ರಿಷಬ್‌ ಶೆಟ್ಟಿಯ ಮೂಲ ಹೆಸರು ಏನು ಗೊತ್ತಾ….?

ಬೆಂಗಳೂರು :

   ‘ಕಾಂತಾರ’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಅವಾರ್ಡ್ ದೊರೆತಿದೆ. ಈ ಮೊದಲು ಹಾಕಿದ ಶ್ರಮಕ್ಕೆ ರಿಷಬ್ ಶೆಟ್ಟಿಗೆ ಫಲ ಸಿಕ್ಕಂತೆ ಆಗಿದೆ. ರಿಷಬ್ ಶೆಟ್ಟಿ ಅವರ ಜೀವನ ಈಗ ಸಂಪೂರ್ಣವಾಗಿ ಬದಲಾಗಿದೆ. ರಿಷಬ್ ಶೆಟ್ಟಿ ಜೀವನ ಮೊದಲು ಈ ರೀತಿ ಇರಲಿಲ್ಲ. ಅವರು ಹೆಸರು ಬದಲಿಸಿಕೊಂಡ ಮೇಲೆ ಎಲ್ಲವೂ ಸರಿ ಆಯಿತು ಎಂಬುದು ಅವರ ಅಭಿಪ್ರಾಯ.

   ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್. ಅವರು ಕುಂದಾಪುರದ ಕೆರಾಡಿಯಲ್ಲಿ ಜನಿಸಿದರು. ಅವರು ಸಣ್ಣ ವಯಸ್ಸಿನಲ್ಲೇ ಹೀರೋ ಆಗಬೇಕು ಎಂದು ಕನಸು ಕಂಡರು. ಅವರ ತಂದೆ ಜ್ಯೋತಿಷ್ಯ ಹೇಳುತ್ತಿದ್ದರು. ರಿಷಬ್ ಶೆಟ್ಟಿ ಅವರಿಗೆ  ನಾಟಕಗಳ ಬಗ್ಗೆ ಆಸಕ್ತಿ ಇತ್ತು. ಅದೇ ಸಮಯದಲ್ಲಿ ಸಿನಿಮಾಗಳನ್ನು ನೋಡುವ ಕ್ರೇಜ್ ಬೆಳೆದಿತ್ತು. ಉಪೇಂದ್ರ ಅವರ ಸಿನಿಮಾಗಳನ್ನು ನೋಡಿ ಅವರ ಬಗ್ಗೆ ಕುತೂಹಲ ಮೂಡಿತು.

   ರಿಷಬ್ ಶೆಟ್ಟಿ ಅವರು ಡ್ರೈವಿಂಗ್ ಕೆಲಸ ಮಾಡಿದ್ದರು, ಟೀ ಪುಡಿ ಮಾರಿದ್ದರು, ಸೋಲಾರ್ ಫಿಕ್ಸ್ ಮಾಡಿದ್ದರು. ಒಂದು ದಿನ ಯಾವುದೇ ಕೆಲಸ ಇರಲಿಲ್ಲ. ಆಗ ರಿಷಬ್ ಅವರ ಗೆಳೆಯ ಪ್ರಸಾದ್ ಎಂಬುವವರು ಒಂದು ಐಡಿಯಾ ಕೊಟ್ಟರು. ಅದುವೇ ಹೆಸರು ಬದಲಿಸಿಕೊಳ್ಳುವುದು. ರಿಷಬ್ ಶೆಟ್ಟಿ ಹುಟ್ಟಿದ್ದು ಜುಲೈ 7ರಂದು. ಮುಂಜಾನೆ ಏಳು ಗಂಟೆಗೆ. ಇಲ್ಲಿ ಎಲ್ಲವೂ ಏಳೇ ಇದೆ. ಅದರ ಪ್ರಕಾರ ಹೆಸರು ಬದಲಿಸಿಕೊಳ್ಳುವಂತೆ ಗೆಳೆಯ ಸೂಚನೆ ನೀಡಿದ್ದ.

   ರಿಷಬ್ ಶೆಟ್ಟಿ ಅವರು ತಂದೆಯ ಬಳಿ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಆಗ ರಿಷಬ್ ತಂದೆ R ಇಂದ ಬರುವ ಹೆಸರನ್ನು ಇಟ್ಟುಕೊಳ್ಳುವಂತೆ ಹೇಳಿದ್ದರು. ಆರ್ ಎಂದರೆ ರಾಜ್​ಕುಮಾರ್, ರಜನಿಕಾಂತ್ ಎಂದೆಲ್ಲ ವಿವರಿಸಿದ್ದರು. ಹೆಸರು ಬದಲಿಸಿಕೊಂಡ ಮಾತ್ರಕ್ಕೆ ಏನೂ ಬದಲಾಗುವುದಿಲ್ಲ ಎಂಬುದು ರಿಷಬ್ ಶೆಟ್ಟಿ ಅಭಿಪ್ರಾಯ ಆಗಿತ್ತು.

   ರಿಷಬ್ ಶೆಟ್ಟಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ರಿಕ್ಕಿ’. ಈ ಚಿತ್ರ ಸಾಧಾರಣ ಗೆಲುವು ಕಂಡಿತು. 2016ರಲ್ಲಿ ಈ ಚಿತ್ರ ಬಿಡುಗಡೆ ಆಯಿತು. ‘ಕಿರಿಕ್ ಪಾರ್ಟಿ’ ಕೂಡ ಅದೇ ವರ್ಷ ರಿಲೀಸ್ ಆಗಿ ಭರ್ಜರಿ ಮೆಚ್ಚುಗೆ ಪಡೆಯಿತು. 

   2018ರಲ್ಲಿ ರಿಲೀಸ್ ಆದ ಅವರ ನಿರ್ದೇಶನದ ‘ಸಹಿಪ್ರಾ ಶಾಲೆ ಕಸಾರಗೋಡು’ ಸಿನಿಮಾ ಮೆಚ್ಚುಗೆ ಪಡೆಯಿತು. ನಾಲ್ಕು ವರ್ಷಗಳ ಬಳಿಕ ರಿಲೀಸ್ ಆದ ‘ಕಾಂತಾರ’ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆಯಿತು. ಈ ಚಿತ್ರದ ನಟನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ ಅನ್ನೋದು ವಿಶೇಷ.

 

Recent Articles

spot_img

Related Stories

Share via
Copy link