವ ಭೂಮಿಗಾಗಿ ಭೂಸ್ವಾಧೀನಾಧಿಕಾರಿಗಳು ರೈತರೊಂದಿಗೆ ಮಾತುಕತೆ ನಡೆಸಿ ವಿವಾದಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದ ದಟ್ಟಣೆ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ 73 ಕಿಮೀ ಪೆರಿಪೆರಲ್ ರಿಂಗ್ ರೋಡ್ ಯೋಜನೆಯನ್ನು 19 ವರ್ಷಗಳ ಹಿಂದೆ ಪ್ರಸ್ತಾಪಿಸಲಾಗಿತ್ತು. ಇದು ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮತ್ತು ವೈಟ್‌ಫೀಲ್ಡ್ ರಸ್ತೆ ಮೂಲಕ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. 67 ಗ್ರಾಮಗಳಲ್ಲಿ ಹರಡಿರುವ ಒಟ್ಟು 2,560 ಎಕರೆ ಭೂಮಿಯನ್ನು ಸುಮಾರು 4,000 ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬಿಡಿಎ ಯೋಜನೆಗಳ ಪರಿಶೀಲನೆ ನಡೆಸಬೇಕಿದ್ದ ಸಚಿವರು ಬಿಡಿಎ ಅಧಿಕಾರಿಗಳನ್ನು ಕಾಯುವಂತೆ ಮಾಡಿದರು. ನಂತರ ಅವರು ಪರಿಶೀಲನೆಗಾಗಿ ಬಿಎಂಆರ್‌ಡಿಎ ಕಚೇರಿಯಲ್ಲಿ ವರದಿ ಮಾಡಲು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
