ಐತಿಹಾಸಿಕ ಸಾಧನೆ ಮಾಡಿದ ರೋಹಿತ್‌ ಶರ್ಮಾ….!

ನವದೆಹಲಿ :

    ಐಪಿಎಲ್‌ನ 18ನೇ ಸೀಸನ್​ನ ಮೂರನೇ ಪಂದ್ಯ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿರುವ ಮುಂಬೈ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದು, ಇದರೊಂದಿಗೆ ತಮ್ಮ ಖಾತೆಗೆ ಬೇಡವಾದ ದಾಖಲೆಯನ್ನು ಹಾಕಿಕೊಂಡಿದ್ದಾರೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಆರಂಭ ಕಳಪೆಯಾಗಿತ್ತು. ಮೊದಲ ಓವರ್‌ನಲ್ಲೇ ಹಿಟ್‌ಮ್ಯಾನ್ ವಿಕೆಟ್ ಕಳೆದುಕೊಂಡರು. ಅವರು ಖಲೀಲ್ ಅಹ್ಮದ್ ಅವರ ಬೌಲಿಂಗ್‌ನಲ್ಲಿ ಶಿವಂ ದುಬೆ ಅವರಿಗೆ ಕ್ಯಾಚ್ ನೀಡಿದರು. ಇದರೊಂದಿಗೆ, ರೋಹಿತ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಜಂಟಿ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ 18 ಬಾರಿ ಖಾತೆ ತೆರೆಯದೆಯೇ ಔಟ್ ಆಗಿರುವ ರೋಹಿತ್ ಶರ್ಮಾ ಈ ವಿಷಯದಲ್ಲಿ ಅವರು ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಸರಿಗಟ್ಟಿದ್ದಾರೆ.