ರಾಯ್ಪುರ
ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮೈದಾನಕ್ಕಿಳಿಯುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ದೊಡ್ಡ ಮೈಲಿಗಲ್ಲನ್ನು ನಿರ್ಮಿಸಲಿದ್ದಾರೆ. 38 ವರ್ಷದ ರೋಹಿತ್ ಪಂದ್ಯದಲ್ಲಿ 56 ರನ್ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 14ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಅತ್ಯಧಿಕ ರನ್ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಅವರು 664 ಪಂದ್ಯಗಳಿಂದ 34,357 ರನ್ ಬಾರಿಸಿದ್ದಾರೆ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 554* ಪಂದ್ಯಗಳನ್ನಾಡಿ 27,808* ರನ್ ಗಳಿಸಿದ್ದಾರೆ.
ರೋಹಿತ್ ತವರಿನಲ್ಲಿ ತಮ್ಮ ಸಂಖ್ಯೆಗಳಿಗೆ ಸಂಬಂಧಿಸಿದಂತೆ ಮತ್ತೊಂದು ಮೈಲಿಗಲ್ಲು ತಲುಪುತ್ತಿದ್ದಾರೆ. ರೋಹಿತ್ ಪ್ರಸ್ತುತ ತವರಿನಲ್ಲಿ ಏಕದಿನ ಪಂದ್ಯಗಳಲ್ಲಿ 4,924 ರನ್ ಮತ್ತು ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8,991 ರನ್ ಗಳಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗೆ ಆಯಾ ಮೈಲಿಗಲ್ಲುಗಳನ್ನು ತಲುಪಲು 76 ಮತ್ತು 9 ರನ್‌ಗಳು ಬೇಕಾಗಿದೆ. ಬುಧವಾರ ರಾಯ್‌ಪುರದಲ್ಲಿ 14 ರನ್ ಗಳಿಸಿದರೆ ರೋಹಿತ್ ಅವರು ರಾಹುಲ್ ದ್ರಾವಿಡ್ (9,004) ಅವರನ್ನು ಹಿಂದಿಕ್ಕಬಹುದು.
503 ಪಂದ್ಯಗಳ 536 ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿರುವ ರೋಹಿತ್ ಖಾತೆಯಲ್ಲಿ ಒಟ್ಟಾರೆಯಾಗಿ 645 ಸಿಕ್ಸರ್‌ಗಳಿವೆ. ಇನ್ನು 5 ಸಿಕ್ಸರ್ ಸಿಡಿಸಿದರೆ 650ರ ಗಡಿ ದಾಟಿದ ಏಕೈಕ ಬ್ಯಾಟರ್ ಎಂಬ ಶ್ರೇಯ ಅವರದ್ದಾಗಲಿದೆ. ತವರಿನಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ 5,000 ರನ್ ಗಳಿಸಿದ ಸಾಧನೆ ಮಾಡಲು ರೋಹಿತ್‌ಗೆ ಇನ್ನು 76 ರನ್ ಬೇಕಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದರೆ ಈ ದಾಲೆಯನ್ನು ಬರೆಯಬಹುದು.








