ಚಾಮರಾಜನಗರ:
ಪ್ರೀತಿಯ ವಿಚಾರದಲ್ಲಿ ಕೆಲವೊಂದು ದೃಶ್ಯಗಳನ್ನು ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದೆವು. ಬೈಕ್ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ರೊಮ್ಯಾನ್ಸ್ ಮಾಡುವುದು ಸಿನಿಮಾಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದವು.ಆದರೆ, ಇಂದಿನ ಕೆಲ ಯುವಕ-ಯುವತಿಯರು ಅದನ್ನು ನಿಜ ಜೀವನದಲ್ಲೂ ಅನುಸರಿಸುತ್ತಿರುವುದಕ್ಕೆ ಈ ಒಂದು ವಿಡಿಯೋ ತಾಜಾ ನಿದರ್ಶನವಾಗಿದೆ.
ಹೌದು, ಪ್ರೇಮಿಗಳಿಬ್ಬರ ಲವ್ವಿ-ಡವ್ವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಬಾಯ್ಫ್ರೆಂಡ್ ಜಾಲಿ ರೈಡ್ ಜತೆಗೆ ರೊಮ್ಯಾನ್ಸ್ ಮಾಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಸಾರ್ವಜನಿಕ ಪ್ರದೇಶ ಎಂಬ ಅರಿವು ಇಲ್ಲದೇ ಬೈಕ್ ಮೇಲೆಯೇ ಪರಸ್ಪರ ಚುಂಬಿಸುವ ಮೂಲಕ ಅಶಿಸ್ತನ್ನು ಮೆರೆದಿದ್ದಾರೆ.
PSI ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ: ಮತ್ತಿಬ್ಬರ ಬಂಧನ, ಬಂಧಿತರ ಸಂಖ್ಯೆ 12ಕ್ಕೇರಿಕೆ
ಕೆಲವೊಂದಕ್ಕೆ ಗೌಪ್ಯತೆ ಎಂಬುದು ಇರುತ್ತದೆ. ಅದನ್ನು ಸಾರ್ವಜನಿಕರ ಎದುರಲ್ಲೇ ಆ ಚೌಕಟ್ಟು ಮೀರುವುದು ಉದ್ಧಟತನದ ಪರಮಾವಧಿಯೇ ಸರಿ. ಜನರು ಹಾಗೂ ವಾಹನಗಳ ಸಂಚಾರವಿದ್ದರೂ ಡೋಂಟ್ ಕೇರ್ ಎನ್ನದ ಪ್ರೇಮಿಗಳಿಬ್ಬರು ಹಾಡ ಹಗಲಿನಲ್ಲೇ ಬೈಕ್ ಮೇಲೆ ಚೆಲ್ಲಾಟ ಆಡಿದ್ದಾರೆ. ಚಲಿಸುವ ಬೈಕ್ ಮೇಲೆಯೇ ಪರಸ್ಪರ ಲಿಪ್ಲಾಕ್ ಮಾಡುವ ಮೂಲಕ ರೊಮ್ಯಾನ್ಸ್ ಮಾಡಿದ್ದಾರೆ. ಈ ದೃಶ್ಯವನ್ನು ಹಿಂಬದಿಯ ಸವಾರರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಪ್ರೇಮಿಗಳ ಈ ಹುಚ್ಚಾಟವನ್ನು ನೋಡಿದ ದಾರಿಹೋಕರು ಮನಸ್ಸಿನಲ್ಲೇ ಬೈದುಕೊಂಡು ತಮ್ಮ ಪಾಡಿಗೆ ಮುಂದೆ ಸಾಗಿದ್ದಾರೆ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಕುರಿತು : ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿಕೆ
ಜನರನ್ನೂ ಲೆಕ್ಕಿಸದೇ ಕಿ.ಮೀಟರ್ಗಟ್ಟಲೇ ಈ ಪ್ರೇಮಿಗಳು ಬೈಕ್ ಮೇಲೆ ಚೆಲ್ಲಾಟ ಆಡಿದ್ದಾರೆ. ಟ್ಯಾಂಕ್ ಮೇಲೆ ಕುಳಿತಿರುವ ಯುವತಿ, ಪ್ರಿಯಕರನನ್ನು ಬಿಗಿದಪ್ಪಿಕೊಂಡು ಸಾಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಪ್ರೇಮಿಗಳ ಈ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
